Asianet Suvarna News Asianet Suvarna News

MLC Election Result ಸೋಲಿನ ಬೆನ್ನಲ್ಲೇ ರಮೇಶ್ ಜಾರಕಿಗೊಳಿಗೆ ಮತ್ತೊಂದು ಶಾಕ್, ಕ್ರಮಕ್ಕೆ ಮುಂದಾದ ಬಿಜೆಪಿ!

  • 2 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಆಡಳಿತರೂಢ ಬಿಜೆಪಿ
  • ಬೆಳಗಾವಿ ಸೋಲಿಗೆ ರಮೇಶ್ ಜಾರಕಿಹೊಳಿ ಮೇಲೆ ಕ್ರಮ
  • ಸೋಲಿನ ಪರಾಮರ್ಶೆಗೆ ಮುಂದಾದ ಸಿಎಂ ಬೊಮ್ಮಾಯಿ
     
karnataka MLC Election Result bjp high command may take action against Ramesh Jarkiholi reports ckm
Author
Bengaluru, First Published Dec 15, 2021, 3:15 AM IST

ಬೆಳಗಾವಿ(ಡಿ.15): ರಮೇಶ್‌ ಜಾರಕಿಹೊಳಿ ಮೇಲೆ ಕ್ರಮಕೈಗೊಳ್ಳುವ ಕುರಿತು ಪಕ್ಷದ ಮುಖಂಡರೊಂಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ತಿಳಿಸಿದರು. ಬೆಳಗಾವಿ(Belagavi) ವಿಧಾನ ಪರಿಷತ್‌ ಚುನಾವಣೆಯಲ್ಲಿ(MLC Elecion Result) ಬಿಜೆಪಿ ಅಭ್ಯರ್ಥಿ ಸೋಲು ಕಂಡಿರುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಹಜವಾಗಿ ರಮೇಶ್‌ ಜಾರಕಿಹೊಳಿ(Ramesh Jarkiholi), ಬಾಲಚಂದ್ರ ಜಾರಕಿಹೊಳಿ ಒಂದೇ ಪಕ್ಷದವರು. ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿಗಳ ಕುರಿತು ಕ್ರಮಕೈಗೊಳ್ಳಲು ಅವಸರ ಮಾಡುವುದಿಲ್ಲ. ಕುಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಸಿದ್ದು ಮೇಲೆ ಕಿಡಿ: 
ವಿಪಕ್ಷ ನಾಯಕ ಸಿದ್ದರಾಮಯ್ಯನವರ(siddaramaiah) ಧಮ್‌ ಬಗ್ಗೆ ನಮಗೆ ಗೊತ್ತಿದೆ. ಅವರ ಮುಖ್ಯಮಂತ್ರಿ ಸ್ಥಾನನೇ ಉಳಿಸಿಕೊಳ್ಳಲು ಆಗಲಿಲ್ಲ. ಅವರ ಮುಖ್ಯಮಂತ್ರಿ ನೇತೃತ್ವದಲ್ಲಿಯೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.

MLC Poll Result: ಬಿಜೆಪಿ ವಿರುದ್ಧ ತಿರುಗಿಬಿದ್ದ ಜಾರಕಿಹೊಳಿ, ಸೋಲಿಗೆ ಸ್ಫೋಟಕ ಕಾರಣ ಕೊಟ್ರು

ನಮ್ಮ ಮತಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಇದರ ಬಗ್ಗೆಯೂ ನಾವು ಕೂಲಂಕಷ ಪರಿಶೀಲನೆ ಮಾಡುತ್ತೇವೆ ಎಂದರು. ಬೆಳಗಾವಿಯ ಬಗ್ಗೆ ಪರಿಶೀಲನೆ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ಇತ್ತು. ಯಾಕೆ ಸೋಲು ಕಂಡರು ಎಂದು ಪರಿಶೀಲನೆ ಮಾಡುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಉತ್ತರಿಸಿದರು.

