Asianet Suvarna News Asianet Suvarna News

Bank of India Recruitment 2022: ವಿಶೇಷ ಭದ್ರತಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬ್ಯಾಂಕ್​ ಆಫ್​ ಇಂಡಿಯಾ

  • ವಿಶೇಷ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬ್ಯಾಂಕ್ ಆಫ್​ ಇಂಡಿಯಾ
  • ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ಜ.7 ಕೊನೆ ದಿನ
  • ಒಟ್ಟು 25 ವಿಶೇಷ ಭದ್ರತಾ ಅಧಿಕಾರಿ ಹುದ್ದೆಗಳು ಖಾಲಿ
Security Officer Vacancies in Bank of India apply now gow
Author
Bengaluru, First Published Dec 24, 2021, 3:59 PM IST

ಬೆಂಗಳೂರು(ಡಿ.24): ಬ್ಯಾಂಕ್ ಆಫ್​ ಇಂಡಿಯಾ (Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 25 ವಿಶೇಷ ಭದ್ರತಾ ಅಧಿಕಾರಿ (Special Security Officer) ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 7, 2022 ಆಗಿದೆ. ಅಭ್ಯರ್ಥಿಗಳು ಬ್ಯಾಂಕ್​ ಆಫ್​ ಇಂಡಿಯಾದ ಅಧಿಕೃತ ವೆಬ್​ ತಾಣ ​ www.bankofindia.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಗೆ ತಿಳಿದುಕೊಳ್ಳಬಹುದು.

ಅರ್ಜಿ ಶುಲ್ಕ ವಿವರ: ಬ್ಯಾಂಕ್ ಆಫ್​ ಇಂಡಿಯಾದ ವಿಶೇಷ ಭದ್ರತಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಹಾಗೆಯೇ ಎಸ್​ಸಿ/ಎಸ್​ಟಿ ಅಭ್ಯರ್ಥಿಗಳಿಗೆ 175 ರೂ.  ಪಾವತಿಸಬೇಕು. ಆನ್ಲೈನ್​ ಪೇಮೆಂಟ್ ಮೂಲಕ ಪಾವತಿಸಬೇಕು.

ವಿದ್ಯಾರ್ಹತೆ ಮತ್ತು ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಯಾವುದಾದರು ಒಂದು  ವಿಷಯದಲ್ಲಿ ಪದವಿ ಪಡೆದಿರಬೇಕು.  ಮತ್ತು ಅಭ್ಯರ್ಥಿಗಳ ವಯಸ್ಸು 25-40 ವರ್ಷದೊಳಗಿರಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ವಿಶೇಷ ಭದ್ರತಾ ಅಧಿಕಾರಿ ಹುದ್ದೆಗಳಿಗೆ  ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು  ಮಹಾರಾಷ್ಟ್ರದ ಮುಂಬೈನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ವಿಶೇಷ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

UPCOMING GOVERNMENT EXAMS 2022: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ 2022ರಲ್ಲಿ ಭರ್ಜರಿ ಅವಕಾಶ

ಸ್ನಾತಕೋತ್ತರ ಪದವೀಧರರಿಗೆ ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗ: ಬೆಂಗಳೂರು(ಡಿ.20): ಯೂನಿಯನ್ ಬ್ಯಾಂಕ್​ ಆಫ್​ ಇಂಡಿಯಾ (Union Bank of India)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು  ಜನವರಿ 7, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  ಅನಾಲಿಸ್ಟ್​ ಟೀಂ, ಎಕನಾಮಿಸ್ಟ್​ ಟೀಂ, ಡಿಜಿಟಲ್​ ಟೀಂ, ರಿಸರ್ಚ್​ ಟೀಂ, API ಮ್ಯಾನೇಜ್ಮೆಂಟ್​​ ಟೀಮ್ ಹೀಗೆ ಒಟ್ಟು  25 ​ ಹುದ್ದೆಗಳು ಖಾಲಿ ಇದೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ತಾಣ bankifsccode.com ಗೆ ಭೇಟಿ ನೀಡಿ ಮಾಡಹಿತಿ ಪಡೆದುಕೊಳ್ಳಬಹುದು.

Udupi Anganwadi Recruitment 2022: ಉಡುಪಿ ಅಂಗನವಾಡಿ ಹುದ್ದೆಗಳು,ಆಸಿಡ್ ಸಂತ್ರಸ್ತರು

ಯೂನಿಯನ್ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ 25 ​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಬಿಇ, ಬಿ.ಟೆಕ್, ಬಿಎಸ್ಸಿ, ಎಂಎಸ್ಸಿ, ಎಂಬಿಎ, ಎಂಎ, ಎಂ.ಟೆಕ್​, ಎಂಸಿಎ ಪೂರ್ಣಗೊಳಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

CA, MBA, PGDBM ಆದವರಿಗೆ ಅಭ್ಯುದಯ ಬ್ಯಾಂಕ್ ನಲ್ಲಿ  ಉದ್ಯೋಗ: ಅಭ್ಯುದಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Abhyudaya Co-Operative Bank Ltd)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 15 ಮ್ಯಾನೇಜ್​​ಮೆಂಟ್​ ಟ್ರೇನಿ (Management Trainee) ಹುದ್ದೆಗಳು ಖಾಲಿ ಇದೆ. ಸಿಎ, ಎಂಬಿಎ, ಪಿಜಿಡಿಬಿಎಂ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು  ಆನ್​ಲೈನ್​(Online)ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜನವರಿ 3, 2022 ಆಗಿದೆ. ಅಭ್ಯರ್ಥಿಗಳು ಅಭ್ಯುದಯ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ ​abhyudayabank.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ  ಪಡೆದುಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios