ನಾಮ ಇಡಲು ಬಂದಾಗ ‘ಬೇಡಪ್ಪ ಬೇಡ’ ಎಂದು ಹಿಂದೆ ಸರಿದ ಸಿದ್ದರಾಮಯ್ಯ!
ಮಾಜಿ ಸಿಎಂ ಸಿದ್ದರಾಮಯ್ಯಗೆ ಅಂದು ನಾಮ ಇಟ್ಟವರನ್ನ ಕಂಡ್ರೆ ಭಯ, ಇಂದು ಹಣೆಗೆ ನಾಮ ಇಟ್ಟುಕೊಳ್ಳೋಕೆ ಭಯ.. ಹೌದು ಇಂಥದ್ದೊಂದು ಪ್ರಕರಣ ನಡೆದು ಹೋಗಿದೆ.
ಬಾಗಲಕೋಟೆ[ಜೂ. 27] ಕುಂಕುಮ ನಾಮ ಇಡಲು ಬಂದ್ರೆ ಬೇಡಪ್ಪ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದಕ್ಕೆ ಸರಿದಿದ್ದಾರೆ.
ತಮ್ಮ ಸ್ವಕ್ಷೇತ್ರ ಬಾದಾಮಿಯ ಚಿಮ್ಮನಕಟ್ಟಿ ಗ್ರಾಮದಲ್ಲಿ ಸಿದ್ದರಾಮಯ್ಯ ಹಣೆಗೆ ಕುಂಕುಮ ಇಡುವುದನ್ನುನಿರಾಕರಿಸಿದ್ದಾರೆ.
Video:ಸಿದ್ದುಗೆ ಶೂ ಹಾಕಲು ಬಂದ ಮುಖಂಡ: ಏ…ಬಿಡಯ್ಯ…ಮಿಡಿಯಾದವ್ರು ಇದ್ದಾರೆ...
ರಸ್ತೆ ಕಾಮಗಾರಿಗೆ ಭೂಮಿಪೂಜೆ ವೇಳೆ ಸಿದ್ದುಗೂ ಕುಂಕುಮ ನಾಮ ಇಡಲು ಮುಂದಾಗಿದ್ದ ಗ್ರಾಮಸ್ಥರು ಮುಂದಾಗುತ್ತಿದ್ದರು. ಈ ಹಿಂದೆ ಸ್ವಕ್ಷೇತ್ರಕ್ಕೆ ಬಂದಾಗ ಕುಂಕುಮ ನಾಮ ಹಾಕಿದವರನ್ನ ಕಂಡ್ರೆ ಭಯ ಎಂದು ಸಿದ್ದರಾಮಯ್ಯ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು.