Asianet Suvarna News Asianet Suvarna News

Hebbal to Bengaluru Airport ದಶ ಪಥ: 2051ನ್ನು ದೃಷ್ಟಿಯಲ್ಲಿಸಿರಿಕೊಂಡು ಯೋಜನೆ!

*2051ನ್ನು ದೃಷ್ಟಿಯಲ್ಲಿಸಿರಿಕೊಂಡು ಯೋಜನೆ
*ಸಂಚಾರ ದಟ್ಟಣೆ ನಿವಾರಣೆ ಪ್ಲಾನ್‌ ಸಂಪುಟ ಅಸ್ತು
*ಡಿಪಿಆರ್‌ ಸಿದ್ಧಪಡಿಸಲು ಬಿಎಂಆರ್‌ಸಿಎಲ್‌ಗೆ ಸೂಚನೆ
*ಅನುದಾನ ಬಗ್ಗೆ ಸದ್ಯಕ್ಕಿಲ್ಲ ಚರ್ಚೆ: ಸಚಿವ

10 Lane Expressway between Hebbal and  Kempegouda International Airport Bengaluru mnj
Author
Bengaluru, First Published Jan 7, 2022, 5:30 AM IST

ಬೆಂಗಳೂರು (ಜ. 7): ಮುಂದಿನ 2051ರಲ್ಲಿನ ಸಂಚಾರ ಅಗತ್ಯವನ್ನು ಪೂರೈಸಲು ಸಾಮರ್ಥ್ಯ ವರ್ಧನೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಸೇರುವ ರಸ್ತೆಗಳಲ್ಲಿ ದಟ್ಟಣೆ ಸಮಸ್ಯೆ ನಿವಾರಿಸಲು ಮಾಸ್ಟರ್‌ ಪ್ಲಾನ್‌ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ತಯಾರಿಸಲು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಲಾಗಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ (Press Conference) ವಿವರ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy), ಹೆಬ್ಬಾಳ ಜಂಕ್ಷನ್‌ (Hebbal Junction) ಸಾಮರ್ಥ್ಯ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಹೆಬ್ಬಾಳ, ತುಮಕೂರು ರಸ್ತೆ ಮತ್ತು ಕೆ.ಆರ್‌.ಪುರ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಎರಡು ಬದಿ 10 ಪಥ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದಿಂದ ವಿಮಾನ ನಿಲ್ದಾಣಕ್ಕೆ 5 ಪಥ ಮತ್ತು ವಿಮಾನ ನಿಲ್ದಾಣದಿಂದ ನಗರಕ್ಕೆ 5 ಪಥಗಳು ಇರಲಿವೆ ಎಂದು ವಿವರಿಸಿದರು.

ಅನುದಾನದ ಕುರಿತು ಯಾವುದೇ ಚರ್ಚೆ ಇಲ್ಲ!

ಮಾಸ್ಟರ್‌ ಪ್ಲಾನ್‌ ತಯಾರಿಸಲು ಬಿಎಂಆರ್‌ಸಿಎಲ್‌ಗೆ ತಿಳಿಸಲಾಗಿದ್ದು, ಸಮಗ್ರ ಅಧ್ಯಯನವನ್ನು ಕೈಗೊಂಡಿದೆ. ಇನ್ನು ಅನುದಾನದ ಕುರಿತು ಯಾವುದೇ ಚರ್ಚೆಯಾಗಿಲ್ಲ. ಸಂಚಾರ ದಟ್ಟಣೆಯಿಂದ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಮತ್ತು ಹಿಂದಿರುಗಲು ವಿಳಂಬವಾಗುತ್ತಿದೆ. ತುಮಕೂರು ರಸ್ತೆ, ಕೆ.ಆರ್‌.ರಸ್ತೆಯಲ್ಲಿಯೂ ಸಿಗ್ನಲ್‌ನಿಂದಾಗಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಮೂಲಸೌಕರ್ಯಗಳ ಸಾಮರ್ಥ್ಯ ವರ್ಧನೆಗೆ ತೀರ್ಮಾನಿಸಲಾಗಿದೆ ಎಂದರು.

