KCC Bank Dharwad Recruitment 2022: 52 ಅಟೆಂಡರ್ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಧಾರವಾಡ ಇಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 19 ಕೊನೆಯ ದಿನವಾಗಿದೆ.
ಬೆಂಗಳೂರು(ಜ.31): ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಧಾರವಾಡ (karnataka central co-operative bank ltd) ಇಲ್ಲಿ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 52 ಸಿಪಾಯಿ (Attenders) ಹುದ್ದೆಗಳು ಖಾಲಿ ಇದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 19 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಬ್ಯಾಂಕ್ ನ ಅಧಿಕೃತ ವೆಬ್‌ತಾಣ https://kccbankdharwad.in/ ಗೆ ಭೆಟಿ ನೀಡಲು ಕೋರಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಧಾರವಾಡ ಇಲ್ಲಿ ಖಾಲಿ ಇರುವ ಸಿಪಾಯಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣ, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ವಯೋಮಿತಿ: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಧಾರವಾಡ ಇಲ್ಲಿ ಖಾಲಿ ಇರುವ ಸಿಪಾಯಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ನಿಗದಿಪಡಿಸಲಾಗಿದೆ .
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ,
ಪ.ಜಾತಿ/ ಪ.ಪಂ/ ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ವೇತನ ವಿವರ: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಧಾರವಾಡ ಇಲ್ಲಿ ಖಾಲಿ ಇರುವ ಸಿಪಾಯಿ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 12,500 ರಿಂದ ರೂ. 24,000 ರೂ ವೇತನ ದೊರೆಯಲಿದೆ.
NAL Recruitment 2022: ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಅಪ್ರೆಂಟಿಸ್ ಟ್ರೇನಿಂಗ್ ಹುದ್ದೆ
ಆಯ್ಕೆ ವಿಧಾನ: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಧಾರವಾಡ ಇಲ್ಲಿ ಖಾಲಿ ಇರುವ ಸಿಪಾಯಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು
ಅರ್ಹತಾ ಪರೀಕ್ಷೆಯಲ್ಲಿ (ಎಸ್.ಎಸ್.ಎಲ್.ಸಿ) ಪಡೆದ ಅಂಕಗಳನ್ನು ಪರಿಗಣಿಸಿ, ಅಂಕಗಳ ಶೇಕಡಾವಾರು ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು,
ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇಕಡಾ 85ಕ್ಕಿಳಿಸಿ ಉಳಿದ ಪ್ರತಿಶತ 15 ಅಂಕಗಳನ್ನು ಸಂದರ್ಶನಕ್ಕೆ ನೀಡಲಾಗುವುದು.
ಸದರಿ ಅಂಕಗಳನ್ನು ಒಟ್ಟು ಸೇರಿಸಿ ರ್ಯಾಂಕಿಂಗ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ ನಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
ಭರ್ತಿ ಮಾಡಿದ ಅರ್ಜಿಗೆ ಅವಶ್ಯ ದಾಖಲೆಗಳನ್ನು ಹಾಗೂ ಅರ್ಜಿ ಶುಲ್ಕದ ಡಿ.ಡಿ.ಯನ್ನು ಲಗತ್ತಿಸಿ ಕಚೇರಿಗೆ ಖುದ್ದಾಗಿ ಹಾಜರಾಗಿ ಅಥವಾ ರೆಜಿಸ್ಟರ್ ಅಂಚೆ ಮೂಲಕ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು.
NHAI Recruitment 2022: ಯುವ ವೃತ್ತಿಪರ ಟೆಕ್ಕಿಗಳಿಗೆ ಉದ್ಯೋಗವಕಾಶ,
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ರೂ. 500, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ಅಂಗವಿಕಲ/ಮಾಜಿ ಸೈನಿಕ/ ವಿಧವಾ ಅಭ್ಯರ್ಥಿಗಳು ರೂ. 250 ಮೌಲ್ಯದ ಕ್ರಾಸ್ ಮಾಡಿದ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಅನ್ನು “ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಕೆ.ಸಿ.ಸಿ ಬ್ಯಾಂಕ್ ಲಿ.,ಧಾರವಾಡ” ಈ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,
ಕೆ.ಸಿ.ಸಿ ಬ್ಯಾಂಕ್ ಲಿ., ಪ್ರಧಾನ ಕಛೇರಿ, ಸುಭಾಸ ರೋಡ, ಧಾರವಾಡ – 580001
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು :
1) ಎಸ್.ಎಸ್.ಎಲ್.ಸಿ ಅಂಕ ಪಟ್ಟಿ
2) ಸ್ವ ಹಸ್ತಾಕ್ಷರವಿರುವ ಇತ್ತೀಚಿನ 3 ಭಾವಚಿತ್ರ
3) ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದ ಮತ್ತು ಗ್ರಾಮೀಣ ಅಭ್ಯರ್ಥಿ/ ಕನ್ನಡ ಮಾಧ್ಯಮ/ ಮಾಜಿ ಸೈನಿಕ ಅಭ್ಯರ್ಥಿ/ ಅಂಗವಿಕಲ ಅಭ್ಯರ್ಥಿ ಮೀಸಲಾತಿ ಸೌಲಭ್ಯ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಸರ್ಕಾರ ನಿಗದಿಪಡಿಸಿದ ನಮೂನೆಯಲ್ಲಿ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದ ಚಾಲ್ತಿ ಇರುವ ಪ್ರಮಾಣ ಪತ್ರಗಳ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಮತ್ತು ಮೂಲ ಪ್ರತಿಗಳನ್ನು ಸಂದರ್ಶನ / ಪರಿಶೀಲನೆ ಕಾಲಕ್ಕೆ ಸಲ್ಲಿಸತಕ್ಕದ್ದು.
4) ಅಭ್ಯರ್ಥಿಗಳು ತಮ್ಮ ವಿಳಾಸ ಸಮರ್ಥಿಸಲು ಅಗತ್ಯ ದಾಖಲಾತಿ ಸಲ್ಲಿಸಬೇಕು. (ಆಧಾರ್ ಕಾರ್ಡ್/ ವೋಟರ್ ಐಡಿ/ ಪ್ಯಾನ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್)