CSIR-NCL Recruitment 2022: ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿಜ್ಞಾನಿ ಹುದ್ದೆಗೆ ಅರ್ಜಿ ಆಹ್ವಾನ
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ 20 ಹುದ್ದೆಗೆ ಅರ್ಜಿ ಆಹ್ವಾನ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನ , ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ.
ಬೆಂಗಳೂರು(ಫೆ.28): ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (Council of Scientific and Industrial Research - CSIR) ಅಧೀನದಲ್ಲಿರುವ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (National Chemical Laboratory - NCL), ಪುಣೆ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಆರಂಭಿಸಿದೆ. ವಿಜ್ಞಾನಿ, ಸೀನಿಯರ್ ವಿಜ್ಞಾನಿ, ಸೇರಿ ಒಟ್ಟು 20 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಪ್ರಕಾರವಾಗಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://recruit.ncl.res.in/ ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 20 ಹುದ್ದೆಯ ಮಾಹಿತಿ
ವಿಜ್ಞಾನಿಗಳು (Scientist) - 10 ಹುದ್ದೆಗಳು
ಹಿರಿಯ ವಿಜ್ಞಾನಿ (senior Scientist) - 4 ಹುದ್ದೆಗಳು
ಪ್ರಧಾನ ವಿಜ್ಞಾನಿ (Principle Scientist) - 6 ಹುದ್ದೆಗಳು
ಶೈಕ್ಷಣಿಕ ಮಾಹಿತಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ರಾಸಾಯನಿಕ ಎಂಜಿನಿಯರಿಂಗ್ (Ph.D.), ಕೆಮಿಕಲ್ ಟೆಕ್ನಾಲಜಿ /ಪಾಲಿಮರ್ ಇಂಜಿನಿಯರಿಂಗ್/ಮೆಟೀರಿಯಲ್ ಸೈನ್ಸ್/ಮೆಟೀರಿಯಲ್ ಇಂಜಿನಿಯರಿಂಗ್, ವಿದ್ಯಾರ್ಹತೆ ಪಡೆದಿರಬೇಕು.
ವೇತನ ವಿವರ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ದೊರೆಯಲಿದೆ.
ವಿಜ್ಞಾನಿಗಳು - 1,16,398 ರೂ.
ಹಿರಿಯ ವಿಜ್ಞಾನಿ - 1,33,936 ರೂ.
ಪ್ರಧಾನ ವಿಜ್ಞಾನಿ - 2,03,930 ರೂ.
EXIM BANK RECRUITMENT 2022: ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ.
ವಿಜ್ಞಾನಿಗಳು - ಗರಿಷ್ಠ 32 ವರ್ಷ
ಹಿರಿಯ ವಿಜ್ಞಾನಿ - ಗರಿಷ್ಠ 37 ವರ್ಷ
ಪ್ರಧಾನ ವಿಜ್ಞಾನಿ - ಗರಿಷ್ಠ 45 ವರ್ಷ
ಅರ್ಜಿ ಶುಲ್ಕ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಶುಲ್ಕ ಪಾವತಿಸಬೇಕಾದ ಬ್ಯಾಂಕ್ ವಿವರ:
State Bank of India
Account No: 30267257846
IFSC Code No: SBIN0003552
Branch Code: 3552
Branch Name: NCL Campus Branch, Pune
ಅರ್ಜಿ ಸಲ್ಲಿಸಬೇಕಾದ ವಿಳಾಸ:
Controller of Administration
CSIR - National Chemical Laboratory
Dr. Homi Bhabha Road
Pune – 411008 (Maharashtra) only.
IRCON Recruitment 2022: ಇಂಜಿನಿಯರಿಂಗ್ ಪದವೀಧರರನ್ನು ಆಹ್ವಾನಿಸಿದ ಭಾರತೀಯ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