ಹುಕ್ಕೇರಿ(ಮೇ.01): ಇಲ್ಲಿನ ಗ್ರಾ.ಪಂ. ಸದಸ್ಯರೊಬ್ಬರು ತಮ್ಮ ಮನೆಯನ್ನೇ ಅಡವಿಟ್ಟು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಡವರು, ನಿರ್ಗತಿಕರು ಹಾಗೂ ಕೂಲಿ ಕಾರ್ಮಿರಿಗೆ ನೆರವಿಗೆ ಧಾವಿಸಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

ಹುಕ್ಕೇರಿ ತಾಲೂಕಿನ ಗವನಾಳದ ಗ್ರಾಪಂ ಸದಸ್ಯ ಶ್ರೀನಿವಾಸ ವ್ಯಾಪಾರಿ ತಮ್ಮ ಮನೆಯ ಮೇಲೆ ಸಾಲ ಮಾಡಿ, ಗ್ರಾಮದ ಸುಮಾರು 200ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ 1 ಲಕ್ಷ ಲಕ್ಷ ಮೌಲ್ಯದ ದಿನಸಿ ಪದಾರ್ಥಗಳನ್ನು ವಿತರಿಸಿದ್ದಾರೆ. 

ಉತ್ತರ ಕನ್ನಡ ಈಗ ಕೊರೋನಾ ವೈರಸ್ ಮುಕ್ತ

ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಖಾರ, ಸಾಬೂನು ಸೇರಿದಂತೆ ಅವಶ್ಯಕ ವಸ್ತುಗಳು ಕಿಟ್‌ನಲ್ಲಿದ್ದು, ಸ್ವತಃ ಶ್ರೀನಿವಾಸ್‌ ಅವರೇ ತಮ್ಮ ಸಂಗಡಿಗರೊಂದಿಗೆ ಎರಡು ತಳ್ಳುಗಾಡಿಯಲ್ಲಿ ದಿನಸಿ ಪದಾರ್ಥಗಳನ್ನು ಹೇರಿಕೊಂಡು ಬಡ ಕುಟುಂಬಗಳು ನೆಲೆಸಿರುವ ಪ್ರದೇಶಕ್ಕೆ ತೆರಳಿ ಗುರುವಾರ ಪಡಿತರ ವಿತರಿಸಿದರು. ನೆರೆಹಾವಳಿ ಸಂದರ್ಭದಲ್ಲೂ ಶ್ರೀನಿವಾಸ್‌ ತಮ್ಮ ಸ್ವಂತ ಖರ್ಚಿನಿಂದಲೇ ಗ್ರಾಮಸ್ಥರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಾಮಾನ್ಯ ಜನರಿಂದ ಸೆಲಿಬ್ರಿಟಿವರೆಗೂ ಹಲವರು ಹಲವು ರೀತಿಯಲ್ಲಿ ಸಂಕಷ್ಟಕ್ಕೆ ನೆರವಾಗಿದ್ದಾರೆ. ಎಲ್ಲರೂ ತಮ್ಮ ಕೈಲಾದ ಮಟ್ಟಿಗಿನ ಆರ್ಥಿಕ ಸಹಾಯ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಮಲ್ಪೆಯಲ್ಲಿ ಮೀನು ಹೆಕ್ಕುವ ಶಾರದಕ್ಕೆ ಎಂಬಾಕೆ ಮನೆ ಕಟ್ಟಲು ಕೂಡಿಟ್ಟ ಹಣವನ್ನು ಸಂಕಷ್ಟದಲ್ಲಿರುವ ಜನರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.