ಬೆಳಗಾವಿ[ನ.2]: ಮುಂಬರುವ 2022 ರೊಳಗೆ ದೇಶದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ತ್ವರಿತ ಕಾರ್ಯ ನಡೆದಿದೆ. ಆದ್ದರಿಂದ ರಾಜ್ಯದಲ್ಲಿನ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಿದಲ್ಲಿ, ರಾಜ್ಯದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಮುಂಬರುವ 2022 ರೊಳಗೆ ದೇಶದಲ್ಲಿನ ಎಲ್ಲ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಅದೇ  ರೀತಿ ರಾಜ್ಯದಲ್ಲಿ ಬಾಗಲಕೋಟೆ- ಕುಡಚಿ ರೈಲು ಮಾರ್ಗ ರೂಪಿಸಲು ಜಮೀನು ಅಗತ್ಯವಾಗಿದ್ದು, ತ್ವರಿತವಾಗಿ ರಾಜ್ಯ ಸರ್ಕಾರ ಜಮೀನು ನೀಡುವ ಕಾರ್ಯ ಮಾಡಬೇಕು. ಬೆಳಗಾವಿಯಿಂದ ಹೈದ್ರಾಬಾದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿ-ಬೀದರ್ ರೈಲು ಸಂಪರ್ಕ ಕಲ್ಪಿಸುವ ಚಿಂತನೆ ನಡೆದಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ರೈಲ್ವೆ ನಿಲ್ದಾಣದ ಹತ್ತಿರದಲ್ಲಿರುವ ಗೂಡಶೆಡ್‌ನ್ನು ಸಾಂಬ್ರಾ ಹತ್ತಿರ ಸ್ಥಳಾಂತರಿಸುವ ಕಾರ್ಯ ನಡೆದಿದೆ. ಅಲ್ಲಿಯೂ ಸಂಚಾರಕ್ಕೆ ಸಮಸ್ಯೆಯಾಗದಂತೆ ರಸ್ತೆಗಳನ್ನು ನಿರ್ಮಿಸಲಾಗುವುದು. ರೈಲು ನಿಲ್ದಾಣದಲ್ಲಿ ಈಗಾಗಲೇ ಉತ್ತರ ಭಾಗದಲ್ಲಿ ಪ್ಲಾಟ್‌ಪಾರಂ ಹಾಗೂ ಟಿಕೆಟ್ ಕೌಂಟರಗಳಿವೆ .ಶೀಘ್ರದಲ್ಲಿಯೇ ದಕ್ಷಿಣ ಭಾಗದಲ್ಲಿಯೂ ಪ್ಲಾಟ್‌ಪಾರಂ ಹಾಗೂ ಟಿಕೆಟ್ ಕೌಂಟರಗಳನ್ನು ಹಾಗೂ ಕೋಚಿಂಗ್ ಘಟಕ ಸ್ಥಾಪಿಸಲಾಗುವುದು ಎಂದರು.

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಘಟಪ್ರಭಾದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಿ, ರೈತರು ಬೆಳೆದ ತರಕಾರಿಯನ್ನು ಪ್ರಮುಖ ನಗರಗಳಿಗೆ ಸಾಗಿಸುಲಾಗುವುದು. ಗೋಕಾಕ ಹಾಗೂ ರಾಯಬಾಗದಲ್ಲಿ ಗೋದಾಮುಗಳ ಸ್ಥಾಪನೆ ಬಗ್ಗೆ ಬೇಡಿಕೆ ಇರುವುದರಿಂದ ಚಿಂತನೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲಾಗವುದು ಎಂದು ತಿಳಿಸಿದರು.

ಈಗಾಗಲೇ ಮೀರಜ್- ಬೆಳಗಾವಿ, ಲೋಂಡಾ, ಹುಬ್ಬಳಿ, ದಾವಣಗೆರೆ ಹಾಗೂ ಬೆಂಗಳೂರು ಮಾರ್ಗದ ದ್ವಿಪತ ರೆಲು ಹಳಿ ಜೋಡಣೆ ಕಾರ್ಯ ನಡೆದಿದೆ. ಪೂರ್ಣಗೊಂಡ ನಂತರ ಬೆಂಗಳೂರು- ಮುಂಬೈ ಮಾರ್ಗವಾಗಿ ವಂದೇ ಮಾತರಂ ಎಕ್ಸಪ್ರೆಸ್ ರೈಲು ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದಅನಿಲ ಬೆನಕೆ, ಅಭಯ ಪಾಟೀಲ, ಆನಂದಮಾಮನಿ, ದುರ್ಯೋಧನ ಐಹೊಳೆ, ಪ್ರಧಾನವ್ಯವಸ್ಥಾಪಕ ಅಜಯಕುಮಾರ ಸಿಂಗ್ ಸೇರಿದಂತೆಮೊದಲಾದವರು ಉಪಸ್ಥಿತರಿದ್ದರು.ಬೆ 

