ಎಸ್‌ಬಿಐ ಜಾಬ್‌ಗೆ ಅರ್ಜಿ ಸಲ್ಲಿಸಲು ವಿಳಂಬವಾಯ್ತೆ? ಡೋಂಟ್ ವರಿ, ಮೇ 20ರವರೆಗೂ ಡೇಟ್ ವಿಸ್ತರಣೆ
ಸರ್ಕಾರ ಸ್ವಾಮ್ಯದ ಪ್ರಮುಖ ಹಾಗೂ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 17 ಕೊನೆಯ ದಿನವಾಗಿತ್ತು. ಇದೀಗ ಬ್ಯಾಂಕ್ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿ ದಿನಾಂಕವನ್ನು ಮೇ 20ರವರೆಗೂ ವಿಸ್ತರಿಸಿದೆ. ಹಾಗಾಗಿ, ಆಸಕ್ತರು ಮತ್ತೆ ಅರ್ಜಿ ಸಲ್ಲಿಸಬಹುದು.
ಸ್ಟೇಟ್ ಬ್ಯಾಂಕ್ ಇಂಡಿಯಾ, ಜ್ಯೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಆಹ್ವಾನಿಸಿದ್ದ ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮತ್ತಷ್ಟು ವಿಸ್ತರಣೆಯಾಗಿದೆ. ಎಸ್‌ಬಿಐನ ಜ್ಯೂನಿಯರ್ ಅಸೋಸಿಯೇಟ್ಸ್(ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಮೇ ೨೦ರವರೆಗೂ ಸಮಯಾವಕಾಶ ನೀಡಲಾಗಿದೆ. ಕರ್ನಾಟಕದ ೫೦೯ ಹುದ್ದೆಗಳು ಸೇರಿದಂತೆ ದೇಶಾದ್ಯಂತ ಖಾಲಿಯಿರುವ ಒಟ್ಟು ೫೨೩೭ ಹುದ್ದೆಗಳಿಗೆ ಎಸ್‌ಬಿಐ ಅರ್ಜಿ ಆಹ್ವಾನಿಸಿದೆ.
ಈ ಮುಂಚೆ ಹೊರಡಿಸಲಾಗಿದ್ದ ನೋಟಿಸ್‌ನಲ್ಲಿ ಎಸ್‌ಬಿಐ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ ೧೭ ಕೊನೆಯ ದಿನವಾಗಿತ್ತು. ಇದೀಗ ಮತ್ತೆ ಮೂರು ದಿನಗಳ ಕಾಲ ವಿಸ್ತರಣೆಯಾಗಿದೆ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮೇ ೨೦ರೊಳಗೆ ಅರ್ಜಿ ಸಲ್ಲಿಸಬಹುದು. ದಿನಾಂಕ ವಿಸ್ತರಣೆಯ ಅಧಿಸೂಚನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!
ಎಸ್‌ಬಿಐ ಅಧಿಕೃತ ವೆಬ್‌ಸೈಟ್ https://sbi.co.in. ನಲ್ಲಿ ಜ್ಯೂನಿಯರ್ ಅಸಿಸ್ಟೆಂಟ್ಸ್(ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕ ಮಾಡಿಕೊಳ್ಳುತ್ತಿರುವ 5237 ಹುದ್ದೆಗಳಲ್ಲಿ ಕರ್ನಾಟಕದಲ್ಲೇ 509 ಹುದ್ದೆಗಳಿವೆ. ಇವುಗಳಲ್ಲಿ ೧೦೯ ಹುದ್ದೆಗಳು ಬ್ಯಾಕ್ಲಾಗ್ಆಗಿದ್ದು, ಉಳಿದ ೪೦೦ ಹುದ್ದೆಗಳಿಗೆ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಎಸ್‌ಬಿಐ ಬ್ಯಾಂಕ್, ಕೊನೆಯ ದಿನಾಂಕವನ್ನು ವಿಸ್ತರಿಸುವುದರ ಜೊತೆಗೆ ಇಡಬ್ಲ್ಯೂಎಸ್ (ಬಡತನ ರೇಖೆಗಿಂತ ಕೆಳಗಿರುವ) ಅಭ್ಯರ್ಥಿಗಳಿಂದ ʼಆದಾಯ ಮತ್ತು ಆಸ್ತಿ ಪ್ರಮಾಣಪತ್ರʼ ಸಿದ್ಧ ಮಾಡಿಕೊಳ್ಳುವಂತೆಯೂ ಮಾರ್ಗಸೂಚಿಯಲ್ಲಿ ತಿಳಿಸಿದೆ. ನಿರ್ದಿಷ್ಟ ರಾಜ್ಯದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಪ್ರಾದೇಶಿಕ ಭಾಷೆಯಲ್ಲಿ (ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದು) ಪ್ರಾವೀಣ್ಯತೆ ಹೊಂದಿರಬೇಕು. ಆಯ್ಕೆ ಪ್ರಕ್ರಿಯೆ ವೇಳೆ ಪ್ರಾದೇಶಿಕ ಭಾಷೆಗೆ ಸಂಬಂಧಿಸಿದ ಜ್ಞಾನಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ.
