Asianet Suvarna News Asianet Suvarna News

Upcoming Government Exams 2022: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ 2022ರಲ್ಲಿ ಭರ್ಜರಿ ಅವಕಾಶ

  • ನೇಮಕಾತಿ ಪರೀಕ್ಷೆಗಳ ವರ್ಷವಾಗಲಿದೆ 2022 
  • 2022ರಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ನೇಮಕಾತಿ ಪರೀಕ್ಷೆ 
  • UPSC,SSC,RRB ಸೇರಿದಂತೆ ಅನೇಕ ದೊಡ್ಡ ನೇಮಕಾತಿ
Upcoming  Government Exams in 2022 check details gow
Author
Bengaluru, First Published Dec 24, 2021, 2:30 PM IST

ಬೆಂಗಳೂರು(ಡಿ.24): 2022ನೇ ವರ್ಷಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಸಾಕಷ್ಟು ಅವಕಾಶ ಸಿಗಲಿದೆ. 2022 ನೇ ಇಸವಿಯು ನೇಮಕಾತಿ ಪರೀಕ್ಷೆಗಳ ವರ್ಷವಾಗಲಿದೆ ಎಂದರೆ ತಪ್ಪಲ್ಲ. ಏಕೆಂದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವು ನೇಮಕಾತಿ ಪರೀಕ್ಷೆಗಳು 2022ರಲ್ಲಿ ನಡೆಯುವುದು ಪಕ್ಕಾ ಆಗಿದೆ. ಮುಂದಿನ ವರ್ಷ UPSC(UNION PUBLIC SERVICE COMMISSION), SSC, RRB ಸೇರಿದಂತೆ ಅನೇಕ ದೊಡ್ಡ ನೇಮಕಾತಿ ನಡೆಯಲಿದೆ.

ಯುಪಿಎಸ್‌ಸಿ, ಸಿವಿಲ್ ಸರ್ವೀಸಸ್ ಪೆಲಿಮ್ಸ್ 2022 (Civil Services Prelims) ಮತ್ತು ಭಾರತೀಯ ಅರಣ್ಯ ಸೇವೆ (Indian Forest Service -IFS) ಪ್ರಿಲಿಮ್ಸ್  ಪರೀಕ್ಷೆಗೆ ಫೆಬ್ರವರಿ 2ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 22, 2022 ಆಗಿದೆ. ಬಳಿಕ  ಪೂರ್ವಭಾವಿ ಪರೀಕ್ಷೆಗಳು ಜೂನ್ 5 ರಂದು ನಡೆಯಲಿದೆ. ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16, 2022 ರಂದು ನಡೆಯಲಿದೆ. ಇದೇ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆ ಇಲಾಖೆಯ ಮುಖ್ಯ ಪರೀಕ್ಷೆಯನ್ನು ನವೆಂಬರ್ 20, 2022 ರಂದು ನಡೆಸಲು ತೀರ್ಮಾನಿಸಲಾಗಿದೆ.

ಯುಪಿಎಸ್‌ಸಿ,  NDA 1 ಮತ್ತು ಯುಪಿಎಸ್‌ಸಿ CDS 1 ನ ಮೊದಲ ಪರೀಕ್ಷೆಗಳಿಗೆ ಅರ್ಜಿ ಪ್ರಕ್ರಿಯೆ ಡಿಸೆಂಬರ್ 22, 2021 ರಿಂದ ಪ್ರಾರಂಭವಾಗಿದ್ದು, ಜನವರಿ 11, 2022 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಇದಕ್ಕೆ ಏಪ್ರಿಲ್ 10, 2022 ರಂದು ಪರೀಕ್ಷೆ ನಡೆಯಲಿದೆ. ಯುಪಿಎಸ್‌ಸಿ NDA 2 ಮತ್ತು ಯುಪಿಎಸ್‌ಸಿ CDS 2 ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಮೇ 18 ರಿಂದ ಜೂನ್ 14 ,2022 ರವರೆಗೆ ನಡೆಯಲಿದೆ. ಪರೀಕ್ಷೆಯು 2022ರ ಸೆಪ್ಟೆಂಬರ್ 4ರಂದು ನಡೆಯಲಿದೆ.

