ರಾಜ್ಯದ ಪ್ರಮುಖ ಬ್ಯಾಂಕುಗಳಲ್ಲಿ 1,170 ಕಸ್ಟಮರ್ ಗುಮಾಸ್ತ ಹುದ್ದೆಗಳಿಗೆ IBPS ಅರ್ಜಿ ಆಹ್ವಾನಿಸಿದೆ. ಕೆನರಾ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ಹುದ್ದೆಗಳಿದ್ದು, ಕನ್ನಡ ಭಾಷಾ ಜ್ಞಾನ ಕಡ್ಡಾಯ.
ರಾಜ್ಯದ ಪ್ರಮುಖ 11 ಬ್ಯಾಂಕುಗಳಲ್ಲಿ ಒಟ್ಟು 1,170 ಕಸ್ಟಮರ್ ಗುಮಾಸ್ತ ಹುದ್ದೆಗಳಿಗೆ, ಹಾಗೂ ದೇಶದಾದ್ಯಂತ ಒಟ್ಟು 10,277 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಆಯೋಗ (IBPS) ತನ್ನ ಸಾಮಾನ್ಯ ನೇಮಕಾತಿ ಪ್ರಕ್ರಿಯೆ (CRP) ಅಧಿಸೂಚನೆಯನ್ನು ಪ್ರಕಟಿಸಿದೆ.
ಕರ್ನಾಟಕದಲ್ಲಿ, ಕೆನರಾ ಬ್ಯಾಂಕ್ ಅತಿ ಹೆಚ್ಚು 675 ಹುದ್ದೆಗಳನ್ನು ಹೊಂದಿದ್ದು, ಬ್ಯಾಂಕ್ ಆಫ್ ಬರೋಡಾ 253 ಹುದ್ದೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ರಾಜ್ಯಕ್ಕೆ ಕೇವಲ 457 ಹುದ್ದೆಗಳಿದ್ದರೆ, ಈ ಬಾರಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಕರ್ನಾಟಕದಲ್ಲಿ ಬ್ಯಾಂಕ್‌ವಾರು ಹುದ್ದೆಗಳ ವಿವರ
ಕೆನರಾ ಬ್ಯಾಂಕ್: 675
ಬ್ಯಾಂಕ್ ಆಫ್ ಬರೋಡಾ: 253
ಬ್ಯಾಂಕ್ ಆಫ್ ಇಂಡಿಯಾ: 45
ಬ್ಯಾಂಕ್ ಆಫ್ ಮಹಾರಾಷ್ಟ್ರ: 20
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 47
ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 44
ಪಂಜಾಬ್ ನ್ಯಾಷನಲ್ ಬ್ಯಾಂಕ್: 06
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್: 30
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 50
ಒಟ್ಟು: 1,170 ಹುದ್ದೆಗಳು
ಭಾಷಾ ಅರ್ಹತೆ
ಕರ್ನಾಟಕದ ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯ. ಅಭ್ಯರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯಬಹುದು. ಇತರ ರಾಜ್ಯದ ಅಭ್ಯರ್ಥಿಗಳು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿರುತ್ತದೆ.
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಕಂಪ್ಯೂಟರ್ ಜ್ಞಾನ ಕಡ್ಡಾಯ.
- ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ ಅಥವಾ ಪದವಿ/ಪಿಯು/ಪ್ರೌಢಶಾಲಾ ಮಟ್ಟದಲ್ಲಿ ಕಂಪ್ಯೂಟರ್ ವಿಷಯ ಓದಿರಬೇಕು.
- ವಯೋಮಿತಿ (02-07-1997 ಮತ್ತು 01-07-2005 ನಡುವೆ ಜನಿಸಿದವರು)
- ಕನಿಷ್ಠ: 20 ವರ್ಷ
- ಗರಿಷ್ಠ: 28 ವರ್ಷ
- SC/ST ಅಭ್ಯರ್ಥಿಗಳಿಗೆ 5 ವರ್ಷ ರಿಯಾಯಿತಿ
- OBC ಅಭ್ಯರ್ಥಿಗಳಿಗೆ 3 ವರ್ಷ ರಿಯಾಯಿತಿ
- ಅಂಗವಿಕಲರಿಗೆ 10 ವರ್ಷ ರಿಯಾಯಿತಿ
ವೇತನ ಶ್ರೇಣಿ
ಮಾಸಿಕ ಸಂಬಳ ₹24,050 – ₹54,480. ಜೊತೆಗೆ ಬ್ಯಾಂಕ್ ನಿಯಮಾನುಸಾರ ಇತರ ಭತ್ಯೆಗಳು ದೊರೆಯುತ್ತವೆ.
