Asianet Suvarna News Asianet Suvarna News

PNB Recruitment 2022; ಖಾಲಿ ಇರುವ ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಫೀಸರ್ ಮತ್ತು ಮ್ಯಾನೇಜರ್ ಸೇರಿ ಒಟ್ಟು 103  ಹುದ್ದೆಗಳಿಗೆ  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.    ಆಗಸ್ಟ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

PNB Recruitment 2022 notification for Officer and Manager posts gow
Author
bengaluru, First Published Aug 6, 2022, 6:00 PM IST

ಬೆಂಗಳೂರು (ಆ.6): ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಫೀಸರ್ ಮತ್ತು ಮ್ಯಾನೇಜರ್ ಸೇರಿ ಒಟ್ಟು 103  ಹುದ್ದೆಗಳಿಗೆ  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು  ಬ್ಯಾಂಕ್ ನ ಅಧಿಕೃತ ಇಲಾಖೆ pnbindia.in ನಲ್ಲಿ  ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 30, 2022. ಈ ನೇಮಕಾತಿ ಅಭಿಯಾನವು ಸಂಸ್ಥೆಯಲ್ಲಿ 103 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಕೆಳಗೆ ಓದಿ.   ಶೈಕ್ಷಣಿಕ ಅರ್ಹತೆ, ವಯೋಮತಿ, ಆಯ್ಕೆ ಪ್ರಕ್ರಿಯೆ ಅರ್ಜಿ ಶುಲ್ಕ.  ಮುಂತಾದ ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಬಹುದು.

ಹುದ್ದೆಯ ವಿವರಗಳು:
ಅಧಿಕಾರಿ (ಅಗ್ನಿಶಾಮಕ ಸುರಕ್ಷತೆ): 23 ಹುದ್ದೆಗಳು
ಮ್ಯಾನೇಜರ್ (ಸೆಕ್ಯುರಿಟಿ): 80 ಪೋಸ್ಟ್‌ಗಳು

ಶೈಕ್ಷಣಿಕ ಅರ್ಹತೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 
ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು   ಸೇನೆ/ನೌಕಾಪಡೆ/ವಾಯುಸೇನೆಯಲ್ಲಿ 5 ವರ್ಷಗಳ ನಿಯೋಜಿತ ಸೇವೆಯನ್ನು ಹೊಂದಿರುವ ಅಧಿಕಾರಿ ಅಥವಾ ಕನಿಷ್ಠ 05 ವರ್ಷಗಳ ಸೇವೆಯೊಂದಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಕಮಾಂಡೆಂಟ್ ಅಥವಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ಸಮಾನ ಶ್ರೇಣಿಗಿಂತ ಕಡಿಮೆಯಿಲ್ಲದ ಗೆಜೆಟೆಡ್ ಪೊಲೀಸ್ ಅಧಿಕಾರಿ ಆಗಿ ಸೇವೆ ಸಲ್ಲಿಸಿದವರಿಗೆ ಅವಕಾಶ.

ಫೈರ್ ಸೇಫ್ಟಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು B.E.(ಫೈರ್) ನ್ಯಾಷನಲ್ ಫೈರ್ ಸರ್ವಿಸ್ ಕಾಲೇಜ್ (NFSC) ನಾಗಪುರದಿಂದ ಕನಿಷ್ಠ 1-ವರ್ಷದ ಅನುಭವ. ಅಥವಾ AICTE/UGC ಅನುಮೋದಿಸಿದ ಕಾಲೇಜು/ವಿಶ್ವವಿದ್ಯಾಲಯದಿಂದ ಅಗ್ನಿಶಾಮಕ ತಂತ್ರಜ್ಞಾನ/ಫೈರ್ ಇಂಜಿನಿಯರಿಂಗ್/ಸುರಕ್ಷತೆ ಮತ್ತು ಅಗ್ನಿಶಾಮಕ ಇಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷದ ಪದವಿ (B.Tech/BE ಅಥವಾ ತತ್ಸಮಾನ) ಕನಿಷ್ಠ 1 ವರ್ಷದ ಅನುಭವ ಅಥವಾ ಯಾವುದೇ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಪದವಿ ಎಐಸಿಟಿಇ/ಯುಜಿಸಿ ಮತ್ತು ನಾಗ್ಪುರದ ನ್ಯಾಷನಲ್ ಫೈರ್ ಸರ್ವಿಸ್ ಕಾಲೇಜಿನಿಂದ ವಿಭಾಗೀಯ ಅಧಿಕಾರಿ ಕೋರ್ಸ್ ಜೊತೆಗೆ ಕನಿಷ್ಠ 1-ವರ್ಷದ ಅನುಭವ ಅಥವಾ ಎಐಸಿಟಿಇ/ಯುಜಿಸಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಫೈರ್ ಇಂಜಿನಿಯರ್ಸ್ ಇಂಡಿಯಾ/ಇನ್‌ಸ್ಟಿಟ್ಯೂಟ್ ಆಫ್ ಫೈರ್ ಇಂಜಿನಿಯರಿಂಗ್-ಯುಕೆ ಜೊತೆಗೆ ಪದವಿ ಕನಿಷ್ಠ 3 ವರ್ಷಗಳ ಅನುಭವ ಅಥವಾ AICTE/UGC ಯಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸಬ್ ಆಫೀಸರ್ ಕೋರ್ಸ್/ ನ್ಯಾಶನಲ್ ಫೈರ್ ಸರ್ವಿಸ್ ಕಾಲೇಜ್, ನಾಗ್ಪುರದಿಂದ ಸ್ಟೇಷನ್ ಆಫೀಸರ್ ಕೋರ್ಸ್, ಒಟ್ಟಾರೆಯಾಗಿ ಕನಿಷ್ಠ 60% ಅಂಕಗಳೊಂದಿಗೆ ಮತ್ತು 3 ವರ್ಷಗಳ ಅನುಭವ ಹೊಂದಿರಬೇಕು.

ವಯೋಮಿತಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  21 ರಿಂದ 35 ವರ್ಷದ ಒಳಗಿರಬೇಕು. 

930 ವಿವಿಧ ಹುದ್ದೆಗಳ ನೇಮಕಾತಿ:ಸಂದರ್ಶನಕ್ಕೆ ಆಹ್ವಾನಿಸಿದ BBMP

ಅರ್ಜಿ ಶುಲ್ಕ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/ST/PWBD  ಅಭ್ಯರ್ಥಿಗಳು 59 ರೂ ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ವರ್ಗದ ಅಭ್ಯರ್ಥಿಗಳು 1003 ಅರ್ಜಿ ಶುಲ್ಕ ಪಾವತಿಸಬೇಕು. 

IBPS PO 2022 ಪರೀಕ್ಷೆ ನೋಂದಣಿ ಪ್ರಾರಂಭ: ದಿನಾಂಕ, ಅರ್ಹತೆ, ವೇತನ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ನೋಡಿ..

ಆಯ್ಕೆ ಪ್ರಕ್ರಿಯೆಯು ಲಿಖಿತ/ಆನ್‌ಲೈನ್ ಪರೀಕ್ಷೆಯ ನಂತರ ಸಂದರ್ಶನದ ಬಳಿಕ ಅರ್ಜಿಗಳ ಶಾರ್ಟ್‌ಲಿಸ್ಟ್ ಅನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯು ತಲಾ 2 ಅಂಕಗಳ 50 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯ ಅವಧಿ 60 ನಿಮಿಷಗಳು ಮತ್ತು ಗರಿಷ್ಠ ಅಂಕಗಳು 100 ಆಗಿರುತ್ತದೆ.

Follow Us:
Download App:
  • android
  • ios