ಬೆಂಗಳೂರು: ಗೂಡ್ಸ್ ಶೆಡ್ ರೋಡ್ ನಾಳೆಯಿಂದ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರಲ್ಲಿ ಸಂತಸ ಸಮಾಧಾನ ಮನೆ ಮಾಡಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು: ಗೂಡ್ಸ್ ಶೆಡ್ ರೋಡ್ ನಾಳೆಯಿಂದ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರಲ್ಲಿ ಸಂತಸ ಸಮಾಧಾನ ಮನೆ ಮಾಡಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಮೂರು ತಿಂಗಳಲ್ಲಿ ಮುಗಿಯಬೇಕಿದ್ದ ಗೂಡ್ಸ್ ಶೆಡ್ ರಸ್ತೆಯ ಕಾಮಗಾರಿ ಕೊನೆಗೂ ಮುಕ್ತಾಯಗೊಂಡಿದ್ದು, ನಾಳೆಯಿಂದ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ.
ಗೂಡ್ಸ್ ಶೆಡ್ ರಸ್ತೆಯೂ (goodshed road) ಮೈಸೂರು ರಸ್ತೆ-ಚಾಮರಾಜಪೇಟೆಯಿಂದ (Chamarajapete) ಕೆಂಪೇಗೌಡ ಬಸ್ ನಿಲ್ದಾಣ (Kempe gowda Busstand) ಸೇರಿದಂತೆ ವಿವಿಧ ಕಡೆ ಪ್ರಮುಖ ರಸ್ತೆಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಈ ಗೂಡ್ಸ್ ಶೆಡ್ ರಸ್ತೆಗೆ 11 ಕೋಟಿ ವೆಚ್ಚದಲ್ಲಿ 1.3 ಕಿಲೋ ಮೀಟರ್ ಉದ್ಧಕ್ಕೆ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಕಾರಣಕ್ಕೆ ಗೂಡ್ಸ್ ಶೆಡ್ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಭಾರಿ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದರು.
ಸ್ಟಾರ್ಟ್ ಅಪ್ ಸಿಟಿ ಆಗಿದ್ದ ಬೆಂಗಳೂರು ಈಗ ಶಟ್‌ಡೌನ್ ಸಿಟಿ: ರಾಮಲಿಂಗಾರೆಡ್ಡಿ
ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಮುಕ್ತವಾಗಲಿದೆ. ಹೀಗಾಗಿ ಮೈಸೂರು (Mysuru) ಕಡೆ, ಚಾಮರಾಜಪೇಟೆ (chamarajapete) , ಬಸವನಗುಡಿ (Basavanagudi) ಸೇರಿದಂತೆ ಗೂಡ್ಸ್ ಶೆಡ್ ರಸ್ತೆ ಕಡೆ ಸಂಚರಿಸುವ ವಾಹನ ಸವಾರರಿಗೆ ನಿಟ್ಟುಸಿರು ಬಿಡುವಂತಾಗಿದೆ. ಬಿಬಿಎಂಪಿ ಅಧಿಕಾರಿಗಳು (BBMP Officer) ಮೂರು ತಿಂಗಳಲ್ಲಿ ಈ ಕಾಮಗಾರಿ ಮುಗಿಸಿ ಕೊಡುವ ಭರವಸೆ ನೀಡಿದ್ದರು.
ಈ ಹಾದಿಯಲ್ಲಿ ಗೂಡ್‌ಶೆಡ್ ರೋಡ್ ಮುಚ್ಚಿದ್ದರಿಂದ ಪ್ರತಿ ದಿನ ಕಚೇರಿಗೆ ಹೋಗೋದು ದೊಡ್ಡ ಸಮಸ್ಯೆಯಾಗಿತ್ತು. ಗಿಜಿಗುಡುವ ಮಾರ್ಕೆಟ್ ದಾರಿಯಲ್ಲಿ ಹೋಗುವುದು ಒಂದು ಸಾಹಸದ ಕೆಲಸವಾಗಿತ್ತು. ಆದರೆ ಈಗ ಗೂಡ್ಸ್ ಶೆಡ್ ರೋಡ್ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಾಗಿದೆ ಎಂದು ಈ ದಾರಿಯಲ್ಲಿ ಪ್ರತಿದಿನ ಪ್ರಯಾಣಿಸುವ ರೇಷ್ಮಾ ಹೇಳಿದ್ದಾರೆ. ಗೂಡ್‌ಶೆಡ್ ರೋಡ್ ರಸ್ತೆ ಸಂಚಾರಕ್ಕೆ ತೆರೆದಿರುವುದರಿಂದ ತುಂಬಾ ಖುಷಿಯಾಗಿದೆ. ಕಚೇರಿಗೆ ಆಗಮಿಸುವ ವೇಳೆ ಇದರಿಂದ ಕನಿಷ್ಠ ಹತ್ತು ನಿಮಿಷವಾದರೂ ಉಳಿಯುತ್ತದೆ ಎಂದು ಈ ಹಾದಿಯಲ್ಲಿ ಸದಾ ಪ್ರಯಾಣಿಸುವ ವೈಷ್ಣವಿ ಅವರು ಹೇಳಿದರು.
ಗುಂಡಿ ಮುಚ್ರೋ..! ಗೂಡ್'ಶೆಡ್ ರಸ್ತೆಯೋ, ಗುಂಡಿ ರಸ್ತೆಯೋ ಆ ದೇವರೇ ಬಲ್ಲ..!
