IBPS PO 2022 ಪರೀಕ್ಷೆ ನೋಂದಣಿ ಪ್ರಾರಂಭ: ದಿನಾಂಕ, ಅರ್ಹತೆ, ವೇತನ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ನೋಡಿ..
ಐಬಿಪಿಎಸ್ ಬ್ಯಾಂಕ್ ಪರೀಕ್ಷೆಗೆ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲಲ್ಇಸುವ ಕಡೆಯ ದಿನಾಂಕ, ಪರೀಕ್ಷೆಯ ದಿನಾಂಕ ಹಾಗೂ ವೇತನವನ್ನು ಇಲ್ಲಿ ನೋಡಿ..
ಸರ್ಕಾರಿ ಕೆಲಸ ಮಾಡಬೇಕು, ಬ್ಯಾಂಕ್‌ನಲ್ಲಿ ಕೆಲಸ ಮಾಡಲು ನಿಮಗೆ ಆಸೆ ಇದೆಯೇ..? ಹಾಗಾದ್ರೆ, ನಿಮಗೆ ಇಲ್ಲಿದೆ ಸದವಕಾಶ. ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಇಚ್ಛೆಯಿದ್ದಲ್ಲಿ ಇಂದೇ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆಯಿರಿ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection) (IBPS)ನ ಪ್ರೊಬೆಷನರಿ ಅಧಿಕಾರಿ (Probationary Officer) PO ಅಧಿಸೂಚನೆ 2022 ಅನ್ನು ಬಿಡುಗಡೆ ಮಾಡಿದೆ.
ಬ್ಯಾಂಕ್‌ಗಳಲ್ಲಿ ಪ್ರೊಬೆಷನರಿ ಅಧಿಕಾರಿ ಅಥವಾ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸಬಹುದು. IBPS PO 2022 ಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಅಪ್ಲಿಕೇಶನ್ ವಿಂಡೋ ಈಗ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 22, 2022. ಇನ್ನು, IBPS PO ಪರೀಕ್ಷೆಯ ದಿನಾಂಕ, ಸಂಬಳ, ಹುದ್ದೆಯ ವಿವರಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ಪರಿಶೀಲಿಸಿ.
ಪ್ಯೂನ್ ಹುದ್ದೆಗೆ ಸಿಗುತ್ತೆ ವರ್ಷಕ್ಕೆ 97 ಲಕ್ಷ ಸಂಬಳ: ಯಾರೆಲ್ಲ ಅರ್ಜಿ ಸಲ್ಲಿಸಬಹುದು ಗೊತ್ತಾ..?
IBPS PO ಅರ್ಹತೆ, ಸಂಬಳ, ಪರೀಕ್ಷೆಯ ದಿನಾಂಕಗಳು
ಪದವಿಯನ್ನು ಪೂರ್ಣಗೊಳಿಸಿದ 20 ರಿಂದ 30 ವರ್ಷ ವಯಸ್ಸಿನ ಭಾರತೀಯ ನಾಗರಿಕರು IBPS PO ನೇಮಕಾತಿ 2022 ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ವಯಸ್ಸಿನ ಮಿತಿಯನ್ನು ಆಗಸ್ಟ್ 1, 2022 ರಂತೆ ಲೆಕ್ಕಹಾಕಲಾಗುತ್ತದೆ. ಇನ್ನು, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆಗಸ್ಟ್ 22, 2022 ರೊಳಗೆ ತಮ್ಮ ಪದವಿಯನ್ನು ಪೂರ್ಣಗೊಳಿಸಿರಬೇಕು ಎಂದು ತಿಳಿದುಬಂದಿದೆ.
ಪರೀಕ್ಷೆ ಯಾವಾಗ..?
IBPS PO 2022 ಪರೀಕ್ಷೆ ನಡೆಯುವ ದಿನಾಂಕಗಳನ್ನು ಇನ್ನೂ ಹಂಚಿಕೊಂಡಿಲ್ಲ. ಆದರೆ, ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್‌ನಲ್ಲಿ ನಡೆಯಲಿದ್ದರೆ, ಇನ್ನು ಮುಖ್ಯ ಪರೀಕ್ಷೆ ಡಿಸೆಂಬರ್‌ನಲ್ಲಿ ನಡೆಸಲಾಗುವುದು ಮತ್ತು ಸಂದರ್ಶನಗಳನ್ನು ಜನವರಿ/ಫೆಬ್ರವರಿಯಲ್ಲಿ ನಿಗದಿಪಡಿಸಲಾಗುವುದು ಎನ್ನಲಾಗಿದೆ.
ಸಂಬಳ ಎಷ್ಟು..?
