ದಾಬಸ್ ಪೇಟೆ [ನ.11]:   ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ ’ಸಮುದಾಯದತ್ತ ಪೊಲೀಸ್’ ವ್ಯವಸ್ಥೆಯನ್ನು ರೂಪಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸರು ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ.

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಅರೇಬೊಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ನೇತತ್ವದಲ್ಲಿ ಡಿವೈ ಎಸ್ ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸೇರಿದಂತೆ 10 ಕ್ಕೂ ಹೆಚ್ಚು ಸಿಬ್ಬಂದಿ ಒಂದು ರಾತ್ರಿ ಗ್ರಾಮ ದಲ್ಲಿ ತಂಗಿ ಜನತೆ ಸಮಸ್ಯೆಗೆ ಕಿವಿಯಾಗಿ ದ್ದಾರೆ. 

ಎರಡು ಗಂಟೆ ಸಭೆ : ಪೂರ್ವ ನಿಗದಿಯಂತೆ ಪೊಲೀಸರ ತಂಡ ಸಂಜೆಯ ವೇಳೆಗೆ ಅರೆ ಬೊಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿತು. ಗ್ರಾಮ ಪಂಚಾಯಿತಿಯ ಸದಸ್ಯರು ಸೇರಿ ದಂತೆ ಮುಖಂಡರೊಂದಿಗೆ ಪೊಲೀಸರು ಮಾತುಕತೆ ನಡೆಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾತ್ರಿ 8.00ಕ್ಕೆ ಆರಂಭವಾದ ಸಭೆ ಸುಮಾರು  12 ಗಂಟೆವರೆಗೂ ನಡೆಯಿತು. 09 ಗಂಟೆಗೆ ಎಸ್‌ಪಿ ರವಿ ಕೂಡ ಗ್ರಾಮಕ್ಕೆ ಧಾವಿಸಿ
ಸಭೆಯಲ್ಲಿ ಪಾಲ್ಗೊಂಡರು. 

ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 200 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಸ್ ನಿಲ್ದಾಣ, ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ನಾಗರಿಕರು ಪೊಲೀಸರನ್ನು ಕೋರಿದರು ಶಾಲೆಯ ಆವರಣದಲ್ಲಿಯೇ ಪೊಲೀಸರು ರಾತ್ರಿ ಮಲಗುವ ಮುನ್ನ ಗ್ರಾಮದ ಎಲ್ಲ ಬೀದಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂಡಿದ ಭರವಸೆ: ನೆಲಮಂಗಲದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ  ಗಡಿಗ್ರಾಮ ಅರೆಬೊಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು 10ಕ್ಕೂ ಮನೆಗಳಿವೆ. ಇಲ್ಲಿನ ಅಧಿಕ ಜನರು ಕೃಷಿಕರೇ ಹೆಚ್ಚಾಗಿದ್ದಾರೆ. ’ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದಾಗಲ? ಪೊಲೀಸರು ಗ್ರಾಮಕ್ಕೆ ಧಾವಿಸುತ್ತಿದ್ದರು.

ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್.. ಬಾಲ ಚಿಚ್ಚಿದ್ರೆ ಅಷ್ಟೆ ಕತೆ!...

ಉಳಿದಂತೆ ಹಿರಿಯ ಪೊಲೀಸ್ ಅದಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು ಅಪರೂಪ. ’ಸಮುದಾಯದತ್ತ ಪೊಲೀಸ್’ ವ್ಯವಸ್ಥೆ ರೂಪಿಸುವ ಪ್ರಯತ್ನದ ಭಾಗ ವಾಗಿ ಜನರ ನಡುವೆ ಇದ್ದು ಅಪರಾಧದ ಕುರಿತು ಜಾಗತಿ ಮೂಡಿಸುವುದು ಗ್ರಾಮ ವಾಸ್ತವ್ಯದ ಉದ್ದೇಶ. ಸಮಸ್ಯೆಗಳಿಗೆ ಗ್ರಾಮ ವಾಸ್ತವ್ಯದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ಎಸ್‌ಪಿ ರವಿ ಡಿ ಚೆನ್ನಣ್ಣನವರ್. 

ನವೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: