Asianet Suvarna News Asianet Suvarna News

IBPS Recruitment 2022; ಒಟ್ಟು 710 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ

ಐಬಿಪಿಎಸ್‌  ನೇಮಕಾತಿ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 710 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್ ಮೂಲಕ ಅರ್ಜಿ  ಸಲ್ಲಿಸಲು ನವೆಂಬರ್ 21, 2022 ರಂದು ಕೊನೆಯ ದಿನವಾಗಿದೆ.

IBPS Recruitment 2022 notification for Specialist Officer  posts gow
Author
First Published Nov 3, 2022, 6:25 PM IST

ಬೆಂಗಳೂರು (ನ.3): ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌ )  ನೇಮಕಾತಿ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 710 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದರಲ್ಲಿ ಬ್ಯಾಂಕ್ ಆಫ್ ಬರೋಡಾಗೆ 30 ಹುದ್ದೆಗಳು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 580 ಹುದ್ದೆಗಳು, ಪಂಜಾಬ್ ನ್ಯಾಷನಲ್ ಹುದ್ದೆಗೆ 100 ಹುದ್ದೆಗಳನ್ನು ಮೀಸಲಿಡಲಾಗಿದೆ.  ಕೇಂದ್ರ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ  ಸಲ್ಲಿಸಲು ನವೆಂಬರ್ 21, 2022 ರಂದು ಕೊನೆಯ ದಿನವಾಗಿದೆ.  ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://www.ibps.in/ ಗೆ ಭೇಟಿ ನೀಡಲು ಕೋರಲಾಗಿದೆ. 

ಒಟ್ಟು 710 ಹುದ್ದೆಗಳ ಮಾಹಿತಿ ಇಂತಿದೆ:
ಐ.ಟಿ. ಅಧಿಕಾರಿ: 44 ಹುದ್ದೆಗಳು
ಕೃಷಿ ಕ್ಷೇತ್ರಾಧಿಕಾರಿ:  516 ಹುದ್ದೆಗಳು
ರಾಜಭಾಷಾ ಅಧಿಕಾರಿ:  25 ಹುದ್ದೆಗಳು 
ಕಾನೂನು ಅಧಿಕಾರಿ: 10 ಹುದ್ದೆಗಳು
HR/ಪರ್ಸನಲ್ ಅಧಿಕಾರಿ: 15 ಹುದ್ದೆಗಳು 
ಮಾರ್ಕೆಟಿಂಗ್ ಅಧಿಕಾರಿ: 100 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 

-ಐ.ಟಿ. ಅಧಿಕಾರಿ ಹುದ್ದೆಗೆ ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಅಪ್ಲಿಕೇಷನ್ಸ್/ಮಾಹಿತಿ ತಂತ್ರಜ್ಞಾನ/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್, ಪದವಿ, ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಷನ್/ಇಲೆಕ್ಟ್ರಾನಿಕ್ಸ್ ಇನ್‌ಪುಟ್‌ಕಮ್ಯುನಿಕೇಷನ್/ಇಲೆಕ್ಟ್ರಾನಿಕ್ಸ್/ಇಲೆಕ್ಟ್ರಾನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಮಾಹಿತಿ ತಂತ್ರಜ್ಞಾನ/ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪದವಿ ಮಾಡಿರಬೇಕು. 

-ಕೃಷಿ ಕ್ಷೇತ್ರಾಧಿಕಾರಿ ಹುದ್ದೆಗೆ  ಕೃಷಿ/ತೋಟಗಾರಿಕೆ/ಪಶುಸಂಗೋಪನೆ/ಪಶುವೈದ್ಯಕೀಯ ವಿಜ್ಞಾನ/ಡೈರಿ ಸೈನ್ಸ್/ಮೀನುಗಾರಿಕೆ ವಿಜ್ಞಾನ/ಮೀನುಗಾರಿಕೆ/ಅಗ್ರಿಯಲ್ಲಿ ಪದವಿ. ಮಾರ್ಕೆಟಿಂಗ್ ಮತ್ತು ಸಹಕಾರ/ಸಹಕಾರ ಮತ್ತು ಬ್ಯಾಂಕಿಂಗ್/ಕೃಷಿ-ಅರಣ್ಯ/ಅರಣ್ಯ/ಕೃಷಿ ಜೈವಿಕ ತಂತ್ರಜ್ಞಾನ/ಆಹಾರ ವಿಜ್ಞಾನ/ಕೃಷಿ ವ್ಯವಹಾರ ನಿರ್ವಹಣೆ/ಆಹಾರ ತಂತ್ರಜ್ಞಾನ/ಡೈರಿ ತಂತ್ರಜ್ಞಾನ/ಕೃಷಿ ಇಂಜಿನಿಯರಿಂಗ್/ರೇಷ್ಮೆಗಾರಿಕೆ ವಿಷಯದಲ್ಲಿ ಪದವಿ ಮಾಡಿರಬೇಕು.

-ರಾಜಭಾಷಾ ಅಧಿಕಾರಿ ಹುದ್ದೆಗೆ ಹಿಂದಿ ಮತ್ತು ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

-ಕಾನೂನು ಅಧಿಕಾರಿ ಹುದ್ದೆಗೆ ಕಾನೂನು ವಿಷಯದಲ್ಲಿ ಪದವಿ ಅಥವಾ ಎಲ್‌ ಎಲ್‌ ಬಿ  ಮಾಡಿರಬೇಕು. 

-HR/ಪರ್ಸನಲ್ ಅಧಿಕಾರಿ ಹುದ್ದೆಗೆ  ಸಿಬ್ಬಂದಿ ನಿರ್ವಹಣೆ/ಕೈಗಾರಿಕಾ ಸಂಬಂಧಗಳು/HR/HRD/ಸಾಮಾಜಿಕ ಕೆಲಸ/ಕಾರ್ಮಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, ಪದವಿ ಮಾಡಿರಬೇಕು.

-ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗೆ ಮಾರ್ಕೆಟಿಂಗ್‌ನಲ್ಲಿ MMS, MBA, PGDBA, PGDBM, PGPM, PGDM ಪದವಿ ಮಾಡಿರಬೇಕು.

ವಯೋಮಿತಿ:  ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಆಯ್ಕೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ ಆಗಿರಬೇಕು. ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ. 

Bank of Baroda Recruitment 2022: ಖಾಲಿ ಇರುವ ವಿವಿಧ 60 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ: ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಆಯ್ಕೆ ನೇಮಕಾತಿ ಅಧಿಸೂಚನೆಯ ಪ್ರಕಾರ, SC/ST/PWBD ಅಭ್ಯರ್ಥಿಗಳು 175 ರೂ, ಇತರ ಅಭ್ಯರ್ಥಿಗಳು 850 ರೂ ಅರ್ಜಿ ಶುಲ್ಕ ಪಾವತಿಸಬೇಕು. 

ಬ್ಯಾಂಕ್‌ ಹುದ್ದೆಗಳೂ ಕನ್ನಡಿಗರಿಗೆ ಮರೀಚಿಕೆ..!

ಆಯ್ಕೆ ಪ್ರಕ್ರಿಯೆ:  ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
 

Follow Us:
Download App:
  • android
  • ios