ಪರೀಕ್ಷಾ ಮಾದರಿ
ಪೂರ್ವಭಾವಿ ಪರೀಕ್ಷೆ (Prelims)
- ಇಂಗ್ಲಿಷ್ ಭಾಷೆ: 30 ಪ್ರಶ್ನೆಗಳು – 30 ಅಂಕ
- ನ್ಯೂಮೆರಿಕ್ ಆಪ್ಟಿಟ್ಯೂಡ್: 35 ಪ್ರಶ್ನೆಗಳು – 35 ಅಂಕ
- ರೀಸನಿಂಗ್ ಎಬಿಲಿಟಿ: 35 ಪ್ರಶ್ನೆಗಳು – 35 ಅಂಕ
- ಒಟ್ಟು: 100 ಪ್ರಶ್ನೆಗಳು – 100 ಅಂಕ – 60 ನಿಮಿಷ
ಮುಖ್ಯ ಪರೀಕ್ಷೆ (Mains)
- ಸಾಮಾನ್ಯ / ಆರ್ಥಿಕ ಜ್ಞಾನ: 40 ಪ್ರಶ್ನೆಗಳು – 50 ಅಂಕ
- ರೀಸನಿಂಗ್ ಎಬಿಲಿಟಿ: 40 ಪ್ರಶ್ನೆಗಳು – 60 ಅಂಕ
- ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್: 35 ಪ್ರಶ್ನೆಗಳು – 50 ಅಂಕ
- ಇಂಗ್ಲಿಷ್ ಭಾಷೆ: 35 ಪ್ರಶ್ನೆಗಳು – 40 ಅಂಕ
- ಒಟ್ಟು: 155 ಪ್ರಶ್ನೆಗಳು – 200 ಅಂಕ – 120 ನಿಮಿಷ
ತಪ್ಪು ಉತ್ತರಕ್ಕೆ 0.25 ಅಂಕ ಕಡಿತ. ಮೆರಿಟ್ ಪಟ್ಟಿ ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮಾತ್ರ ತಯಾರಿಸಲಾಗುತ್ತದೆ.
ಪರೀಕ್ಷಾ ಕೇಂದ್ರಗಳು (ಕರ್ನಾಟಕ)
ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ.
ಸಿಬಿಲ್ ಸ್ಕೋರ್ ನಿಯಮ
ಅಭ್ಯರ್ಥಿಗಳಿಗೆ ಉತ್ತಮ ಕ್ರೆಡಿಟ್ ಇತಿಹಾಸ ಕಡ್ಡಾಯ. ಸಿಬಿಲ್ ಸ್ಕೋರ್‌ನಲ್ಲಿ ವ್ಯತ್ಯಾಸ ಇದ್ದರೆ ಮರುಪಾವತಿ ಪ್ರಮಾಣಪತ್ರ ನೀಡಬೇಕು. ಇಲ್ಲದಿದ್ದರೆ ನೇಮಕಾತಿ ರದ್ದುಪಡಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ತಾಣ ibps.in ನಲ್ಲಿ ನೋಂದಣಿ ಮಾಡಿಕೊಳ್ಳಿ
- ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳ ಗುರುತು, ಸ್ವಯಂ ಘೋಷಣಾ ಪತ್ರ, ಅಂಕಪಟ್ಟಿ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿಯ ಪ್ರತಿಯನ್ನು ಸಂರಕ್ಷಿಸಿಕೊಳ್ಳಿ
ಅರ್ಜಿ ಶುಲ್ಕ
- SC/ST/ಅಂಗವಿಕಲರು/ಮಾಜಿ ಸೈನಿಕರು: ₹175
- ಇತರ ಅಭ್ಯರ್ಥಿಗಳು: ₹850
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೆ ದಿನ: ಆಗಸ್ಟ್ 21, 2025
- ಪೂರ್ವಭಾವಿ ಪರೀಕ್ಷೆ: ನವೆಂಬರ್ 2025
- ಮುಖ್ಯ ಪರೀಕ್ಷೆ: ನವೆಂಬರ್ 2025
- ಮೆರಿಟ್ ಪಟ್ಟಿ ಪ್ರಕಟಣೆ: ಮಾರ್ಚ್ 2026
