ಬೆಂಗಳೂರಿಗರೇ ಇನ್ನು ಮುಂದೆ ಪ್ರತಿ ತಿಂಗಳು ಬರಲಿದೆ ಕಸದ ಬಿಲ್ ; ಬಿಬಿಎಂಪಿ ಹೊಸ ರೂಲ್ಸ್!
ಇಷ್ಟು ದಿನ ಬಿಬಿಎಂಪಿ ಕಸ ವಿಲೇವಾರಿ ವಾಹನ ಬರುತ್ತಿದ್ದಂತೆ ಹಸಿ ಕಸ, ಒಣ ಕಸ ವಿಂಗಡಿಸಿ ನೀಡುತ್ತಿದ್ದ ಬೆಂಗಳೂರಿಗರೇ ಇನ್ನು ಮುಂದೆ ಇದರ ಜೊತ ಪ್ರತಿ ತಿಂಗಳು ಬಿಬಿಎಂಪಿಗೆ ಪಾವತಿಯನ್ನೂ ಮಾಡಬೇಕು. ನೀರಿನ ಬಿಲ್, ವಿದ್ಯುತ್ ಬಿಲ್ ಸೇರಿದಂತೆ ಇತರ ಬಿಲ್ ರೀತಿಯಲ್ಲೇ ಇದೀಗ ಬಿಬಿಎಂಪಿ ಕಸದ ಬಿಲ್ ನಿಮಗೆ ನೀಡಲಿದೆ.

ಬೆಂಗಳೂರು(ನ.14) ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಅತೀ ದೊಡ್ಡ ಸಮಸ್ಯೆ. ಹಲವು ನಿಯಮ, ಜಾಗೃತಿ ಕಾರ್ಯಕ್ರಮ ಮಾಡಿದರೂ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಇದೀಗ ಬಿಬಿಎಂಪಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಇಷ್ಟು ದಿನ ಬೆಂಗಳೂರಿಗರು ಹಸಿ ಕಸ, ಒಣ ಕಸ ವಿಂಗಡಿಸಿ ಬಿಬಿಎಂಪಿ ವಾಹನಕ್ಕೆ ನೀಡುತ್ತಿದ್ದರು. ಇನ್ನು ಮುಂದೆ ಇಷ್ಟು ಮಾಡಿದರೆ ಸಾಲದು. ಇದರ ಜೊತೆ ತಿಂಗಳಿಗೆ ಕಸದ ಬಿಲ್ ಕೂಡ ಪಾವತಿ ಮಾಡಬೇಕು. ಈ ಹೊಸ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರದ ಅಂಗೀಕಾರಕ್ಕೆ ಕಳುಹಿಸಿದೆ. ಈ ಮೂಲಕ ಬೆಂಗಳೂರಿನ ಕಸದ ನಿರ್ವಹಣೆ ಅಚ್ಚುಕಟ್ಟಾಗಿ ಮಾಡಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ.
ಬೆಂಗಳೂರಿನ ಕಸದ ಸಮಸ್ಯೆ ನಿವಾರಿಸು ಬಿಬಿಎಂಪಿ ಹೊಸ ಪ್ಲಾನ್ ರೆಡಿ ಮಾಡಿದೆ. ಪ್ರತಿ ಮನೆಗೂ ಕಸದ ಬಿಲ್ ಬರಲಿದೆ. ಪ್ರತಿ ತಿಂಗಳು ಕಸಕ್ಕೆ ಪಾವತಿ ಮಾಡಬೇಕು. ಹೌದು ಕಸದ ಬಿಲ್ಲನ್ನು ಇದೀಗ ತೆರಿಗೆ ಅಡಿಯಲ್ಲಿ ತರಲಾಗುತ್ತಿದೆ. ಅಂದರೆ ಮನೆ ತೆರಿಗೆ, ಆಸ್ತಿ ತೆರಿಗೆ ಅಡಿಯಲ್ಲಿ ಇನ್ನು ಕಸದ ಮೇಲೂ ತೆರಿಗೆ ಬೀಳಲಿದೆ. ನೀವು ಎಷ್ಟು ಕಸ ಉತ್ಪಾದಿಸುತ್ತಿದ್ದೀರಿ ಅನ್ನೋದರ ಮೇಲೆ ನಿಮ್ಮ ತೆರಿಗೆ ನಿರ್ಧಾರವಾಗಲಿದೆ.
