ಡಿಜೆ ಎಲ್‌ಇಡಿ ಸ್ಕ್ರೀನ್‌ನಲ್ಲಿ ಡಾ.ಪುನೀತ್ ರಾಜಕುಮಾರ್ ಫೋಟೋ ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು, ಕರುನಾಡೇ ಸಾಂಗ್ಸ್‌ಗೆ ಭರ್ಜರಿ ಸ್ಟೆಪ್ಸ್..! ನಗುವಿನ ಒಡೆಯ ಪುನೀತ್ ರಾಜಕುಮಾರ್ ಕಟೌಟ್ ಹಿಡಿದು ಅಭಿಮಾನಿಗಳ ಡ್ಯಾನ್ಸ್
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ(ಎ.10): ಶ್ರೀರಾಮನವಮಿ (Sri Ramanavami ) ನಿಮಿತ್ತ ಕುಂದಾನಗರಿ ಬೆಳಗಾವಿಯಲ್ಲಿ (belagavi) ಭವ್ಯ ಶೋಭಾಯಾತ್ರೆ ನಡೆಯುತ್ತಿದೆ. ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ನೇತೃತ್ವದಲ್ಲಿ ನಡೆಯುತ್ತಿರುವ ಭವ್ಯ ಶೋಭಾಯಾತ್ರೆಯಲ್ಲಿ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್‍ಕುಮಾರ್ (puneeth rajkumar) ಹವಾ ಜೋರಾಗಿದೆ. ಬೃಹದಾಕಾರದ ಡಿಜೆ ವಾಹನದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಡಾ.ಪುನೀತ್ ರಾಜಕುಮಾರ್ ಭಾವಚಿತ್ರ ಡಿಸ್‌ಪ್ಲೇ ಆಗುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಬೆಳಗಾವಿಯ ಚನ್ನಮ್ಮ ವೃತ್ತ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಟಿಳಕ್ ವೃತ್ತದವರೆಗೂ ಶೋಭಾಯಾತ್ರೆ ಸಾಗಲಿದ್ದು ಸಾವಿರಾರು ಯುವಕರು ಕೈಯಲ್ಲಿ ಭಗವಾ ಧ್ವಜಗಳನ್ನು ಹಿಡಿದು ಭಾಗಿಯಾಗಿದ್ದಾರೆ. ಶೋಭಾಯಾತ್ರೆ ಚನ್ನಮ್ಮ ವೃತ್ತ ತಲುಪುತ್ತಿದ್ದಂತೆ ಡಾ.ರಾಜಕುಮಾರ್ ಅಭಿನಯದ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲ ಚಿತ್ರದ ಕರುನಾಡೇ ಹಾಡಿಗೆ ಯುವಕರು ಭರ್ಜರಿ ಸ್ಟೆಪ್ ಹಾಕಿದರು. ಎರಡು ವರ್ಷ ಕೋವಿಡ್ ಹಿನ್ನೆಲೆ ಶ್ರೀರಾಮನವಮಿ ಶೋಭಾಯಾತ್ರೆ ನಡೆದಿರಲಿಲ್ಲ. ಈ ಬಾರಿ ಭವ್ಯ ಶೋಭಾಯಾತ್ರೆ ನಡೆಯುತ್ತಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
Chitradurga ಜಮೀನು ಮಾಲೀಕನ ಬೆದರಿಕೆಯೇ ಕುರಿಗಾಹಿಯನ್ನು ಬಲಿ ಪಡೆಯಿತೇ?
ಶೋಭಾಯಾತ್ರೆಯಲ್ಲಿ ಭಾಗಿಯಾದ ಚಿಣ್ಣರು, ಗಮನ ಸೆಳೆದ ಮಲ್ಲಗಂಬ ಪ್ರದರ್ಶನ
ಇನ್ನು ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಸಂಸ್ಥಾಪಕ ರಮಾಕಾಂತ ಕೊಂಡುಸ್ಕರ್ ನೇತೃತ್ವದಲ್ಲಿ ನಡೆಯುತ್ತಿರುವ ಶೋಭಾಯಾತ್ರೆಯಲ್ಲಿ ಬೆಳಗಾವಿ ತಾಲೂಕಿನ ಬೆನ್ನಾಳಿ ಗ್ರಾಮದ ಪುಟ್ಟ ಪುಟ್ಟ ಮಕ್ಕಳು ಭವ್ಯ ಮಲ್ಲಗಂಬ ಪ್ರದರ್ಶನ ನೀಡಿದರು. ಶೋಭಾಯಾತ್ರೆ ಉದ್ದಕ್ಕೂ ಸಾಂಪ್ರದಾಯಿಕ ವಾದ್ಯ ತಂಡಗಳು ಗಮನ ಸೆಳೆದವು. ಇನ್ನು ಪುಟ್ಟ ಪುಟ್ಟ ಮಕ್ಕಳು ಶ್ರೀರಾಮ, ಲಕ್ಷ್ಮಣ, ಸೀತಾ ವೇಷಧಾರಿಯಾಗಿ ಭಾಗಿಯಾಗಿದ್ದು ಕಂಡು ಬಂತು.
ಬೆಲೆ ಏರಿಕೆ ಮುಚ್ಚಿಹಾಕಲು ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿ Mohammed Nalapad