IBPS PO ಪರೀಕ್ಷೆ ಪಾಸಾದರೆ ನಿಮಗೆ ವೇತನ ಎಷ್ಟು ಸಿಗುತ್ತೆ ಎಂಬ ಬಗ್ಗೆ ಕುತೂಹಲ ಇರುತ್ತಲ್ವಾ.. ಹಾಗಾದ್ರೆ ಇಲ್ನೋಡಿ.. ಸಂಬಳದ ರಚನೆಯು ಬದಲಾಗುತ್ತದೆ ಮತ್ತು ವೇತನ ಶ್ರೇಣಿಯ ಪ್ರಕಾರ ಇದನ್ನು ಪರಿಷ್ಕರಿಸಲಾಗುತ್ತದೆ. ಪ್ರಸ್ತುತ, ಬ್ಯಾಂಕ್‌ನಲ್ಲಿ ಪ್ರೊಬೆಷನರಿ ಅಧಿಕಾರಿ (PO) ಆಗಿ ಸ್ಥಾನ ಪಡೆಯುವ ವ್ಯಕ್ತಿಯು ಸುಮಾರು 52,000 ರಿಂದ ರೂ. 57,000 (ಪೋಸ್ಟಿಂಗ್ ಸ್ಥಳವನ್ನು ಅವಲಂಬಿಸಿ) ರೂ.ಗಳ ಒಟ್ಟು ವೇತನವನ್ನು ನಿರೀಕ್ಷಿಸಬಹುದು. ಹಾಗೂ, ಮೂಲ ವೇತನವು 23,700 ರೂ.ನಿಂದ ಪ್ರಾರಂಭವಾಗುತ್ತದೆ.ಮತ್ತು 4 ಬಾರಿ ಇನ್ಕ್ರಿಮೆಂಟ್ ಪಡೆಯಬಹುದು.
IBPS PO 2022: ಅರ್ಜಿ ಸಲ್ಲಿಸುವುದು ಹೇಗೆ
ಇನ್ನು, ಈ ಬಾರಿಯ ಪರೀಕ್ಷೆಗೆ ಹಾಜರಾಗಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು IBPS PO 2022 ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ibps.in ವೆಬ್‌ಸೈಟ್‌ನಲ್ಲಿ ಮಾಡಬಹುದು. ಪರೀಕ್ಷೆಗಾಗಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು: https://ibpsonline.ibps.in/crppo12jul22/ .
ಇನ್ನು, ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಮತ್ತು ಸ್ವಯಂ ಘೋಷಣೆ ಫಾರ್ಮ್ ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ (IBPS ಅಧಿಸೂಚನೆಯಲ್ಲಿ ಲಭ್ಯವಿದೆ).
- ಛಾಯಾಚಿತ್ರ
- ಸಹಿ
- ಎಡ ಹೆಬ್ಬೆರಳಿನ ಗುರುತು
- ಕೈ ಬರಹದ ಘೋಷಣೆ (ದಾಖಲೆಗಳ ಸ್ಕ್ಯಾನಿಂಗ್ ಮತ್ತು ಅಪ್‌ಲೋಡ್‌ಗಾಗಿ ಮಾರ್ಗಸೂಚಿಗಳಲ್ಲಿ ನೀಡಲಾದ ವಿಶೇಷಣಗಳ ಪ್ರಕಾರ (ಅನುಬಂಧ III)
ರೇಷ್ಮೆ ವಿಸ್ತಾರಣಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟ : ಸಚಿವ ನಾರಾಯಣ ಗೌಡ
ನಿಮ್ಮ ಡಾಕ್ಯುಮೆಂಟೇಷನ್ ಪೂರ್ಣಗೊಳಿಸಿದ ನಂತರ ಮತ್ತು ಶುಲ್ಕವನ್ನು ಪಾವತಿಸಿದ ನಂತರ, ಅಪ್ಲಿಕೇಶನ್ ಪ್ರಕ್ರಿಯೆಯು ಕೊನೆಗೊಳ್ಳುತ್ತದೆ. ಶುಲ್ಕವಿಲ್ಲದೆ ಸ್ವೀಕರಿಸಿದ ಅರ್ಜಿಗಳನ್ನು ಸಾರಾಂಶವಾಗಿ ತಿರಸ್ಕರಿಸಲಾಗುತ್ತದೆ ಎಂಬುದನ್ನು ಅಭ್ಯರ್ಥಿಗಳು ನೆನಪಿನಲ್ಲಿಡಬೇಕು. ಅಲ್ಲದೆ, ಒಮ್ಮೆ ಸಲ್ಲಿಸಿದ ನಂತರ ಅರ್ಜಿಯಲ್ಲಿ ಯಾವುದೇ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡುವುದು ಪ್ರಮುಖವಾಗಿದೆ.