Asianet Suvarna News Asianet Suvarna News

REPCO Bank Recruitment 2022: ಖಾಲಿ ಇರುವ ಒಟ್ಟು 50 ಹುದ್ದೆಗಳಿಗೆ ಅಧಿಸೂಚನೆ

ರೆಪ್ಕೊ ಬ್ಯಾಂಕ್ ಖಾಲಿ ಇರುವ ಹುದ್ದೆಗಳ ಭರ್ತಿಗೆ  ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 50 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ತಿಗಳು ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ.

REPCO Bank Recruitment 2022 notification for  Clerk post gow
Author
First Published Nov 8, 2022, 3:51 PM IST

ನವದೆಹಲಿ (ನ.8): ರೆಪ್ಕೊ ಬ್ಯಾಂಕ್ ಖಾಲಿ ಇರುವ ಹುದ್ದೆಗಳ ಭರ್ತಿಗೆ  ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 50 ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ  ಅಭ್ಯರ್ಥಿಗಳು ಜೂನಿಯರ್ ಅಸಿಸ್ಟೆಂಟ್ಸ್ / ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ  repcobank.com ಗೆ ಭೇಟಿ ನೀಡಲು ಕೋರಲಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ರೆಪ್ಕೊ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಅಭ್ಯರ್ಥಿಗಳು ರೆಗ್ಯುಲರ್ ಬೇಸಿಸ್ ನಲ್ಲಿ 12 ನೇ ತರಗತಿ ಮತ್ತು ಯಾವುದೇ ವಿಷಯದಲ್ಲಿ ಪದವಿ ಮಾಡಿರಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು.

ಅರ್ಜಿ ಶುಲ್ಕ: ರೆಪ್ಕೊ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮನ್ಯ ಮತ್ತು ಇತರ ಅಭ್ಯರ್ಥಿಗಳು  900 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು. SC/ST/PWD/EXSM ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕ ಪಾವತಿಸಬೇಕು. 

ವಯೋಮಿತಿ: ರೆಪ್ಕೊ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಅಭ್ಯರ್ಥಿಗಳು 21 ರಿಂದ 28 ವರ್ಷದ ಒಳಗಿನವರಾಗಿರಬೇಕು. 

ಆಯ್ಕೆ ಪ್ರಕ್ರಿಯೆ: ರೆಪ್ಕೊ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಬ್ಯಾಂಕ್ ನಡೆಸುವ ಆನ್‌ಲೈನ್ ಪರೀಕ್ಷೆಗೆ ಹಾಜರಾಗಬೇಕು.  ಅದರಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳನ್ನು ಮೂಲ ಪ್ರಮಾಣಪತ್ರಗಳ ಪರಿಶೀಲನೆಗೆ ಕರೆಯಲಾಗುವುದು. ದಾಖಲಾತಿ ಪರಿಶೀಲನೆ ನಂತರ ಆಯ್ಕೆಯ ಬಗ್ಗೆ ತಿಳಿಸಲಾಗುತ್ತದೆ.

ವೇತನ ವಿವರ: ರೆಪ್ಕೊ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 17,900 ರೂ ನಿಂದ 47,920 ರೂ ವರೆಗ ವೇತನ ದೊರೆಯಲಿದೆ.

ಬ್ಯಾಂಕ್‌ ಹುದ್ದೆಗಳೂ ಕನ್ನಡಿಗರಿಗೆ ಮರೀಚಿಕೆ..!

ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕೋಲಾರ: 2022-23ನೇ ಸಾಲಿಗೆ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗ ಕೋರ್ಸ್‌ಗಳ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಮಂಜೂರಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ನಿಗದಿಪಡಿಸಲಾದ ಶಿಕ್ಷಣಕ್ಕೆ ವಾರ್ಷಿಕ ಗರಿಷ್ಠ 1 ಲಕ್ಷ ರು.ಗಳಂತೆ ಅಥವಾ ವ್ಯಾಸಂಗದ ವಾಸ್ತವಿಕ ವೆಚ್ಚದ ಮಿತಿಗೆ ಒಳಪಟ್ಟು ಕೋರ್ಸ್‌ ಅವಧಿ ಅನುಸಾರ ಗರಿಷ್ಠ 4 ಲಕ್ಷ ರು.ಗಳಿಂದ 5 ಲಕ್ಷ ರು.ವರೆಗೆ ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಸಾಲ ಪಡೆಯಬಯಸುವ ವಿದ್ಯಾರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನವು 3.50 ಲಕ್ಷ ರು.ಮೀರಿರಬಾರದು. ವಿದ್ಯಾರ್ಥಿಯು ಸರ್ಕಾರಿ ಕಾಲೇಜು/ಮಾನ್ಯತೆ ಪಡೆದ ಅನುದಾನಿತ ಅಥವಾ ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್‌ಗಳಲ್ಲಿ ಸಿ.ಇ.ಟಿ. ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು.

IBPS RECRUITMENT 2022; ಒಟ್ಟು 710 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ

ವಿದ್ಯಾರ್ಥಿಯ ವಯೋಮಿತಿ ಸ್ನಾತಕಕ್ಕೆ 18 ರಿಂದ 21 ವರ್ಷ, ಸ್ನಾತಕೋತ್ತರ 21 ರಿಂದ 30 ವಷÜರ್‍ ಮಿತಿಯಲ್ಲಿರಬೇಕು. ವಿದ್ಯಾರ್ಥಿಗಳು ಆಧಾರ್‌ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆ ಹೊಂದಿರಬೇಕು. ಆಧಾರ್‌ ಕಾರ್ಡ್‌ನಲ್ಲಿರುವಂತೆ ವಿದ್ಯಾರ್ಥಿಗಳ ಹೆಸರು ಬ್ಯಾಂಕ್‌ ಖಾತೆಯ ಪುಸ್ತಕದಲ್ಲಿ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣದ ಪತ್ರದಲ್ಲಿಯೂ ಆಧಾರ್‌ ಕಾರ್ಡ್‌ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಬೇಕು. ವಿದ್ಯಾರ್ಥಿಯು ಶೈಕ್ಷಣಿಕ ಉದ್ದೇಶಕ್ಕೆ ಇತರೆ ಯಾವುದೇ ಬ್ಯಾಂಕ್‌ ಅಥವಾ ಆರ್ಥಿಕ ಸಂಸ್ಥೆ/ ಇಲಾಖೆಯಿಂದ ಸಾಲ ಪಡೆದಿರಬಾರದು. ಈ ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್‌ ಮುಖಾಂತರ ಗ್ರಾಮ ಒನ್‌, ಬೆಂಗಳೂರು ಒನ್‌, ಕರ್ನಾಟಕ ಒನ್‌ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ನ.30ರೊಳಗೆ ಅರ್ಜಿ ಸಲ್ಲಿಸಬಹುದು. ನಿಗಮದ ಸಹಾಯವಾಣಿ 080-29904268 ಗೆ ಅಥವಾ ಜಿಲ್ಲಾ ಕಛೇರಿಯ 08152-243566 ಗೆ ಸಂಪರ್ಕಿಸಬಹುದು.

Follow Us:
Download App:
  • android
  • ios