Asianet Suvarna News Asianet Suvarna News

Bank of Baroda recruitment 2022: ಮ್ಯಾನೇಜಿರಿಯಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 42 ಮ್ಯಾನೇಜಿರಿಯಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ. 

Bank of Baroda recruitment 2022 notification  for Managerial posts gow
Author
Bengaluru, First Published Feb 28, 2022, 11:13 PM IST

ಬೆಂಗಳೂರು(ಫೆ.28): ಬ್ಯಾಂಕ್ ಆಫ್ ಬರೋಡಾ (Bank of Baroda) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ವಿವಿಧ ವಿಭಾಗಗಳಲ್ಲಿ ಒಟ್ಟು 42 ಮ್ಯಾನೇಜಿರಿಯಲ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಆಫ್ ಬರೋಡಾದ ಫ್ರಾಡ್ ರಿಸ್ಕ್ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ ಇಲಾಖೆಗಳಿಗೆ (Fraud Risk and Risk Management Departments) ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಆನ್‌ಲೈನ್ ಮೂಲಕ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ತಾಣ bankofbaroda.in ಗೆ ಭೇಟಿ ನೀಡಬಹುದು. 

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಮ್ಯಾನೇಜಿರಿಯಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಚಾರ್ಟಡ್ ಅಕೌಂಟ್ (CA),MBA,PGDM,CS, ಕಂಪ್ಯೂಟರ್‌ ಸೈನ್ಸ್ ನಲ್ಲಿ ಸ್ನಾತಕೋತ್ತರ, ಗಣಿತ , ಹಣಕಾಸು, ಸ೦ಖ್ಯಾಶಾಸ್ತ್ರ ಓದಿರಬೇಕು.

ಅರ್ಜಿ ಶುಲ್ಕ: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಮ್ಯಾನೇಜಿರಿಯಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಸಾಮಾನ್ಯ,EWS/OBC ಅಭ್ಯರ್ಥಿಗಳು ₹600 ರೂ ಅರ್ಜಿ ಶುಲ್ಕ ಪಾವತಿಸಬೇಕು. SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳು  ₹100 ಅರ್ಜಿ ಶುಲ್ಕ ಪಾವತಿಸಬೇಕು.

ವಯೋಮಿತಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಮ್ಯಾನೇಜಿರಿಯಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ 27 ರಿಂದ 55 ವರ್ಷದ ಒಳಗಿರಬೇಕು.

CSIR-NCL RECRUITMENT 2022: ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನ

EXIM Bank ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಭಾರತೀಯ ಎಕ್ಸಿಮ್ ಬ್ಯಾಂಕ್ (Export-Import Bank of India - EXIM)ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 25 ಮ್ಯಾನೇಜ್‌ಮೆಂಟ್ ಟ್ರೈನಿ (Management Trainee) ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅನ್‌ಲೈನ್ ಮೂಲ ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು  ಎಕ್ಸಿಮ್ ಬ್ಯಾಂಕ್ ನ ಅಧಿಕೃತ ವೆಬ್‌ತಾಣ https://www.eximbankindia.in/ ಗೆ ಭೇಟಿ ನೀಡಿ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಎಕ್ಸಿಮ್ ಬ್ಯಾಂಕ್ (EXIM bank) ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಕನಿಷ್ಠ 60% ಪಡೆದಿರಬೇಕು. ಹಣಕಾಸು ವಿಷಯದಲ್ಲಿ MBA/ PGDBA ಮಾಡಿರಬೇಕು ಅಥವಾ CA (Chartered Accountant ) ಮಾಡಿರಬೇಕು.

EXIM Bank Recruitment 2022: ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಒಬಿಸಿ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ ಮತ್ತು SC/ST/PWD/EWS  ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ನಿಗದಿಪಡಿಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ಭಾರತೀಯ ಎಕ್ಸಿಮ್ ಬ್ಯಾಂಕ್  ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮೊದಲು ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್  https://www.eximbankindia.in/ ಗೆ ಭೇಟಿ ನೀಡಿ ರಿಜಿಸ್ಟ್ರೇಶನ್ ಗೆ ಈ ಲಿಂಕ್ ಕ್ಲಿಕ್ ಮಾಡಿ http://ibps.sifyitest.com/iebmtfeb22/ . ಆಸಕ್ತರು ಮಾರ್ಚ್ 14ರೊಳಗೆ ಅರ್ಜಿ ಸಲ್ಲಿಸಿ.

Follow Us:
Download App:
  • android
  • ios