ಬಳ್ಳಾರಿ: ಶಂಕಿತ ಡೆಂಘೀಗೆ ಬಾಲಕಿ ಸಾವು

ಶಂಕಿತ ಡೆಂಘೀ ಜ್ವರಕ್ಕೆ ಬಾಲಕಿ ಬಲಿ|ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ| ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವು| ಚರಂಡಿಗಳು ಸ್ವಚ್ಛತೆಯಿಲ್ಲದೆ ಮತ್ತು ಸಕಾಲಕ್ಕೆ ಫಾಗಿಂಗ್‌ ಮಾಡದೇ ಇರುವುದರಿಂದ ಅನಾಹುತಕ್ಕೆ ಕಾರಣ ಎಂದ ಸ್ಥಳೀಯರು ದೂರು|

Girl Dead for Dengue Fever in Mariyammanahalli in Ballari District

ಮರಿಯಮ್ಮನಹಳ್ಳಿ[ನ.7]: ಶಂಕಿತ ಡೆಂಘೀ ಜ್ವರಕ್ಕೆ ಬಾಲಕಿಯೊಬ್ಬಳು ಬಲಿಯಾದ ಘಟನೆ ಇಲ್ಲಿಗೆ ಸಮೀಪದ ಗರಗ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತ ಬಾಲಕಿಯನ್ನು ಗರಗ ಗ್ರಾಮದ ನಿವಾಸಿ ಜಿಲಾನ್ ಸಾಹೇಬ್ ಅವರ ಪುತ್ರಿ ಸಲ್ಮಾ (11) ಎಂದು ಗುರುತಿಸಲಾಗಿದೆ.

ಕಳೆದ 3-4 ದಿನಗಳಿಂದ ಶಂಕಿತ ಡೆಂಘೀ ಜ್ವರದಿಂದ ಬಾಲಕಿ ಬಳಲುತ್ತಿದ್ದಳು ಎನ್ನಲಾಗಿದೆ. ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ಶನಿವಾರ ದಾಖಲಾಗಿದ್ದಾರೆ. ಶನಿವಾರದಿಂದ ಮಂಗಳವಾರವರೆಗೂ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾಳೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆರೋಗ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮದಲ್ಲಿ ವಿವಿಧ ತಪಾಸಣೆಗಳನ್ನು ನಡೆಸಿದ್ದಾರೆ. ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಸೇರಿದಂತೆ  3-4 ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗರಗ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಚರಂಡಿಗಳು ಸ್ವಚ್ಛತೆಯಿಲ್ಲದೆ ಮತ್ತು ಸಕಾಲಕ್ಕೆ ಫಾಗಿಂಗ್‌ ಮಾಡದೇ ಇರುವುದರಿಂದ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
 

Latest Videos
Follow Us:
Download App:
  • android
  • ios