ರೈಲ್ವೆಯಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕಾತಿ: ವಾಟ್ಸಾಪ್ ಮೂಲಕ ಅಪ್ಲೈ ಮಾಡಿ
ಜೂನ್ ೨೦೨೧ರಂದು ಪ್ರಿಲಿಮರಿ ಪರೀಕ್ಷೆ ಹಾಗೂ ಜುಲೈ ೩೧ ರಂದು ಮುಖ್ಯ ಪರೀಕ್ಷೆ ನಡೆಯುವ ನಿರೀಕ್ಷೆಯಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಅಪ್‌ಡೇಟ್ಸ್‌ಗಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗಳಿಗೆ ಆಗಾಗ ಭೇಟಿ ನೀಡುತ್ತಿರಬೇಕು. ಆನ್ಲೈನ್ ಪರೀಕ್ಷೆ ಮೂಲಕವೇ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುವುದು. ಜೊತೆಗೆ ಐಚ್ಚಿಕವಾಗಿ ಆಯಾ ರಾಜ್ಯದ ಪ್ರಾದೇಶಿಕ ಭಾಷಾ ಪರೀಕ್ಷೆ ನಡೆಯಲಿದೆ.
ಪ್ರಿಲಿಮಿನರಿ ಪರೀಕ್ಷೆಯೂ ೧೦೦ ಅಂಕಗಳಿಗೆ ನಡೆಯಲಿದ್ದು, ಅದರಲ್ಲಿ ಮೂರು ವಿಭಾಗಗಳಿರುತ್ತವೆ. ಇಂಗ್ಲೀಷ್ಭಾಷೆ, ಸಂಖ್ಯಾತ್ಮಕ ಸಾಮರ್ಥ್ಯ ಹಾಗೂ ರೀಸನಿಂಗ್ಎಬಿಲಿಟಿ- ಈ ಮೂರು ವಿಷಯಗಳನ್ನೊಳಗೊಂಡಂತೆ ೧೦೦ ಅಂಕಗಳಿಗೆ ಉತ್ತರಿಸಬೇಕಾಗುತದೆ. ಇನ್ನು ಮುಖ್ಯ ಪರೀಕ್ಷೆಯು ೨೦೦ ಅಂಕಗಳದ್ದಾಗಿದ್ದು, ೨ ಗಂಟೆ ೪೦ ನಿಮಿಷ ಕಾಲಾವಧಿ ಇರುತ್ತದೆ. ಸಾಮಾನ್ಯ ಜಾನ, ಸಾಮಾನ್ಯ ಇಂಗ್ಲೀಷ್, ಕ್ವಾಂಟೇಟಿವ್ಆಪ್ಟಿಟೂಡ್,ರೀಸನಿಂಗ್ಎಬಿಲಿಟಿ & ಕಂಪೂಟರ್ಅಪ್ಟಿಡ್ಯೂಟ್-ಈ ನಾಲ್ಕು ವಿಷಯಗಳಿಗೆ ಪರೀಕ್ಷೆ ನಡೆಯಲಿದೆ ಪ್ರತಿಯೊಂದು ವಿಷಯದ ಪರೀಕ್ಷೆಗೆ ಪ್ರತ್ಯೇಕ ಸಮಯ ನಿಗದಿಯಾಗಿರುತ್ತದೆ
ಎಸ್ಬಿಐ ಬ್ಯಾಂಕ್ಕ್ಲರ್ಕ್ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ರಿಂದ 28 ವರ್ಷದೊಳಗಿನವರಾಗಿರಬೇಕು. ಏಪ್ರಿಲ್ 1, 2021ಕ್ಕೆ ಅನ್ವಯವಾಗುವಂತೆ ಗರಿಷ್ಟ ೨೮ ವರ್ಷ ತುಂಬಿರಬೇಕು. ಅಧಿಕೃತ ಪ್ರಕಟಣೆಯ ಪ್ರಕಾರ, ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳು ಸಲ್ಲಿಸುವ ಮಾರ್ಕ್ ಶೀಟ್ / ಪ್ರಮಾಣಪತ್ರ ಅಥವಾ ವಿಶ್ವವಿದ್ಯಾಲಯ / ಸಂಸ್ಥೆ ನೀಡುವ ತಾತ್ಕಾಲಿಕ ಪ್ರಮಾಣಪತ್ರವೂ ಪರೀಕ್ಷೆಗೂ ಮುನ್ನ ದಿನಾಂಕ ಹೊಂದಿರಬೇಕು. ಎಸ್‌ಬಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ.ಇನ್ನುಳಿದಂತೆ ಸಾಮಾನ್ಯವರ್ಗ/ ಹಿಂದುಳಿದ ವರ್ಗಗಳ ಅಬ್ಯರ್ಥಿಗಳು ೭೫೦ ರೂಪಾಯಿ ಅರ್ಜಿಯ ಶುಲ್ಕ ಪಾವತಿಸಬೇಕು.
ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