ಬೆಂಗಳೂರು ಕಸ ರಾಮನಗರಕ್ಕೆ ವಿಲೇವಾರಿಯಾಗುವ ಆತಂಕ: ಕಸದಿಂದ ವಿದ್ಯುತ್ ಉತ್ಪಾದನೆ?
ನಗರದಲ್ಲಿ ಕಸದ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಅನ್ನೋದು ಇಂದಿನ ಆರೋಪವಲ್ಲ. ಕಸದ ಸಮಸ್ಯೆಯಿಂದ ನಗರದ ಶುಚಿತ್ವ ಹಾಳಾಗುತ್ತಿದೆ ಅನ್ನೋದು ಪದೇ ಪದೇ ಕೇಳಿಬರುತ್ತಿರುವ ಸಮಸ್ಯೆ. ಈ ಸಮಸ್ಯೆಗೆ ಹಣ ಪಾವತಿಯಿಂದ ಮುಕ್ತಿ ನೀಡಲು ಬಿಬಿಎಂಪಿ ಮುಂದಾಗಿದೆ. ಹಣ ಪಾವತಿಯಿಂದ ಜನರು ಕೊಂಚವಾದರೂ ಗಂಭೀರತೆ ಅರಿತುಕೊಳ್ಳಲಿದ್ದಾರೆ. ಇತ್ತ ಈ ಹಣದಿಂದ ಕಸ ವಿಲೇವಾರಿಗೆ ಬಳಕೆ ಮಾಡಿಕೊಂಡು ನಗರದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಬಿಬಿಎಂಪಿ ಪ್ಲಾನ್.
ಈ ಯೋಜನೆ ರೂಪಿಸಿರುವ ಬಿಬಿಎಂಪಿ ಇದೀಗ ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದೆ. ಸರ್ಕಾರದ ಅಂಗೀಕಾರಕ್ಕಾಗಿ ಇದೀಗ ಬಿಬಿಎಂಪಿ ಕಾಯುತ್ತಿದೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದೆ. ಮೂಲಗಳ ಪ್ರಕಾರ ಬಿಬಿಎಂಪಿಯ ಕಸದ ವಿಲೇವಾರಿ ಹೊಸ ನಿಯಮಕ್ಕೆ ಸರ್ಕಾರ ಅಂಗೀಕರ ನೀಡುವ ಸಾಧ್ಯತೆ ಇದೆ.
ಬೆಂಗಳೂರು: ರಸ್ತೆ ಬದಿ ಕಸ ಸುರಿಯುವುದರ ಮೇಲೆ ಬಿಬಿಎಂಪಿ ಸ್ಕ್ವಾಡ್ ನಿಗಾ..!
ಬೆಂಗಳೂರಿನಲ್ಲಿ ಮನೆ ಮನೆಗೆ ಬಿಬಿಎಂಪಿ ವಾಹನ ಬರುತ್ತಿದ್ದರೂ ರಸ್ತೆಯಲ್ಲಿ ಕಸ ಎಸೆಯುವವರ ಸಂಖ್ಯೆ ಕಡಿಮೆ ಏನಿಲ್ಲ. ಇದೀಗ ಬಿಬಿಎಂಪಿ ಪಾವತಿ, ಹಸಿ ಕಸ ಒಣ ಕಸ ವಿಗಂಡನೆ ಉಸಾಬರಿ ಬೇಡ ಎಂದು ಎಲ್ಲೆಂದರಲ್ಲಿ ಕಸ ಬೀಸಾಡುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೇಗಾದರೂ ತಿಂಗಳು ಪಾವತಿ ಮಾಡಬೇಕು, ಹೀಗಾಗಿ ಎಲ್ಲೇ ಎಸೆದರೂ ಪಾವತಿ ಮಾಡಿದ್ದೇವೆ, ಹೆಕ್ಕಿ ಶುಚಿಮಾಡಿ ಅನ್ನೋ ದರ್ಪದ ಉತ್ತರಗಳು ಬಂದರೂ ಅಚ್ಚರಿ ಇಲ್ಲ.