Asianet Suvarna News Asianet Suvarna News

‘ಉಪಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣ’

ಉಪಕದನ ಫಲಿತಾಂಶ ನಂತರ ರಾಜ್ಯದಲ್ಲಿ ಮಹಾ ರೀತಿ ಪರಿಸ್ಥಿತಿ ನಿರ್ಮಾಣ|ಮತ್ತೆ ಮುಂದಿನ ದಿನಗಳಲ್ಲಿ ಆ ಕಡೆ ಈ ಕಡೆ ಹೋಗುವ ಶಾಸಕರಿಗೆ ಡಿಮ್ಯಾಂಡ್ ಬರಲಿದೆ ಎಂದ ಶಾಸಕ ಸತೀಶ ಜಾರಕಿಹೊಳಿ| ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಹೆಚ್ಚು ಗಮನ ಕೊಡದಿದ್ದರೂ ಅಲ್ಲಿಯ ಜನ ನನ್ನನ್ನು ಗೆಲ್ಲಿಸಿದ್ದಾರೆ| ಇಂತಹ ಜನ ಹಾಗೂ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಲು ಹೇಗೆ ಸಾಧ್ಯ?|

Uncertainty After By Election in Karnataka
Author
Bengaluru, First Published Nov 13, 2019, 8:42 AM IST

ಬೆಳಗಾವಿ[ನ.13]: ಉಪಚುನಾವಣೆ ಫಲಿತಾಂಶ ಬಂದ ಮೇಲೆ ಮಹಾರಾಷ್ಟ್ರ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗುತ್ತೆ. ಮತ್ತೆ ಮುಂದಿನ ದಿನಗಳಲ್ಲಿ ಆ ಕಡೆ ಈ ಕಡೆ ಹೋಗುವ ಶಾಸಕರಿಗೆ ಡಿಮ್ಯಾಂಡ್ ಬರಲಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಹತ್ತು, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ರಾಜ್ಯದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸರ್ಕಸ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಎನ್‌ಸಿಪಿಗೆ ಸರ್ಕಾರ ರಚನೆಗೆ ಬೆಂಬಲ ನೀಡಬಹುದು. ಶಿವಸೇನೆ ಜತೆಗೆ ಬೆಂಬಲ ಅಲ್ಲ. ಬದಲಿಗೆ ಎನ್‌ಸಿಪಿ ಅಂತಾ ಬೆಂಬಲ. ಮಹಾರಾಷ್ಟ್ರದಲ್ಲಿ ಶಿವಸೇನೆ ಗಟ್ಟಿರುವುದಕ್ಕೆ ಆಪರೇಷನ್ ಕಮಲ ಮಾಡುತ್ತಿಲ್ಲ. ಪಕ್ಷೇತರರು ಹೋದರೂ ಸಂಖ್ಯೆ ಕಡಿಮೆ ಆಗಿದ್ದಕ್ಕೆ ಆಪರೇಷನ್ ಕಮಲ ಸಾಹಸಕ್ಕೆ ಬಿಜೆಪಿ ಕೈ ಹಾಕುತ್ತಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿಯವರೇ ನನ್ನ ಐದು ವರ್ಷ ಹಾಳು ಮಾಡಿದ್ದೀರಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಮುಂದಿನ ಐದು ವರ್ಷ ಹಾಳು ಮಾಡಬೇಡಿ ಅಂದಿದ್ದಾರೆ. ಮೋದಿಯವರೇ ನಾನು ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ. ಮೋದಿ ವಿದೇಶದಲ್ಲಿ ಜಾಸ್ತಿ ಓಡಾಡಿದ್ದಕ್ಕೆ ಅಧಿಕಾರಿಗಳು ತಮಗೆ ತಿಳಿದಿದ್ದನ್ನು ಮಾಡಿದ್ದಾರೆ ಎಂದು ಹೇಳಿದರು. 

ಕ್ಷೇತ್ರ ಬಿಟ್ಟು ಹೋಗಲ್ಲ: 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಹೆಚ್ಚು ಗಮನ ಕೊಡದಿದ್ದರೂ ಅಲ್ಲಿಯ ಜನ ನನ್ನನ್ನು ಗೆಲ್ಲಿಸಿದ್ದಾರೆ. ಇಂತಹ ಜನ ಹಾಗೂ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಲು ಹೇಗೆ ಸಾಧ್ಯ? ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. 

ಉಪಚುನಾವಣೆಯಲ್ಲಿ ಸಹೋದರ ಲಖನ್ ಗೆಲುವಿಗೆ ಶ್ರಮಿಸುತ್ತಿರುವ ಸತೀಶ್, ಕಳೆದ ನಾಲ್ಕು ತಿಂಗಳಿನಿಂದ ಗೋಕಾಕ್ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇವರ ಈ ಸಕ್ರಿಯತೆಗೆ ಕುರಿತು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿರುವ ಕೆಲವರು, 2023ರ ಚುನಾವಣೆಗೆ ಸತೀಶ್ ಕ್ಷೇತ್ರ ಬದಲಿಸಿ ಗೋಕಾಕ್‌ನಿಂದ ಸ್ಪರ್ಧಿಸುತ್ತಾರೆ. ಅದೇ ಕಾ ರಣಕ್ಕೆ ಈಗಿನಿಂದಲೇ ಅಲ್ಲಿ ಅಡಿಪಾಯ ಹಾಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಬೆಳಗಾಗಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಈ ವದಂತಿ ತಳ್ಳಿ ಹಾಕಿದ ಶಾಸಕರು, ಗೋಕಾನಲ್ಲಿ ಲಖನ್‌ನನ್ನು ಒಮ್ಮೆ ಎಂಎಲ್‌ಎ ಮಾಡಿದರೆ ಮುಗಿತು. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದರು. 

ತಮ್ಮ ಸ್ವಕ್ಷೇತ್ರ ಯಮಕನಮರಡಿ ಮತದಾರರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. 2018ರ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರಕ್ಕೆ ಹೆಚ್ಚು ಹೋಗಲಿಲ್ಲ. ಒಂದು ದಿನವೂ ಸರಿಯಾಗಿ ಪ್ರಚಾರ ಮಾಡಲಿಲ್ಲ. ಆದರೂ ಅಲ್ಲಿಯ ಜನರು ನನ್ನನ್ನು ಗೆಲ್ಲಿಸಿದರು. ಇಲ್ಲಿ ಗೆಲುವು ತುಂಬಾ ಸುಲಭ. ಒಂದು ವೇಳೆ ಸದ್ಯ ನಾನು ಗೋಕಾಕಿಗೆ ನೀಡುತ್ತಿರುವ ಪ್ರಾಶಸ್ತ್ಯ ಯಮಕನಮರಡಿಗೆ ನೀಡಿದ್ದರೆ 45-50 ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸುತ್ತಿದ್ದರು. ಬದಲಾವಣೆ ಕುರಿತು ಹರಿದಾಡುತ್ತಿದ್ದ ಅಂತೆ, ಕಂತೆಗೆ ಫುಲ್ ಸ್ಟಾಪ್ ನೀಡಿದರು. 

Follow Us:
Download App:
  • android
  • ios