Asianet Suvarna News Asianet Suvarna News

15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ: ಸಿಎಂ ಯಡಿಯೂರಪ್ಪ

15 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲುಲಿದ್ದಾರೆ ಎಂದ  ಯಡಿಯೂರಪ್ಪ| ಸುಪ್ರಿಂ ಕೋರ್ಟ್ ತೀರ್ಪಿನ ನಂತರ  ಅಭ್ಯರ್ಥಿಗಳ ಹೆಸರು ಆಯ್ಕೆ ಪ್ರಕ್ರಿಯೆ| ಹಿಂದಿನ ಸರಕಾರ ಮಾಡಿರುವ ಸಾಲ ಮನ್ನಾ ಭಾರವಾಗಿದೆ| ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿದೆ| ಪ್ರವಾಹ ಪೀಡಿತ ಗ್ರಾಮಗಳು ಶಿಫ್ಟ್ ಗೆ ಮುಂದೆ ಬಂದರೆ, ಆ ಗ್ರಾಮಗಳನ್ನ ಶಿಫ್ಟ್  ಮಾಡುತ್ತೆವೆ|

BJP Win 15 Assembly constituencies in ByElection: CM Yediyurappa
Author
Bengaluru, First Published Oct 16, 2019, 10:19 AM IST

ಬೆಳಗಾವಿ[ಅ.16]: ಶಾಸಕರ ಅನರ್ಹತೆಯಿಂದ ಉಪಚುಣಾವಣೆ ಮಹತ್ತರ ಚುಣಾವಣೆಯಾಗಿದೆ,ಈಗಾಗಲೇ ಸಚಿವರನ್ನ 15 ಕ್ಷೇತ್ರಗಳಿಗೆ ಉಸ್ತುವಾರಿ ವಹಿಸಿದ್ದೇನೆ, 15 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ಸರ್ಕಿಟ್ ಹೌಸನಲ್ಲಿ ಮಾತನಾಡಿದ ಅವರು, ಸುಪ್ರಿಂ ಕೋರ್ಟ್ ತೀರ್ಪಿನ ನಂತರ  ಅಭ್ಯರ್ಥಿಗಳ ಹೆಸರು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹಿಂದಿನ ಸರಕಾರ ಮಾಡಿರುವ ಸಾಲ ಮನ್ನಾ ಭಾರವಾಗಿದೆ, ಅದನ್ನೆ ಇಂಪ್ಲಿಮೆಂಟ್ ಮಾಡ್ತಾ ಇದಿವಿ, ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದಿದೆ, ಪ್ರವಾಹ ಪೀಡಿತ ಗ್ರಾಮಗಳು ಶಿಫ್ಟ್ ಗೆ ಮುಂದೆ ಬಂದರೆ, ಆ ಗ್ರಾಮಗಳನ್ನ ಶಿಫ್ಟ್  ಮಾಡುತ್ತೆವೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಲಾಗುತ್ತಿದೆ. ಸಂತ್ರಸ್ಥರಿಗೆ ಯಾವುದೇ ರಿತಿಯ ಸಮಸ್ಯೆ ಆಗದಂತೆ ನೋಡಿಕ್ಕೊಳ್ಳುವೆ, ಹಿಂದಿನ ಸರಕಾರ ಸಾಲ ಮನ್ನಾ  ನಾವು ಮುಂದುವರೆಸುತ್ತೆವೆ. ಅದಕ್ಕೆ ನಾವೂ ಅಡ್ಡಿ ಮಾಡಲ್ಲ, ಹೊಸದಾಗಿ ಸಾಲ ಮನ್ನಾ ಮಾಡುವ ಪರಿಸ್ಥಿತಿ ಸರಿ ಇಲ್ಲ, ನಮ್ಮ‌ ಆದ್ಯತೆ ನಿರಾವರಿಗೆ ಕೊಡಲಾಗಿದೆ ಎಂದು ಹೇಳಿದ್ದಾರೆ. 

ಸ್ಥಳೀಯ ಶಾಸಕರೊಂದಿಗೆ ಸಿಎಂ ಮಾತುಕತೆ

ಸ್ಥಳೀಯ ಶಾಸಕರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ಸ್ಥಳೀಯ ಶಾಸಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಉಮೇಶ ಕತ್ತಿಗೆ ಒಳ್ಳೆಯ ಸ್ಥಾನ ನೀಡುವಂತೆ ಸ್ಥಳೀಯ ಶಾಸಕರ ಆಗ್ರದ್ದಾರೆ. ಉಪಚುನಾವಣೆಯಲ್ಲಿ ಬೆಳಗಾವಿ ಮೂರು ಕ್ಷೇತ್ರ ಗೆಲ್ಲುವ ಕುರಿತು ಕೂಡ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಶಾಸಕ ಉಮೇಶ್ ಕತ್ತಿ, ಅನಿಲ ಬೆನಕೆ, ಅಭಯ್ ಪಾಟೀಲ್, ಮಹಾಂತೇಶ್ ಕವಟಗಿಮಟ ಅವರು ಭಾಗಿಯಾಗಿದ್ದಾರೆ.
 

Follow Us:
Download App:
  • android
  • ios