ನಗರದ ರೈಲು ನಿಲ್ದಾಣದ ಹತ್ತಿರದಲ್ಲಿನ ಗೂಡಶೆಡ್ ಸಾಂಬ್ರಾ ಹತ್ತಿರ ಸ್ಥಳಾಂತರ

ಚನ್ನಮ್ಮನ ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ರೈಲಿಗೆ ಬೇಕಾದ ಅಗತ್ಯ ಸಾಮಾನುಗಳ ತಯಾರಿಸುವ ಕಾರ್ಖಾನೆಗಳ ಸ್ಥಾಪನೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರ ಸಹಕಾರ ನೀಡಿದಲ್ಲಿ ತ್ವರಿತವಾಗಿ ಯೋಜನೆ ರೂಪಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು. 

ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ವಿಶ್ವಮಾನವ ಎಕ್ಸಪ್ರೆಸ್ ರೈಲು ಬೆಳಗಾವಿವರೆಗೆ ವಿಸ್ತರಣೆ ಮತ್ತು ಬೆಳಗಾವಿ- ಮೈಸೂರು ಎಕ್ಸಪ್ರೆಸ್ ರೈಲು ಆರಂಭ ಹಾಗೂ ಆಧುನಿಕ ಎಲ್‌ಎಚ್‌ಬಿ ಬೋಗಿಗಳಾಗಿ ಪರಿವರ್ತನೆ ಘೋಷಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ರೈಲುಗಳಿಗೆ ಬೇಕಾದ ಸಾಮಾನುಗಳ ತಯಾರಿಕಾ ಘಟಕಗಳು ಬೆಂಗಳೂರು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿವೆ. ಆದ್ದರಿಂದ ಬೆಳಗಾವಿಯಲ್ಲಿಯೂ ತಯಾರಿಕಾ ಘಟಕ ನಿರ್ಮಿಸಿ, ಈ ಭಾಗದ ಐದಾರು ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಚೆನ್ನಮ್ಮನ ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕಿದೆ. ಆದ್ದರಿಂದ. ನ.5 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಕಿತ್ತೂರು ಕೈಗಾರಿಕಾ ಪ್ರದೇಶದ ಕುರಿತು ಚರ್ಚಿಸಲಾಗುವುದು. ಘಟಕಕ್ಕೆ 300-400  ಎಕರೆ ಜಮೀನಿನ ಅಗತ್ಯವಿದೆ. ಈ ಪ್ರದೇಶದಲ್ಲಿ ರೈಲ್ವೆಇಲಾಖೆಗೆ ಸಂಬಂಧಿಸಿದ ಕೈಗಾರಿಕೆ ಸ್ಥಾಪನೆಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಯಾಣಿಕ ರೈಲು ಮಾದರಿಯಲ್ಲಿ ಗೂಡ್ಸ್‌ ವಾಹನಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. 

ಗೋವಾಕ್ಕೆ ನಿತ್ಯ ರೈಲು ಓಡಿಸಲು ಯೋಜನೆ ರೂಪಿಸಲಾಗಿದ್ದು,ರೈಲ್ವೆ ಇಲಾಖೆಯಿಂದ ಜಾರಿಯಾದ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊ ಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದು ಸದ್ಯ ಸ್ಥಗಿತಗೊಂಡಿರುವ ಗೋಲ್ಡನ್ ಚಾರಿಯೇಟ್ ಪ್ರವಾಸಿ ರೈಲನ್ನು ಕೇಂದ್ರ ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಮುಂದೆ ಬಂದಿದೆ. ದೇಶದ ಉದ್ದಗಲಕ್ಕೂ ಸಂಚರಿಸುವಂತೆ ಮಾಡಲಾಗುವುದು ಎಂದರು.

ಪ್ರಧಾನಿ ಮೋದಿ ಆಡಳಿತದಲ್ಲಿ ಇನ್ನು ಯಾವ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ. ಕಾಶ್ಮೀರ ಸೇರಿದಂತೆ ಚೀನಾ, ಬಾಂಗ್ಲಾ ಗಡಿವರೆಗೂ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಾಗಿದೆ. ಒಂದು ರೈಲ್ವೆ ಮೇಲ್ಸೇತುವೆ ಕೇಳಲು ನಡೆಸಿದ ಹೋರಾಟಕ್ಕೆ ನಮ್ಮೆಲ್ಲರ ಮೇಲೆ ಪೊಲೀಸ್‌ ಪ್ರಕರಣ ದಾಖಲಾದ ಕಹಿ ಅನುಭವ ಈಗ ಅಭಿವೃದ್ದಿಯಿಂದ ಬದಲಾಗಿದೆ ಎಂದರು. 

