ದೊಡ್ಡ ಹೋಟೆಲ್ ಅದಕ್ಕಿಂತ ಸೂಪರ್ ಹೆಸರು ನೋಡಿ ಆರ್ಡರ್ ಮಾಡಿದ ಬೆಂಗಳೂರಿಗನಿಗೆ ಕೊಟ್ಟಿದ್ದು ಇದು, ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಹೇಳಿದ ತಿಂಡಿ ಬಂದಾಗ ಅಚ್ಚರಿಯಾಗಿತ್ತು.
ಬೆಂಗಳೂರು (ಏ.02) ರೆಸ್ಟೋರೆಂಟ್‌ನಲ್ಲಿ ಮೆನು ನೋಡಿ ಅರೇ ಇದೇನು, ಹೆಸರು ತುಂಬಾ ಇಂಟ್ರೆಸ್ಟಿಂಗ್ ಇದೆ. ತಿನ್ನಬೇಕು ಎಂಬ ಬಯಕೆಯಿಂದ ಆರ್ಡರ್ ಮಾಡಿ ಬಳಿಕ ಆಹಾರ ಬಂದಾಗ ಅಯ್ಯೋ ಇದಾ ಎಂದು ನಿರಾಸೆಗೊಂಡ ಘಟನೆಗಳು ಹಲವು ಬಾರಿ ನಡೆದಿರುತ್ತದೆ. ಇದೀಗ ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ಗೆ ತೆರಳಿದ ವ್ಯಕ್ತಿ ಹೆಸರು ಹಾಗೂ ಅದರ ದುಬಾರಿ ಬೆಲೆ ನೋಡಿ ಆರ್ಡರ್ ಮಾಡಿದ್ದಾನೆ. ಆದರೆ ಆಹಾರ ನೋಡಿ ದಂಗಾಗಿದ್ದಾನೆ. ಹೌದು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಅಷ್ಟಕ್ಕೂ ಈತ ಆರ್ಡರ್ ಮಾಡಿದ್ದು ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್.
ಏನಿದು ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್
ಬೆಂಗಳೂರಿನ ವ್ಯಕ್ತಿ ರೆಸ್ಟೋರೆಂಟ್‌ನ ಮೆನು ಕಾರ್ಡ್ ನೋಡಿದಾಗ ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್ ಹೆಸರು ನೋಡಿ ಕುತೂಹಲಗೊಂಡಿದ್ದಾನೆ. ಇಂದು ಇದೇ ತಿನ್ನಬೇಕು ಎಂದು ಆರ್ಡರ್ ಮಾಡಿದ್ದಾನೆ. ಈ ಆಹಾರದ ಬೆಲೆ ಮೆನು ಕಾರ್ಡ್‌ನಲ್ಲಿ150 ರೂಪಾಯಿ ಎಂದಿತ್ತು. ಬೇಬಿ ಕಾರ್ನ್ ಮಂಚೂರಿ ಸೇರಿದಂತೆ ಹಲವು ತಿನಿಸುಗಳ ಬೆಲೆ ತುಸು ಹೆಚ್ಚಿತ್ತು. 150 ರೂಪಾಯಿ ಒಕೆ, ಜೊತೆಗೆ ಉತ್ತಮ ತಿನಿಸು ಆಗಿರುವ ಸಾಧ್ಯತೆ ಇದೆ ಎಂದು ಆರ್ಡರ್ ಮಾಡಿದ್ದಾನೆ.
ತಿನಿಸು ಬಂದಾಗ ನಿರಾಸೆ
ಕೆಲ ಹೊತ್ತಿನ ಬಳಿಕ ತಿನಿಸು ಬಂದಿದೆ. ಇದನ್ನು ನೋಡಿ ನಗಬೇಕು ಅಳಬೇಕೋ ಎಂದು ಗೊತ್ತಾಗಿಲ್ಲ. ಕಾರಣ ಬೋಟಿ (ಪೈಪ್ ಪಾಪಡ್) ಮೇಲೆ ಸ್ವಲ್ಪ ಮೆಣಸಿನ ಪುಡಿ ಚಿಮುಕಿಸಿ ನೀಡಲಾಗಿತ್ತು. ತಳ್ಳೋ ಗಾಡಿ, ಬೇಕರಿ,ಗ್ರೋಸರಿ ಶಾಪ್ ಸೇರಿದಂತೆ ಹಲವೆಡೆ ಪ್ಯಾಕೆಟ್‌ಗೆ 10 ರೂಪಾಯಿಗೆ ಲಭ್ಯವಿರುವ ಬೋಟಿ ತಿನಿಸನ್ನು 150 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಿನಲ್ಲಾ ಎಂದು ವ್ಯಕ್ತಿ ನಿರಾಸೆಗೊಂಡಿದ್ದಾನೆ. 10 ರೂಪಾಯಿ ಪೈಪ್ ಪಾಪಡ್ಗೆ 150 ರೂಪಾಯಿ ಕೊಟ್ಟಿದ್ದು ಮಾತ್ರವಲ್ಲ, ಇಷ್ಟು ಹೊತ್ತು ಕಾದು ಕುಳಿತು ತಿನ್ನೋ ಹಾಗಾಯಿತ್ತಲ್ಲಾ ಎಂದು ಪಶ್ಚಾತಾಪ ಪಟ್ಟಿದ್ದಾನೆ.
ತನ್ನ ಆರ್ಡರ್ ಹಾಗೂ ತಿನಿಸು ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಬೀದಿ ಬದಿಯಲ್ಲಿ 10 ರೂಪಾಯಿಗೆ ಸಿಗೋ ಪೈಪ್ ಪಾಪಡ್ಗೆ 150 ರೂಪಾಯಿ ಕೊಟ್ಟಿದ್ದೀರಲ್ಲಾ ಬ್ರೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 80, 90ರ ದಶಕದಲ್ಲಿ ಈ ಬೋಟಿ ತಿನಿಸನ್ನು ಕೈಬೆರಳಿಗೆ ಹಾಕಿ ತಿನ್ನುವ ಕಾಲವಿತ್ತು ಎಂದು ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.


