ಬೆಂಗಳೂರು[ನ.4]: ಸ್ನೇಹಿತನ ವಿರುದ್ಧ ದೂರು ನೀಡಲು ಬಂದಿದ್ದ ಅಕ್ರಮ ಬಾಂಗ್ಲಾ ವಲಸಿಗ ಮಹಿಳೆಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧನವಾಗಿರುವ ಕುತೂಹಲಕರ ಘಟನೆ ನಗರದಲ್ಲಿ ನಡೆದಿದೆ.

ಬಂಧಿತ ಮಹಿಳೆಯನ್ನು ಬಾಂಗ್ಲಾದೇಶದ ಕುಲ್ನಾ ರುಕ್ಷ ಮೂಲದ ನೂಪುರ್‌ (23) ಎಂದು ಗುರುತಿಸಲಾಗಿದೆ. ಜ್ಞಾನಭಾರತಿ ಠಾಣೆ ಪೊಲೀಸರು ಇವಳನ್ನು ಬಂಧಿಸಿದ್ದಾರೆ.

ಬಾಂಗ್ಲಾ ವಲಸಿಗರಿಂದ ಬೆಂಗಳೂರಲ್ಲಿ ನಡೀತಿದೆ ವೇಶ್ಯಾವಾಟಿಕೆ ದಂಧೆ!

ಈಕೆ ಮಲ್ಲತ್ತಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು. ನ.1ರಂದು ಮಧ್ಯಾಹ್ನ ಸ್ನೇಹಿತ ಸಾದಿಕ್‌ ಉರ್‌ ರೆಹಮಾನ್‌ ಎಂಬಾತ ಮನೆಗೆ ಬಂದು, ಬಾಗಿಲು ಬಡಿದು ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು. ದೂರು ಪಡೆದ ಪೊಲೀಸರು ಮಹಿಳೆಯ ಗುರುತಿನ ಚೀಟಿ ಕೇಳಿದ್ದರು. ಈ ವೇಳೆ ಮಹಿಳೆ ಬಾಂಗ್ಲಾದೇಶದ ಪ್ರಜೆ ಎಂಬುದು ಪತ್ತೆಯಾಯಿತು. ಮಹಿಳೆ ವೀಸಾ, ಪಾಸ್‌ಪೋರ್ಟ್‌ ಇಲ್ಲದೆ, ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದಳು. ಈಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ದೂರಿನ ಸಂಬಂಧ ಸಾದಿಕ್‌ ಉರ್‌ ರೆಹಮಾನ್‌ನನ್ನು ಕರೆತಂದು ವಿಚಾರಣೆ ನಡೆಸಲಾಗಿದೆ. ಆತ ವೀಸಾ, ಪಾಸ್‌ಪೋರ್ಟ್‌ ಹಾಜರುಪಡಿಸಿದ್ದು, ತನಿಖೆ ನಡೆಸಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಲ್ಲಿ 60 ಬಾಂಗ್ಲಾ ಅಕ್ರಮ ವಲಸಿಗರ ಬಂಧನ