ತಾಯಿ ಸಾವಿನ ಧಾರ್ಮಿಕ ವಿಧಿ ವಿಧಾನಕ್ಕೆ ತವರಿಗೆ ಹೊರಟ ಪತ್ನಿ ಹತ್ಯೆ,, ಮಗನಿಗೆ ಅಡುಗೆ ಮಾಡಿಟ್ಟು ತವರಿಗೆ ಹೊರಟ್ಟಿದ್ದ ಪತ್ನಿಯನ್ನು ಕೊಂದಿದ್ದು ಮಾತ್ರವಲ್ಲ, ತಾನೂ ಬದುಕು ಅಂತ್ಯಗೊಳಿಸಿದ ಘಟನೆ ನಡೆದಿದೆ. 

ಬೆಳಗಾವಿ (ಜ.10) ತಾಯಿ ಅಗಲಿಕೆ ನೋವಿನಲ್ಲಿದ್ದ ಪತ್ನಿಯನ್ನೇ ಹತ್ಯೆಗೈದ ಭೀಕರ ಘಟನೆ ಬೆಳಾಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ಸಾವಿನ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು ತವರಿಗೆ ಹೊರಟ ಪತ್ನಿಯನ್ನು ಗಂಡ ತಡೆದಿದ್ದಾನೆ. ತವರಿಗೆ ಹೋಗದಂತೆ ಸೂಚಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ತವರಿಗೆ ಹೋಗದಂತೆ ತಡೆಯಲು ಪತಿಯನ್ನು ಮನ ಒಲಿಸಿ ತವರಿನತ್ತ ಹೆಜ್ಜೆ ಹಾಕಲು ಹೊರಟ ಪತ್ನಿಯನ್ನು ಹಿಂದಿನಿಂದು ಬಂದು ಹತ್ಯೆಗೈಯಲಾಗಿದೆ. ಕಿತ್ತೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತವರು ಮನೆಗೆ ಹೊರಟಿದ್ದ ಹೆಂಡತಿ ಜೊತೆ ಗಲಾಟೆ

46 ವರ್ಷದ ಶಿವಪ್ಪ ಸಣ್ಣಬಸಪ್ಪ ಹಾಗೂ ಪತ್ನಿ 40ರ ಹರೆಯದ ಯಲ್ಲವ್ವ ಶಿವಪ್ಪ ಕಂಬಳಿ ಇಬ್ಬರು ದುರಂತ ಅಂತ್ಯಕಂಡಿದ್ದಾರೆ. ಯಲ್ಲವ್ವ ತಾಯಿ ನಿಧನರಾಗಿ ಒಂದು ವಾರ ಕಳೆದಿದೆ. ತಾಯಿ ನಿಧನದ ವೇಳೆ ತವರಿಗೆ ಹೋಗಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಯಲ್ಲವ್ವ ಬಳಿಕ ಗಂಡನ ಮನೆಗೆ ಮರಳಿದ್ದರು. ಅಂತ್ಯಸಂಸ್ಕಾರದ ಮುಗಸಿ ಮನೆಗೆ ಮರಳುವಷ್ಟರಲ್ಲಿ ತಡವಾಗಿದ್ದರಿಂದ ಗಲಾಟೆ ನಡೆದಿತ್ತು. ಅದೇ ದಿನ ಮರಳಲು ಯಲ್ಲವ್ವನಿಗೆ ಸಾಧ್ಯವಾಗಿರಲಿಲ್ಲ. ತಾಯಿ ನಿಧನದ ಶೋಕದಲ್ಲಿರುವ ಮನೆಯಿಂದ ಹೇಗೆ ಬರಲಿ ಎಂದು ಮರು ದಿನ ಗಂಡನ ಮನೆಗೆ ಮರಳಿದ್ದರು. ಆದರೆ ತಾಯಿ ಶೋಕ ಯಾವುದನ್ನು ಲೆಕ್ಕಿಸಿದ ಗಂಡ ಶಿವಪ್ಪ ಸಣ್ಣಬಸಪ್ಪ, ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಒಂದು ವಾರದ ಬಳಿಕ ತಾಯಿ ಸಾವಿನ ವಿಧಿವಿಧಾನ ಪೂರೈಸಲು ಮತ್ತೆ ತವರಿಗೆ ಹೊರಟ ಪತ್ನಿಯನ್ನು ನೋಡಿ ಗಂಡ ಶಿವಪ್ಪ ನ ಕಣ್ಣು ಕಂಪಾಗಿದೆ. ಪತ್ನಿ ಜೊತೆ ಜಗಳ ಶುರುಮಾಡಿದ್ದಾನೆ.

