Chitradurga ಜಮೀನು ಮಾಲೀಕನ ಬೆದರಿಕೆಯೇ ಕುರಿಗಾಹಿಯನ್ನು ಬಲಿ ಪಡೆಯಿತೇ?

ಚಿತ್ರದಲ್ಲಿ ಈ ಘಟನೆ ನಡೆದಿದ್ದು,  ಜಮೀನಿನ ಮಾಲೀಕ ಹಾಕಿರೋ ಬೆದರಿಕೆಯೇ ಕುರಿಗಾಹಿಯ ಪ್ರಾಣ ತೆಗೆಯಿತೇ ಎಂಬ ಅನುಮಾನ ಮೂಡಿದೆ. ಕೊಲೆಯೋ? ಆತ್ಮಹತ್ಯೆಯೋ ಎಂಬುದು ಸಂಬಂಧಿಕರಲ್ಲಿ ಅನುಮಾನ ಹುಟ್ಟಿಸಿದೆ.  

sheep shepherd found dead in Chitradurga gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಎ.10): ಆತ ನಿತ್ಯ ಕುರಿಗಳನ್ನು (sheep ) ಮೇಯಿಸಲು ಗುಡ್ಡ, ಬೆಟ್ಟಗಳತ್ತ ತೆರಳುತ್ತಿದ್ದನು. ಆದ್ರೆ ಮೊನ್ನೆ ಅವನ ಕಣ್ತಪ್ಪಿನಿಂದ ನಡೆದ ಕೆಲಸಕ್ಕೆ ಆಕ್ರೋಶಗೊಂಡ ಜಮೀನಿನ ಮಾಲೀಕ ಆತನಿಗೆ ಹಾಕಿರೋ ಬೆದರಿಕೆಯೇ ಇಂದು ಅವನ ಪ್ರಾಣವನ್ನೇ ತೆಗೆದಿದೆ. ಅಷ್ಟಕ್ಕೂ ಅದು ಕೊಲೆಯೋ? ಆತ್ಮಹತ್ಯೆಯೋ ಎಂಬುದು ಸಂಬಂಧಿಕರಲ್ಲಿ ಅನುಮಾನ ಹುಟ್ಟಿಸಿದೆ.  

ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ದೊಡ್ಡೇರಿ ಉಪ್ಪಾರಹಟ್ಟಿ ಗ್ರಾಮದಲ್ಲಿ.  ಮೃತ ಯುವಕ ವೀರೇಶ (30) ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು ಹೋಗಿದ್ದಾನೆ. ತನ್ನ ಸಣ್ಣ ತಪ್ಪಿನಿಂದ ಕುರಿಗಳು ಅಭಿ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆ ತಿಂದು ನಾಶ ಮಾಡಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಭಿ ಎಂಬಾತ ಮೃತ ಯುವಕನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಮ್ಮ ಜಮೀನಿನ ಎಲ್ಲಾ ಬೆಳೆ ನಾಶವಾಗಿದೆ ನೀನು ಲಕ್ಷಾಂತರ ರೂ ದಂಡ ಕಟ್ಟಬೇಕು ಎಂದು ಬೆದರಿಕೆ ಹಾಕಿದ್ದಾನೆ.

