ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಬಿಜೆಪಿ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಉಪ ಚುನಾವಣೆ ವಿಚಾರವಾಗಿಯೂ ಹೇಳಿದ್ದಾರೆ.

ಹೊಸಕೋಟೆ [ಅ20]: ಬಿಜೆಪಿ ಸಿದ್ಧಾಂತ ಹಾಗೂ ಮೋದಿಯವರ ಕಾರ್ಯವೈ​ಖರಿಗೆ ಮೆಚ್ಚಿ ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡಿದ ಎಂಟಿಬಿ ನಾಗರಾಜ್‌ ಪಕ್ಷದಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದಲ್ಲಿ ಅವರಿಗೆ ಬೆಂಬಲ ನೀಡುವುದಾಗಿ ನಗರದ 7ನೇ ವಾರ್ಡ್‌ ಸದಸ್ಯ ಗುಳ್ಳು ನಾಗರಾಜ್‌ ತಿಳಿಸಿದರು. ನಗರದ ಸ್ವಗೃಹದಲ್ಲಿ ಎಂಟಿಬಿ ನಾಗರಾಜ್‌ರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ನಾವು ಬೆಂಬಲ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್‌, ಕಾಂಗ್ರೆಸ್‌ ದೇಶದಲ್ಲಿ ಮುಳುಗು​ತ್ತಿದ್ದು, ಪಕ್ಷದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಈ ಭಾಗದ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಜಂಟಿಯಾಗಿ ನನಗೆ ಬೆಂಬಲ ಸೂಚಿಸುತ್ತಿದ್ದು, ಅ. 22ರಂದು ನ್ಯಾಯಾಲಯದ ತೀರ್ಪಿನ ನಂತರ ನನ್ನ ನಡೆಯನ್ನು ತಿಳಿಸಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ನಗರಸಭೆ ಮಾಜಿ ವಿಪಕ್ಷ ನಾಯಕ ಡಾ.ಸಿ. ಜಯರಾಜ್‌, ಅಬ್ದುಲ್ಲಾ ಸಾಬ್‌, ಸ್ಟೀಫನ್‌, ಚೌಡಪ್ಪ, ರಾಜಣ್ಣ, ರಾಜೇಂದ್ರ ಮೊದಲಾದವರು ಹಾಜರಿದ್ದರು.