ಬೆಂಗಳೂರು [ನ.04] : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ 387 ಮಂದಿಗೆ ಬಿಬಿಎಂಪಿ 1.29 ಲಕ್ಷ ರು. ದಂಡ ವಿಧಿಸಿದೆ.

ಕಳೆದ ಸೆಪ್ಟಂಬರ್‌ನಿಂದ ಬಿಬಿಎಂಪಿ 198 ವಾರ್ಡ್‌ಗಳಿಗೆ 232 ಜನ (ನಿವೃತ್ತ ಸೈನಿಕರು) ಮಾರ್ಷಲ್‌ಗಳನ್ನು ಪಾಲಿಕೆ ನೇಮಕ ಮಾಡಿಕೊಂಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಮಾರ್ಷಲ್‌ಗಳ ದಂಡ ಪ್ರಯೋಗ ಆರಂಭಿಸಿದ್ದಾರೆ.

ಸೆಪ್ಟಂಬರ್‌ ಹಾಗೂ ಅಕ್ಟೋಬರ್‌ನ ಅವಧಿಯಲ್ಲಿ ನಗರದ ವಿವಿಧ ರಸ್ತೆ, ಖಾಲಿ ನಿವೇಶನ, ಹಾಳು ಬಿದ್ದ ಕಾಂಪೌಂಡ್‌, ಪಾರ್ಕ್, ಆಟದ ಮೈದಾನ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿ ಸ್ವಚ್ಛತೆ ಹಾಳು ಮಾಡುವವರಿಗೆ ಮಾರ್ಷಲ್‌ಗಳು ಬರೋಬ್ಬರಿ 1.29 ಲಕ್ಷ ರು ದಂಡ ವಿಧಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜತೆಗೆ ರಸ್ತೆ ಬದಿ, ಮೈದಾನ, ಸೇರಿದಂತೆ ಇನ್ನಿತರ ಕಡೆ ಕಸೆ ಎಸೆದವರ ವಿರುದ್ಧ ಸೆ.1ರಿಂದ ಅ.31ವರೆಗೆ ಒಟ್ಟು 2,606 ಪ್ರಕರಣ ದಾಖಲಿಸಿ 10.23 ಲಕ್ಷ ರು. ದಂಡ ವಸೂಲಿ ಮಾಡಿದ್ದಾರೆ. ಇನ್ನು ನಿಷೇಧಿತ ಪ್ಲಾಸ್ಟಿಕ್‌ ಮಾರಾಟಕ್ಕೆ ಸಂಬಂಧಿಸಿದಂತೆ 2,213 ಕೇಸ್‌ ದಾಖಲಿಸಿದ್ದು, 13.15 ಲಕ್ಷ ರು. ದಂಡ ವಿಧಿಸುವುದು ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಒಟ್ಟು 5,206 ಪ್ರಕರಣಗಳನ್ನು ದಾಖಲಿಸಿ ಬರೋಬ್ಬರಿ 26 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ ಎಂದು ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಡಿ. ರಂದೀಪ್‌ ಮಾಹಿತಿ ನೀಡಿದ್ದಾರೆ.

ಪ್ರಕರಣ ಮತ್ತು ದಂಡ ವಿವರ:

ಪ್ರಕರಣ ಸೆ.1ರಿಂದ 30 ದಂಡ ಅ.1ರಿಂದ 31 ದಂಡ

ನಿಷೇಧಿತ ಪ್ಲಾಸ್ಟಿಕ್‌ ಬಳಕೆ 1,449 7,02,250 ರು. 764 6,12,810 ರು.

ಮೂತ್ರ ವಿಸರ್ಜನೆ 295 1,05,480 ರು. 92 24,290 ರು.

ಕಸ ಎಸೆತ 1,092 4,47,325 ರು. 1,514 5,76,010 ರು.

ಒಟ್ಟು 2,836 14,33, 495 ರು. 2,370 12,13,110 ರು.