ತಾಯಿ ನಿಧನರಾಗಿ ಒಂದು ವಾರ ಆಗಿದೆ ಹೋಗಿ ಬರ್ತೇನೆ

ತಾಯಿ ನಿಧನರಾಗಿ ಒಂದು ವಾರ ಆಗಿದಿ. ವಿಧಿ ವಿದಾನ ನೇರವೇರಿಸಲು ಇದೆ ಎಂದು ಯಲ್ಲವ್ವ ತವರಿಗೆ ಹೊರಟಿದ್ದಾಳೆ. ಸಿಹಿ ಅಡುಗೆ ಮಾಡಿಕೊಂಡು ತವರಿಗೆ ಹೋಗಲು ಎಲ್ಲಾ ತಯಾರಿ ಮಾಡಿದ್ದಾರೆ. ಇದರ ನಡುವೆ ಗಂಡನ ಗಲಾಟೆ ಶುರುವಾಗಿದೆ. ಹಲವು ಬಾರಿ ಗಂಡನ ಮನ ಒಲಿಸುವ ಪ್ರಯತ್ನ ಮಾಡಿದ್ದಾಳೆ. ಆದರೆ ಸಾಧ್ಯವಾಗಿಲ್ಲ. ಹೋಗಲೇಬೇಕಾಗಿದೆ, ಕಳುಹಿಸಿಕೊಡಿ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ.

ಮಗನಿಗೆ ಅಡುಗೆ ಮಾಡಿಟ್ಟು ಹೊರಟ ಯಲ್ಲವ್ವ

ಮಗನಿಗೆ ಅಡುಗೆ ಮಾಡಿಟ್ಟು ತವರಿಗೆ ಹೊರಟಿದ್ದಾರೆ. ಸ್ನಾನ ಮಾಡಿ ತವರಿಗೆ ಹೊರಡಲು ಸಜ್ಜಾಗುತ್ತಿದ್ದಂತೆ ಶಿವಪ್ಪ ಬೆನ್ನು ಹಾಗೂ ಕುತ್ತಿಗೆಗೆ ಕೊಡಲಿಯಿಂದ ದಾಳಿ ಮಾಡಿದ್ದಾನೆ. ಒಂದೇ ಎಟಿಗೆ ಪತ್ನಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ.

ಹತ್ಯೆ ಬೆನ್ನಲ್ಲೇ ತಾನೂ ದುರಂತ ಅಂತ್ಯ

ಪತ್ನಿಯನ್ನು ಹತ್ಯೆ ಮಾಡಿದ ಬೆನ್ನಲ್ಲೇ ಶಿವಪ್ಪನ ಮದ ಇಳಿದಿದೆ. ಅಷ್ಟು ಹೊತ್ತಿಗೆ ಕಾಲ ಮಿಂಚಿ ಹೋಗಿದೆ. ಘಟನೆ ಊರಿಗೆ ತಿಳಿಯುವ ಮೊದಲೇ ಶಿವಪ್ಪ ಬದುಕು ಅಂತ್ಯಗೊಳಿಸಿದ್ದಾನೆ. ಘಟನಾ ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.