ಬೆಂಗಳೂರು [ನ.13]: ಕಬ್ಬನ್ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ತೋಟಗಾರಿಕೆ ಇಲಾಖೆ ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿದ್ದು,  ಶ್ವಾನ ಗಳೊಂದಿಗೆ ಕಬ್ಬನ್ ಉದ್ಯಾನವನಕ್ಕೆ ಬರುವವರು ಸ್ವಚ್ಛತಾ ಪರಿಕರಗಳನ್ನು ಹೊತ್ತು ತರಬೇಕಾದ ಪರಿಸ್ಥಿತಿ ಎದುರಾಗಲಿದೆ.

ಉದ್ಯಾನಕ್ಕೆ ಬರುವ ಸಾರ್ವಜನಿಕರು ಮತ್ತು ಪ್ರವಾಸಿಗಳಿಗಾಗಿ ಉದ್ಯಾನವನ್ನು ಸ್ವಚ್ಛವಾಗಿಡಬೇಕು ಎಂಬ ಕಾರಣದಿಂದ ಶ್ವಾನಗಳು ಮಾಡುವ ಗಲೀಜು ಅದರ ಮಾಲಿಕರೇ ಸ್ವಚ್ಛ ಗೊಳಿಸಬೇಕು ಎಂಬ ನಿಯಮ ಜಾರಿ ಮಾಡಲು ನಿರ್ಧರಿದೆ. ಇದನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡ ವಿಧಿಸಲು ಚಿಂತನೆ ನಡೆಸುತ್ತಿದೆ.

ಬೆಂಗಳೂರ ನಗರದ ಸುತ್ತಮುತ್ತಲಿಂದ ಕಬ್ಬನ್ ಉದ್ಯಾನಕ್ಕೆ ಪ್ರತಿ ದಿನ ನೂರಾರು ಜನ ನಾಯಿಗಳನ್ನು ಕರೆ ತರುತ್ತಾರೆ. ಇವುಗಳಿಂದ ಉದ್ಯಾನದಲ್ಲಿ ಜನ ಕೂರುವ ಸ್ಥಳಗಳಲ್ಲಿ ಗಲೀಜು ಮಾಡಿಸುತ್ತಾರೆ. ಪರಿಣಾಮ ಉದ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಹೈಕೋರ್ಟ್ ವಕೀಲರು ಹಾಗೂ ಪ್ರವಾಸಿಗರು ಹಲವು ಬಾರಿ ದೂರುಗಳನ್ನು ನೀಡಿದ್ದಾರೆ. ಅಲ್ಲದೆ, ಉದ್ಯಾನವನಕ್ಕೆ ಸಾಕು ನಾಯಿಗಳಿಗೆ ನಿರ್ಬಂಧ ವಿಧಿಸಬೇಕು ಎಂಬ ಆಗ್ರಹ ಇದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಏಕಾಏಕಿ ನಾಯಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವುದ ಕ್ಕೆ ಸಾಧ್ಯವಿಲ್ಲ. ಆದ್ದರಿಂದ ಈ ನಿಯಮ ಜಾರಿಗೆ ಮುಂದಾಗಿರು ವುದಾಗಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ (ಕಬ್ಬನ್ಪಾರ್ಕ್) ಜಿ.ಕುಸುಮಾ ತಿಳಿಸಿದ್ದಾರೆ.

ಹುಲ್ಲು ಹಾಸಿನ ಮೇಲೆ ಊಟ ಹಾಕುವಂತಿಲ್ಲ: ಕೆಲ ಹೋಟೆಲ್ ಗಳ ಮಾಲಿಕರು ತಮ್ಮಲ್ಲಿ ಉಳಿದಿರುವ ಊಟವನ್ನು ಉದ್ಯಾನದಲ್ಲಿ ತಂದು ಬೀದಿನಾಯಿಗಳಿಗೆ ಸುರಿಯುತ್ತಿದ್ದಾರೆ. ಒಂದು ಸ್ಥಳವನ್ನು ಗುರುತಿಸಿ ನಾಯಿಗಳಿಗೆ ಊಟ ಹಾಕುವುದಕ್ಕೆ ವ್ಯವಸ್ಥೆ ಮಾಡಲಾಗುವುದು. ನಾಯಿಗಳು ತಿಂದು ಉಳಿದ ಆಹಾರದ ತ್ಯಾಜ್ಯವನ್ನು ಹೋಟೆಲ್ ಮಾಲಿಕರೇ ಸ್ವಚ್ಛಗೊಳಿಸಬೇಕು.

ಫೋಟೋ ಶೂಟ್ ನಿಷೇಧ!
ವೃತ್ತಿ ಪರ ಛಾಯಾಗ್ರಾಹಕರು ಮತ್ತು ವಿಡಿಯೋ ಮಾಡುವವರು ಕಬ್ಬನ್ ಉದ್ಯಾನವನದಲ್ಲಿ ಧಾರವಾಹಿ, ಮದುವೆ ಮುನ್ನ ಮತ್ತು ಮದುವೆ ನಂತರ ಫೋಟೋ ಶೂಟ್‌ಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಹೆಚ್ಚು ಪ್ರಖರತೆಯುಳ್ಳ ವಿದ್ಯುತ್ ದೀಪಗಳನ್ನು ಬಳಕೆ ಮಾಡುತ್ತಿದ್ದು, ಉದ್ಯಾನ ದಲ್ಲಿನ ಜೇನು ಗೂಡಿಗೆ ಹಾನಿ ಯಾಗುವ ಸಾಧ್ಯತೆಯಿದೆ. ಹಾಗಾಗಿ ಫೋಟೋ ಶೂಟ್ ಮಾಡುವುದಕ್ಕೆ ಸಂಪೂರ್ಣ ಕಡಿ ವಾಣ ಹಾಕಲು ನಿರ್ಧರಿಸಲಾಗಿದೆ