ಇದನ್ನೂ ಓದಿ: ಭವಿಷ್ಯದ ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಸದ್ಯಕ್ಕೆ ಪ್ರಸ್ತಾವನೆಯಲ್ಲಿ ನಗರದಿಂದ ವಿಮಾನ ನಿಲ್ದಾಣಕ್ಕೆ ಅಸ್ತಿತ್ವದಲ್ಲಿರುವ ಮೇಲ್ಸೇತುವೆಯ ಪಶ್ಚಿಮಕ್ಕೆ ನಾಲ್ಕು ಪಥದ ಮೇಲ್ಸೇತುವೆ ಮತ್ತು ಈ ಮೇಲ್ಸೇತುವೆ ಮೂರು ಪಥಗಳು ವಿಮಾನ ನಿಲ್ದಾಣದ ಕಡೆಗೆ ಮುಂದುವರಿಯುತ್ತವೆ. ಎರಡು ಪಥಗಳು ತುಮಕೂರು ಕಡೆಗೆ ಇಳಿಯಲಿವೆ. ತುಮಕೂರಿನಿಂದ ಕೆ.ಆರ್‌.ಪುರದ ಕಡೆಗೆ ಹೊಸ ಮೂರು ಪಥದ ಕೆಳಸೇತುವೆ, ಕೆ.ಆರ್‌.ಪುರದಿಂದ ನಗರಕ್ಕೆ ಹೊಸ ಎರಡು ಪಥದ ಮೇಲ್ಸೇತುವೆ, ಕೆ.ಆರ್‌.ಪುರದಿಂದ ವಿಮಾನ ನಿಲ್ದಾಣಕ್ಕೆ ಹೊಸ ಎರಡು ಪಥದ ಮೇಲ್ಸೇತುವೆ ಮತ್ತು ಪ್ರಸ್ತುತ ಇರುವ ಹೆಬ್ಬಾಳ ಮೇಲ್ಸೇತುವೆ ಪೂರ್ವಕ್ಕೆ ಹೊಸ ಮೂರು ಪಥದ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪ ಇದೆ. ಕೆ.ಆರ್‌.ಪುರನಿಂದ ನಗರಕ್ಕೆ ಎರಡು ಪಥದ ಮೇಲ್ಸೇತುವೆಯು ಹೊಸ ಮೇಲ್ಸೇತುವೆ ಹೊಸ ಮೇಲ್ಸೇತುವೆಯಲ್ಲಿ ವಿಲೀನಗೊಳ್ಳಲಿದೆ ಮತ್ತು 4 ಪಥ ಅಗಿ ಇಳಿಯಲಿವೆ ಎಂದು ಹೇಳಿದರು.

ಸರ್ವೀಸ್ ರಸ್ತೆ ಅಗಲೀಕರಣ:

ವಿಮಾನ ನಿಲ್ದಾಣದಿಂದ ಕೆ.ಆರ್‌.ಪುರ (K R Pura) ರಸ್ತೆಯಲ್ಲಿ ಅಸ್ತಿತ್ವದಲ್ಲಿರುವ ಸರ್ವೀಸ್ ರಸ್ತೆಯನ್ನು (Service Road) 2 ಪಥದಿಂದ 3 ಪಥವಾಗಿ ಅಗಲೀಕರಣಗೊಳಿಸಲಾಗುವುದು. ವಿಮಾನ ನಿಲ್ದಾಣದಿಂದ ತುಮಕೂರಿಗೆ (Airport to Tumkuru) ಅಸ್ತಿತ್ವದಲ್ಲಿರುವ 2 ಪಥದ ರಸ್ತೆಗೆ ಸಮಾನಾಂತರವಾಗಿ ಹೊಸ 4 ಪಥದ ನೆಲಮಟ್ಟದ ರಸ್ತೆ ಇರಲಿದೆ. ಕೆ.ಆರ್‌.ಪುರದಿಂದ ತುಮಕೂರಿಗೆ ಈಗಿರುವ ನೇರ ರಸ್ತೆಯನ್ನು 4 ಪಥದ ರಸ್ತೆಯಾಗಿ ಅಗಲೀಕರಣಗೊಳಿಸಲಾಗುವುದು. ತುಮಕೂರಿನಿಂದ ನಗರಕ್ಕೆ ಕೆ.ಆರ್‌.ಪುರ ಕಡೆಗೆ ಹೊಸ ಎರಡು ಪಥದ ಯು-ಟರ್ನ್‌ ಅಂಡರ್‌ಪಾಸ್‌ ಇರಲಿದೆ ಎಂದರು.

Follow Us:
Download App:
  • android
  • ios