ಪುರಸಭೆ ಚುನಾವಣೆ ಫಲಿತಾಂಶ: ಮಹಾಲಿಂಗಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು

ಮಹಾಲಿಂಗಪುರ ಪುರಸಭೆ ಉಪ ಚುನಾವಣೆ| 17 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಾಜು ಗೌಡಪ್ಪಗೋಳಗೆ ಗೆಲುವು  ರಾಜು ಗೌಡಪ್ಪಗೋಳ 139 ಮತಗಳ ಅಂತರದ ಗೆಲುವು|ಬಿಜೆಪಿಯ ಭೀಮಷಿ ಗೌಂಡಿಗೆ ಸೋಲು|

Mahalingapur Congress Candidate Won in Local Body Election

ಬಾಗಲಕೋಟೆ[ನ.14]: ಜಿಲ್ಲೆಯ ಮಹಾಲಿಂಗಪುರ ಪುರಸಭೆ ಉಪ ಚುನಾವಣೆಯಲ್ಲಿ 17 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಾಜು ಗೌಡಪ್ಪಗೋಳ ಅವರು ಗೆಲುವು ಸಾಧಿಸಿದ್ದಾರೆ.  ರಾಜು ಗೌಡಪ್ಪಗೋಳ ಅವರು 139 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. 

ರಾಜು ಗೌಡಪ್ಪಗೋಳ ಅವರ ಪ್ರತಿಸ್ಪರ್ಧಿ ಬಿಜೆಪಿಯ ಭೀಮಷಿ ಗೌಂಡಿ ಅವರು ಪರಾಭವ ಹೊಂದಿದ್ದಾರೆ. ಕಾಂಗ್ರೆಸ್ ನ ರಾಜು ಗೌಡಪ್ಪಗೋಳ ಅವರು 784 ಮತಗಳನ್ನು ಪಡೆದರೆ, ಬಿಜೆಪಿಯ ಭೀಮಷಿ ಗೌಂಡಿ ಅವರು 645 ಮತಗಳನ್ನು ಪಡೆದಿದ್ದಾರೆ. ಎರಡು ಮತಗಟ್ಟೆಗಳ ಒಟ್ಟು 1784 ಮತದಾರರ ಪೈಕಿ 1440 ಮತಗಳ ಚಲಾವಣೆ ಆಗಿದ್ದವು. ಬಿಜೆಪಿಯಿಂದ ಆಯ್ಕೆಯಾಗಿದ್ದ ಚೆನ್ನಪ್ಪ ಗೌಡಪ್ಪಗೋಳ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. 

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ : ಮತ ಎಣಿಕೆ ಆರಂಭ

ರಾಜ್ಯದ ಎರಡು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ತಾಲೂಕು ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಇವಿಎಂಗಳನ್ನು ಇಡಲಾಗಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆಯ ನೇತೃತ್ವವನ್ನು ವಹಿಸಿದ್ದಾರೆ. 

ಮದುವೆ, ಚುನಾವಣೆಯ ರಿಸಲ್ಟ್ ಒಂದೇ ದಿನ: ಮದುಮಗನಲ್ಲಿ ಹೆಚ್ಚಿದ ಟೆನ್ಷನ್!

ಎರಡು ಮಹಾನಗರ ಪಾಲಿಕೆಯ 105, ಆರು ನಗರ ಸಭೆಗಳ 194, ಮೂರು ಪುರಸಭೆಗಳ 69, 3 ಪಟ್ಟಣ ಪಂಚಾಯಿತಿಗಳ 50 ಸೇರಿದಂತೆ 418 ವಾರ್ಡ್‌ಗಳ ಪೈಕಿ 409 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ.
 

Latest Videos
Follow Us:
Download App:
  • android
  • ios