ಫಲಿತಾಂಶ ಖಂಡಿತವಾಗಿ ತೃಪ್ತಿ ತಂದಿದೆ. ರಾಜ್ಯದಲ್ಲಿ ಬಿಜೆಪಿ(BJP) ವಿಧಾನ ಪರಿಷತ್‌ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದೇವೆ. 13 ಅಥವಾ 14 ಸ್ಥಾನ ನಿರೀಕ್ಷೆ ಇಟ್ಟುಕೊಂಡಿದ್ದೇವು. ಸ್ವಲ್ಪದರಲ್ಲಿ ಹೆಚ್ಚು-ಕಡಿಮೆಯಾಗಿದೆ. ಕಳೆದ ಬಾರಿ ವಿಧಾನ ಪರಿಷತ್‌ನಲ್ಲಿ 6 ಸ್ಥಾನ ಇತ್ತು. ಈ ಬಾರಿ 5 ಹೆಚ್ಚಿಗೆ ಆಗಿದೆ ಎಂದರು.

MLC Election Result: ಹಳೇ ಮೈಸೂರಲ್ಲೇ ನೆಲಕಚ್ಚಿದ ಜೆಡಿಎಸ್, ಭದ್ರಕೋಟೆ ಛಿದ್ರ-ಛಿದ್ರ..!

ಬೆಂ.ಗ್ರಾಮಾಂತರ, ಮಂಡ್ಯದಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ
ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಡಳಿತಾರೂಢ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಹೀನಾಯ ಸೋಲು ಕಂಡಿದೆ. ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಠೇವಣಿಯನ್ನೇ ಕಳೆದುಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿದ ಒಟ್ಟು ಮತಗಳು ಕೇವಲ 104 ಎನ್ನುವುದು ವಿಶೇಷ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿಯ ಬಿ.ಸಿ.ನಾರಾಯಣ ಸ್ವಾಮಿ ಅವರು ಕೇವಲ 54 ಮತಗಳನ್ನು ಪಡೆದರೆ, ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿ ಬೂಕಹಳ್ಳಿ ಮಂಜುನಾಥ್‌ ಕೇವಲ 50 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ ಈ ಮಟ್ಟಿಗೆ ಸೋಲು ಕಂಡಿರುವುರಿಂದ ಪಕ್ಷಕ್ಕೆ ಭಾರೀ ಮುಖಭಂಗವಾದಂತಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ ಅವರು 2262 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರೆ, ಜೆಡಿಎಸ್‌ ಪಕ್ಷದ ಎಚ್‌.ಎಂ. ರಮೇಶ್‌ಗೌಡ 1540 ಮತ ಗಳಿಸಿದ್ದಾರೆÜ. ಇನ್ನು ಮಂಡ್ಯದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗೂಳಿಗೌಡ 2,009 ಗಳಿಸಿದ್ದರೆ, ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜಿಗೌಡ 1,912 ಮತಗಳನ್ನು ಪಡೆದಿದ್ದಾರೆ. ಬೂಕಹಳ್ಳಿ ಮಂಜುನಾಥ್‌ ಅವರು ಕನಿಷ್ಠ 500 ಮತಗಳನ್ನಾದರೂ ಪಡೆಯುವ ನಿರೀಕ್ಷೆ ಇತ್ತು.

ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅಘಾತ ತಂದಿರುವುದು ನಿಜ. ಆದರೆ ಕಳೆದ ಬಾರಿಗಿಂತ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಇತ್ತ ಕಾಂಗ್ರೆಸ್ 11 ಸ್ಥಾನ ಗೆದ್ದು ಉತ್ತಮ ಸಾಧನೆ ಮಾಡಿದೆ. ಆಡಳಿತರೂಡ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಸಾಧನೆ ಉತ್ತಮವಾಗಿದೆ. 

ಕೋನರೆಡ್ಡಿ ಕಾಂಗ್ರೆಸ್‌ಗೆ
ಬೆಳಗಾವಿಯ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ ಅವರು ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು.

Follow Us:
Download App:
  • android
  • ios