ಧರೆಗುರುಳಿದ ಹಂಪಿ ಸಾಲುಮಂಟಪ ಕಂಬಗಳು
ಹಂಪಿಯ ಸಾಲು ಮಂಟಪದ ಕಂಬಗಳು ಧರೆಗೆ ಉರುಳಿವೆ. ಈ ಹಿಂದೆ ದುಷ್ಕರ್ಮಿಗಳು ಹಂಪಿಯ ಕಂಬಗಳನ್ನು ಉರುಳಿಸಿದ್ದರು. ಇದೀಗ ಮಳೆಯಿಂದ ಮತ್ತೆ ಕಂಬಗಳು ಉರುಳಿವೆ.
ಬಳ್ಳಾರಿ [ಅ.15] : ಕಳೆದ ಹದಿನೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಶಿಥಿಲಗೊಂಡಿದ್ದ ವಿಶ್ವ ಪಾರಂಪರಿಕ ತಾಣ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಎದುರಿನ ಸಾಲು ಮಂಟಪದ 18 ಕಲ್ಲಿನ ಕಂಬಗಳು ಭಾನುವಾರ ಸಂಜೆ ನೆಲಕ್ಕುರುಳಿವೆ. ಈಗಾಗಲೇ ಶಿಥಿಲಾವಸ್ಥೆ ಇದ್ದುದರಿಂದ ಸಾಲು ಮಂಟಪದ ಬಳಿ ಯಾರೂ ಓಡಾಡುತ್ತಿರಲಿಲ್ಲವಾದದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಕೆಲವು ಕಂಬಗಳು ತುಂಡಾಗಿವೆ. ಸ್ಥಳಕ್ಕೆ ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ ಪಿ. ಕಾಳಿಮುತ್ತು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಎದುರಿನ ರಥಬೀದಿಯಲ್ಲಿ ಎರಡು ಬದಿಯಲ್ಲಿನ ಸುಮಾರು 30 ಅಡಿ ಉದ್ದದ ಸಾಲು ಮಂಟಪಗಳು ನೆಲಕ್ಕುರುಳಿದ್ದು, ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಪುರಾತತ್ವ ಉಪಾಧೀಕ್ಷಕ ಎಂ. ಕಾಳಿಮುತ್ತು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಂಪಿಯ ವಿವಿಧ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಹಂಪಿ ಗೋಪುರದ ನದಿ ಭಾಗದ ಸಾಲು ಮಂಟಪಗಳನ್ನು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.