ಬೆಳಗಾವಿ(ಅ.28): ಕ್ಲುಲಕ ಕಾರಣಕ್ಕೆ ಒಬ್ಬರಿಗೊಬ್ಬರು ಬಡೆದಾಡಿಕೊಂಡ ಘಟನೆ ಜಿಲ್ಲೆಯ ಖಾನಾಪೂರ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಕರಿಂ ಲಾಲಾ ತೆಲಗಿ ಅಳಿಯನಾದ ಯುತ್ ಕಾಂಗ್ರೆಸ್ ಅಧ್ಯಕ್ಷ‌ ಇರ್ಪಾನ್ ತಾಳಿಕೋಟಿ ಮತ್ತು‌ ಪಟ್ಟಣ ಪಂ. ಸದಸ್ಯ ರಪಿಕ್ ವಾರಿಮನಿ‌ ನಡುವೆ ಮಾರಾಮಾರಿ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇವರಿಬ್ಬರು ಪರಸ್ಪರ ನಡು ರಸ್ತೆಯಲ್ಲಿ ಬಡಿದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಕೈಯಲ್ಲಿ ಚಪ್ಪಲಿ ಹಿಡಿದುಕ್ಕೊಂಡು ಒಬ್ಬರಿಗೊಬ್ಬರು ಹಿಗ್ಗಾ ಮುಗ್ಗಾ ಥಳಿಸಿಕ್ಕೊಂಡಿದ್ದಾರೆ. ಈ ಸಂಬಂಧ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.