ಬೆಲೆ ಏರಿಕೆ ಮುಚ್ಚಿಹಾಕಲು ಬಿಜೆಪಿಯಿಂದ‌ ಕೋಮು ಗಲಭೆ ಸೃಷ್ಟಿ Mohammed Nalapad

ಇಷ್ಟಕ್ಕೆ ಸುಮ್ಮನಾಗದ ಅಭಿ, ಮೃತನ ಕುರಿ- ಮೇಕೆಗಳನ್ನು ಕೂಡಿ ಹಾಕಿ ಇವುಗಳನ್ನು ಬಿಡುವುದಿಲ್ಲ ಹೋಗು ಎಂದು ಬೆದರಿಕೆ ಹಾಕಿದ್ದಾನೆ ಇದ್ರಿಂದ ಬೇಸತ್ತ ವಿರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕೊಲೆ‌ ಮಾಡಿ ಬಾವಿಗೆ ಬಿಸಾಕಿದ್ದಾರೋ ಗೊತ್ತಿಲ್ಲ ಮಾರನೇ ದಿನ ಶವವಾಗಿ ಸಿಕ್ಕಿದ್ದಾನೆ. ಸಂಬಂಧಿಕರು ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಡೆದ ಬಳಿಕ ಕೂಡಲೇ ನಾವೆಲ್ಲರೂ ಸ್ಥಳಕ್ಕೆ‌ ತೆರಳಿದೆವು. ಆ ವೇಳೆಗಾಗಲೇ ಅಭಿ ಊರಿನ ದೊಡ್ಡ ಗ್ರಾಮಸ್ಥರೆಲ್ಲ ಸೇರಿಸಿ ಪಂಚಾಯ್ತಿಗೆ ಸೇರಿದ್ದನು. ಅವರು ಸಾಕಷ್ಟು ಬೆಳೆ‌ ನಾಶವಾಗಿದೆ ಸುಮಾರು 5 ಲಕ್ಷದಷ್ಟು ನಮಗೆ ಪರಿಹಾರದ ರೀತಿ ದಂಡ ವಿತರಿಸಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಹೀಗೆ ಎಲ್ಲರೂ ಮಾತಿಗೆ ಮಾತಿಗೆ ಬೆಳೆದು ಕೊನೆಗೆ ಪಂಚಾಯ್ತಿ ತೀರ್ಮಾನ 25 ಸಾವಿರಕ್ಕೆ ಬಂದು ತಲುಪಿದೆ. 

Chamundi Hills Ropeway Project ಪರಿಸರವಾದಿಗಳು ಮತ್ತು ರಾಜಮನೆತನದಿಂದಲೂ ವಿರೋಧ

ಅಷ್ಟೊತ್ತಿಗೆ ವಿರೇಶ್ ಕಾಣೆಯಾಗಿದ್ದ ಹಿನ್ನೆಲೆ, ಸಂಬಂಧಿಕರು ನಾವು ದಂಡದ ಹಣವನ್ನು ನಾಳೆ ನಮ್ಮ ಹುಡುಗ ಸಿಕ್ಕಮೇಲೆ ಈ ದಂಡ ಪಾವತಿ ಮಾಡ್ತೀವಿ ಎಂದು ಹೇಳಿ ಮೃತನ ಬಗ್ಗೆ ಹುಡುಕಾಟದಲ್ಲಿ ಬ್ಯುಸಿ‌ ಆಗಿದ್ದಾರೆ. ಅಷ್ಟರಲ್ಲಿ ಭಾವಿಯೊಂದರಲ್ಲಿ ವಿರೇಶ್ ಶವ ಸಿಕ್ಕಿದ್ದನ್ನು ಕಂಡು ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ತಲೆಯ ಹಿಂಭಾಗ ಬಲವಾದ ಪೆಟ್ಟು ಬಿದ್ದಿರೋ‌ ಕಾರಣ ಇದು ಕೊಲೆಯೇ ಇರಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಟ್ಟಾರೆಯಾಗಿ ಯುವಕನ‌ ಕಣ್ತಪ್ಪಿನಿಂದ ಕುರಿಗಳು ಬೆಳೆ ನಾಶ ಮಾಡಿರೋದೆನೋ ತಪ್ಪು, ಆದ್ರೆ ಅದಕ್ಕೆ ಕೊಲೆ‌‌ ಮಾಡಿದ್ದಾರೋ ಅಥವಾ ಯುವಕನೇ‌ ಭಯದಿಂದ ಸಾವಿಗೆ ಶರಣಾದನೋ ಎಂಬ ಸತ್ಯ ತನಿಖೆಯಲ್ಲಿ ಬಯಲಾಗಬೇಕಿದೆ.

Latest Videos
Follow Us:
Download App:
  • android
  • ios