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ನನ್ನ ಇಡೀ ರಾಜ್ಯಸಭಾದ 18 ವರ್ಷದ ಅವಧಿಯಲ್ಲಿ ಬೆಳಗಾವಿಯಲ್ಲಿ ಮೂರು ಕಾರ್ಯಕ್ರಮ ಮಾತ್ರ ನಡೆದಿವೆ. ಈ ಹಿಂದೆ ಜಾರ್ ಶರೀಪ್ ಬಿಟ್ಟರೆ ಎರಡು ಕಾರ್ಯಕ್ರಮ ಸುರೇಶ ಅಂಗಡಿ ಯುಗದಲ್ಲಿ ನಡೆದಿರುವುದು ವಿಶೇಷ. ರಾಜ್ಯದಿಂದಲೇ ಇವರೆಗೆ ಇಟ್ಟು 10 ಜನರು ರೈಲ್ವೆ ಮಂತ್ರಿಗಳಾಗಿದ್ದರೂ ಬೆಳಗಾವಿ ಭಾಗ ಅನಾಥವಾಗಿತ್ತು. ಅನಾಥ ಬೆಳಗಾವಿಗೆ ಸುರೇಶ ಅಂಗಡಿ ಹೊಸ ಕಾಯಕಲ್ಪ ನೀಡಲಾರಂಭಿಸಿದ್ದಾರೆ.

ಬೆಳಗಾವಿ ಕಿತ್ತೂರು ಧಾರವಾಡ ಯೋಜನೆ ಶೀಘ್ರ ಪೂರ್ಣಗೊಳ್ಳಲಿ. ಬೆಳಗಾವಿಯಿಂದ ಹೈದ್ರಾಬಾದ ಕರ್ನಾಟಕ ಭಾಗಕ್ಕೂ ರೈಲು ಸಂಪರ್ಕ ಕಲ್ಪಿಸುವುದರ ಜತೆಗೆ ಇಲೆಕ್ಟ್ರಿಕ್ ರೈಲು ವ್ಯವಸ್ಥೆಗೂ ಚಾಲನೆ ನೀಡಬೇಕು ಎಂದರು. ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ರೈಲ್ವೆ ಇಲಾಖೆ, ರೈಲ್ವೆ ಸೇವೆ ಎಂದರೆ ಬಿಹಾರ, ತಮಿಳುನಾಗಿಗೆ ಮಾತ್ರ ಸಿಮೀತ ಎನ್ನುವ ಮಾತನ್ನು ಈಗ ಸಚಿವ ಸುರೇಶ ಅಂಗಡಿ ಬದಲಾಯಿಸುತ್ತಿದ್ದಾರೆ. ಅದೇ ರೀತಿ ಜಾರಿಯಾಗಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಜವಾಬ್ದಾರಿ ಈಗ ಅಧಿಕಾರಿಗಳ ಮೇಲಿದೆ. ಈ ಭಾಗದ ತರಕಾರಿ ಮುಂಬೈ ಸೇರಿದಂತೆ ದೊಡ್ಡ ನಗರಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಿಶೇಷ ರೈಲು ಮತ್ತು ವಿಮಾನ ಸೇವೆ ಆರಂಭಗೊಳ್ಳಬೇಕು ಎಂದರು. 

ಶಾಸಕ ಆನಂದ ಮಾಮನಿ ಮಾತನಾಡಿ,ಎ ರಡನೇ ಬಾರಿಗೆ ಮೋದಿ ಸರ್ಕಾರ ಬಂದ ನಂತರ ರಾಜ್ಯದ ಎರಡನೇ ರಾಜಧಾನಿಯೂ ಅಭಿವೃದ್ಧಿಪಥದತ್ತ ಸಾಗುತ್ತಿದೆ. ರೈಲ್ವೆ ಯೋಜನೆಗಳಿಂದ ವಂಚಿತವಾಗಿದ್ದ ಬೆಳಗಾವಿಗೆ ಈಗ ಕೇಂದ್ರ ಸಚಿವ ಸುರೇಶ ಅಂಗಡಿ ಹೊಸ ಕಾಯಕಲ್ಪ ನೀಡಿದ್ದಾರೆ.

ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಹೊಸ ಎಕ್ಸಪ್ರೆಸ್ ರೈಲುಗಳನ್ನು ಮಿರಜ್‌ವರೆಗೂ ವಿಸ್ತರಣೆ ಮಾಡಬೇಕು ಎಂದರು.