ಬಳ್ಳಾರಿ[ನ.2]: ವಿದ್ಯುತ್ ಶಾಕ್ ನಿಂದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಶನಿಉವಾರ ನಡೆದಿದೆ. ಮೃತ ಮಗುವನ್ನು ಗೌತಮ್ ಪೂಜಾರ್ (6) ಎಂದು ಗುರುತಿಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮನೆ ಮೇಲೆ ಬಟ್ಟೆ ಹಾಕುವಾಗ ಈ ಅವಘಡ ಸಂಭವಿಸಿದೆ. ಒಂದೇ ಕುಟುಂಬದ ಮೃತ ಬಾಲಕ, ಚಿಕ್ಕಮ್ಮ ಸುನಿತಾ, ಅಜ್ಜಿ ದುರ್ಗಮ್ಮ, ಅಜ್ಜ ಬಸಪ್ಪ ಎಲ್ಲರೂ ಸೇರಿ ಮನೆ ಮಾಳಿಗೆ ಮೇಲೆ ಬಟ್ಟೆ ಹಾಕುವಾಗ ಎಲ್ಲರಿಗೂ ವಿದ್ಯತ್ ಶಾಕ್ ತಗುಲಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪಿಸದ್ದಾನೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಳೆದ ತಿಂಗಳು ಕೂಡ ಇದೇ ರೀತಿ ಘಟನೆ ನಡೆದಿತ್ತು. ಆ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು.