ಬೆಂಗಳೂರು[ನ.8]: ಬಾರ್ ಗರ್ಲ್‌ಗಳಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಆರೋಪದ ಮೇಲೆ ಆಟೋ ಚಾಲಕನೊಬ್ಬನನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಲ್ಲೇಶ್ವರಂ ನಿವಾಸಿ ಚಂದ್ರು(35) ಎಂದು ಗುರುತಿಸಲಾಗಿದೆ.

ಬಿಟಿಎಂ ಲೇಔಟ್‌ನ ‘ಸೆವೆನ್ ಹಿಲ್ಸ್’ ಅಪಾರ್ಟ್‌ಮೆಂಟ್‌ನ ನಿವಾಸಿಗಳಾದ ಯುವತಿಯರಿಬ್ಬರು ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಮಹಾರಾಷ್ಟ್ರ ಮತ್ತು ದೆಹಲಿ ಮೂಲದ ಯುವತಿಯರು ಶೇಷಾದ್ರಿಪುರಂನಲ್ಲಿರುವ ಸಂಗೀತಾ ಹೋಟೆಲ್‌ನಲ್ಲಿಬಾರ್ ಗರ್ಲ್ಸ್ ಆಗಿದ್ದಾರೆ. ನ.2 ರಂದು ರಾತ್ರಿ 12 ಗಂಟೆ ಸುಮಾರಿಗೆ ಇಬ್ಬರು ಯುವತಿಯರು ಶೇಷಾದ್ರಿಪುರಂನಲ್ಲಿರುವ ಸಂಗೀತಾ ಹೋಟೆಲ್ ಬಳಿ ಆಟೋ ಹತ್ತಿದ್ದು, ಬಿಟಿಎಂ ಲೇಔಟ್‌ಗೆ ಕರೆದೊಯ್ಯುವಂತೆ ಚಾಲಕನಿಗೆ ಹೇಳಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚಾಲಕ ಬಿಟಿಎಂ ಲೇಔಟ್ ಕಡೆಗೆ ಹೋಗದೇ, ಯಶವಂತಪುರದ ಹೂವಿನ ಮಾರ್ಕೆಟ್ ಕಡೆಗೆ ಆಟೋ ತಿರುಗಿಸಿದ್ದ. ಯಶವಂತಪುರ ಕಡೆಗೆ ಹೋಗುವಾಗಲೇ ಸಂತ್ರಸ್ತರು ಆರೋಪಿಯನ್ನು ಪ್ರಶ್ನಿಸಿದ್ದರು. ಬಳಿಕ ಯಶವಂತಪುರದಲ್ಲಿ ಆಟೋ ನಿಲ್ಲಿಸಿದ್ದ ಆರೋಪಿ ಉದ್ದೇಶ ಪೂರ್ವಕವಾಗಿ ಯುವತಿಯರಿಬ್ಬರನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯರು ಚೀರಾಡುತ್ತಿದ್ದಂತೆ ಆರೋಪಿ ಸ್ಥಳದಿಂದ ಆಟೋ ಸಮೇತ ಪರಾರಿಯಾಗಿದ್ದ.