UDUPI ANGANWADI RECRUITMENT 2022: ಉಡುಪಿ ಅಂಗನವಾಡಿ ಹುದ್ದೆಗಳು,ಆಸಿಡ್ ಸಂತ್ರಸ್ತರು, ವಿಧವೆಯರು, ಅಂಗವಿಕಲರಿಗೆ ಆದ್ಯತೆ

ಇಷ್ಟು ಮಾತ್ರವಲ್ಲ  ಯುಪಿಎಸ್‌ಸಿಯ ಐಎಎಸ್ (Indian Administrative Service) ಪರೀಕ್ಷೆ ಫೆಬ್ರವರಿ 2 ರಿಂದ 22 ರವರೆಗೆ ನಡೆಯಲಿದೆ. ಸಿಎಂಸ್ (Combined Medical Services Exam -CMS)ಪರೀಕ್ಷೆಯು ಎಪ್ರಿಲ್ 6 ರಿಂದ ಎಪ್ರಿಲ್ 26ರವರೆಗೆ ನಡೆಯಲಿದೆ. ಸಿಎಪಿಎಫ್ (Central Armed Police Force)AC Exam ಎಪ್ರಿಲ್ 20 ರಿಂದ ಮೇ 10ರವರೆಗೆ ನಡೆಯಲಿದೆ. 

ಬರೋಬ್ಬರಿ ಎರಡೂವರೆ ವರ್ಷಗಳ ನಂತರ ರೈಲ್ವೇ ನೇಮಕಾತಿ ಮಂಡಳಿ, ಗ್ರೂಪ್ ಡಿ ನೇಮಕಾತಿ ಪರೀಕ್ಷೆಯ ದಿನಾಂಕಗಳನ್ನು ಬಿಡುಗಡೆ ಮಾಡಿದೆ. RRB(Railway Recruitment Board) ಗ್ರೂಪ್ ಡಿ ಪರೀಕ್ಷೆ ಫೆಬ್ರವರಿ 23ರಿಂದ ನಡೆಯಲಿದೆ. ಹಲವಾರು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು, 10 ದಿನಗಳ ಮೊದಲು ಆರ್‌ಆರ್‌ಬಿಯ(RRB) ಅಧಿಕೃತ ಮತ್ತು ಪ್ರಾದೇಶಿಕ ವೆಬ್‌ಸೈಟ್‌ಗಳಲ್ಲಿ ಪರೀಕ್ಷಾ ಕೇಂದ್ರ ಮತ್ತು ದಿನಾಂಕದ ಮಾಹಿತಿ ಸಿಗಲಿದೆ.

IGNOU Recruitment 2022: ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದ ಇಗ್ನೋ

RRBಯ NTPC CBT-2(Computer Based Test) ಪರೀಕ್ಷೆ ದಿನಾಂಕ ಪ್ರಕಟವಾಗಿದೆ. RRBಯ, NTPC CBT-2  ಪರೀಕ್ಷೆ ಫೆಬ್ರವವರಿ 14ರಿಂದ ಫೆಬ್ರವರಿ 18 ಫೆಬ್ರವರಿವರೆಗೆ ನಡೆಯಲಿದೆ. ಒಟ್ಟು 35,208 NTPC (Non-Technical Popular Categories)ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ  ಮಾಡಿಕೊಳ್ಳಲಾಗುತ್ತಿದೆ.

2022ರ  SSC ಪರೀಕ್ಷೆಗಳು: ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission -SSC) ಮುಂದೆ ಬರುವ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.   ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜನವರಿ 2022 ಕೊನೆಯ ದಿನವಾಗಿದೆ. SSC ಆಯೋಗದ ಸಿಜಿಎಲ್ (Combined Graduate Level-CGL) ಎಪ್ರಿಲ್ ನಲ್ಲಿ ಪರೀಕ್ಷೆ ನಡೆಯಲಿದೆ. SSC ಆಯೋಗದ ಸಿಎಚ್ಎಸ್ಎಲ್ (combined higher secondary level -CHSL) ಪರೀಕ್ಷೆ ಫೆಬ್ರವರಿ 1ರಿಂದ ಮಾರ್ಚ್ 7ರವರೆಗೆ ನಡೆಯಲಿದೆ. ಮಾತ್ರವಲ್ಲ ಎಂಟಿಎಸ್ ಸ್ಟೆನೋಗ್ರಾಫರ್, ಜಿಡಿ ಕಾನ್ಸ್ ಟೇಬಲ್ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳು ಕೂಡ ಡಿಸೆಂಬರ್ 2022 ರ ಒಳಗೆ ನಡೆಯಲಿದೆ ಎಂದು  ಸ್ಟಾಫ್ ಸೆಲೆಕ್ಷನ್ ಕಮಿಷನ್ ಪ್ರಕಟಿಸಿದೆ.

Follow Us:
Download App:
  • android
  • ios