ಬೆಳಗಾವಿ/ಅಥಣಿ(ನ.15): ಇಂದು ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಹಮ್ಮಿಕೊಂಡಿದ್ದ ಪ್ರತಿಭಟನೆ ದಿಢೀರ್ ರದ್ದಾಗಿದೆ. 

ಡಿಸಿಎಂ‌ ಲಕ್ಷ್ಮಣ ಸವದಿ ಅವರಿಗೆ ಅಥಣಿ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹಿಸಿ ಸವದಿ ಅವರ ಅಭಿಮಾನಿಗಳು, ಬೆಂಬಲಿಗರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆದರೆ, ಸ್ವತಃ ಲಕ್ಷ್ಮಣ ಸವದಿ ಅವರೇ ಪ್ರತಿಭಟನೆ ರದ್ದು ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಭಟನೆಯಿಂದಾಗಿ ಪಕ್ಷಕ್ಕೆ ಮುಜುಗರ ಉಂಟಾಗುವ ಹಿನ್ನೆಲೆಯಲ್ಲಿ ಸವದಿ ಅವರು ಪ್ರತಿಭಟನೆ ರದ್ದು ಮಾಡುವಂತೆ ಸೂಚಿಸಿದ್ದರು 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಸಿಎಂ ಸವದಿ ಸೂಚನೆ ಮೇರೆಗೆ ಬೆಂಬಲಿಗರು ಪ್ರತಿಭಟನೆಯನ್ನು ರದ್ದು ಮಾಡಿದ್ದಾರೆ. ಪ್ರತಿಭಟನೆ ದಿಢೀರ್ ರದ್ದು ಮಾಡಿದ್ದರಿಂದ ಸವದಿ ಅವರ ಬೆಂಬಲಿಗರು ತರಾತುರಿಯಲ್ಲಿ ವಾಟ್ಸಾಪ್, ಮೆಸೆಂಜರ್ ನಲ್ಲಿ ಸಂದೇಶ ರವಾನಿಸಿದ್ದಾರೆ. 
ಇಂದು ಬೆಳಿಗ್ಗೆ 10 ಗಂಟೆಗೆ ಅಥಣಿ ಪಟ್ಟಣದ ಸಿದ್ದೇಶ್ವರ ದೇಗುಲದಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು.