ಬೆಳಗಾವಿ(ನ.15):  ಮುಂದಿನ ಜಲಸಂಪನ್ಮೂಲ ಸಚಿವ 'ನಮ್ಮ ಸಾಹುಕಾರ' ಎಂದು ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. 

ಉಪ ಚುನಾವಣೆಗೂ ಮುನ್ನವೇ ರಮೇಶ್ ಜಾರಕಿಹೊಳಿ ಅವರಿಗೆ ಅಭಿಮಾನಿಗಳು ಜಲಸಂಪನ್ಮೂಲ ಖಾತೆಯನ್ನು  ಫಿಕ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

 

ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದರು. ಆದರೆ, ಈ ಖಾತೆಯನ್ನು ಡಿ ಕೆ ಶಿವಕುಮಾರ್ ಅವರಿಗೆ ನೀಡಲಾಗಿತ್ತು. ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಮೈತ್ರಿ ಸರ್ಕಾರ ವಿರುದ್ಧ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದು ರಾಜೀನಾಮೆ ನೀಡಿದ್ದರು. ಅತೃಪ್ತ ಶಾಸಕರ ನಾಯಕ ಎಂದೇ ರಮೇಶ್ ಜಾರಕಿಹೊಳಿ ಅವರು ಗುರುತಿಸಿಕೊಂಡಿದ್ದರು. ರಮೇಶ್ ಜಾರಕಿಹೊಳಿ ಸೇರಿ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. 

ಫೇಸ್‌ಬುಕ್ ನಲ್ಲಿ ಪೋಸ್ಟ್ ನಲ್ಲಿ ಏನಿದೆ? 

ಕರ್ನಾಟಕದ ಮುಂದಿನ ಜಲಸಂಪನ್ಮೂಲ ಸಚಿವರು ನಮ್ಮ ಸಾಹುಕಾರ
" " ಸರಳತೆಯೆ ಮತ್ತು ಸಮಾನತೆಯ ಪ್ರತೀಕವಾಗಿರು ನಮ್ಮ ಸಾಹುಕಾರ ನಮ್ಮ ನಾಯಕ ನಮ್ಮ ಆಸ್ತಿ...
" " ನಮ್ಮ ಸಾಹುಕಾರ ನಮ್ಮ ನಾಯಕ " "
ಬೆಳಗಾವಿ ಜಿಲ್ಲೆಯ ಹುಲಿ ಬಳಗಾವಿ ಪ್ರಭಾವಿ ನಾಯಕರು ಮತ್ತು ನಮ್ಮ ಸಾಹುಕಾರ ಛಲಗಾರ ಮತ್ತು ನಮ್ಮ ಸಾಹುಕಾರ ಛಲಗಾರ ಹಠವಾದಿ ಅತ್ಯಂತ ಪ್ರಾಮಾಣಿಕ ವಿಚಾರವಾದಿ,ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಒಂದೇ ಗುರಿ ಶ್ರೇಷ್ಠ ಕ್ರೀಯಾಶೀಲ ನಾಯಕ,ಸಮಾಜ ಪರಿವರ್ತನಕಾರ ಮೆಚ್ಚಿನ ನಾಯಕ ನನ್ನ ಪ್ರೀತಿಯ ಗುರುಗಳು ಹಾಗೂ ದಿನದಲಿತರ ಶಕ್ತಿ ಬಹುಜನ ನಾಯಕ ರೈತರ ನಾಯಕ ಮಾಜಿ ಸಹಕಾರ ಸಚಿವರು ನಮ್ಮ ನಾಯಕರ #ಸನ್ಮಾನ್ಯ_ಶ್ರೀ_ರಮೇಶಅಣ್ಣಾ_ಜಾರಕಿಹೊಳಿಸಾಹೇಬರು ಎಂದು ಬರೆದುಕೊಂಡಿದ್ದಾರೆ.