ಗ್ರೇಟರ್ ನೋಯ್ಡಾ(ಫೆ.09): ಚೀನಾದ ಆಟೋಮೊಬೈಲ್ ಕಂಪನಿಗಳು ಒಂದರ ಹಿಂದೆ ಒಂದರಂತೆ ಭಾರತಕ್ಕೆ ಕಾಲಿಡುತ್ತಿದೆ. ಎಂಜಿ ಮೋಟಾರ್ಸ್ ಯಶಸ್ಸಿನ ಬೆನ್ನಲ್ಲೇ ಗ್ರೇಟ್ ವಾಲ್ ಮೋಟಾರ್ಸ್ ಭಾರತದಲ್ಲಿ ಕಾರು ಅನಾವರಣ ಮಾಡಿದೆ. ಇದೀಗ ಚೀನಾದ ಹೈಮಾ ಆಟೋಮಬೈಲ್ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಹೈಮಾದ  ಬರ್ಡ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣವಾಗಿದೆ. 

 

ಇದನ್ನೂ ಓದಿ: ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು!

ಗ್ರೇಟರ್ ನೋಯ್ಡಾದ ಅತೀ ದೊಡ್ಡ ಆಟೋ ಎಕ್ಸ್ಪೋ ಮೋಟಾರು ಶೋನಲ್ಲಿ ಬರ್ಡ್ ಎಲೆಕ್ಟ್ರಿಕ್ ಕಾರು ಅನಾವರಣಗೊಂಡಿದೆ. ನೂತನ ಕಾರಿನ ಬೆಲೆ 10 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಕಂಪನಿ ಸೂಚನೆ ನೀಡಿದೆ. ಬರ್ಡ್ ಎಲೆಕ್ಟ್ರಿಕ್ ಸಂಪೂರ್ಣ ಚಾರ್ಜ್‌ಗೆ 200 ರಿಂದ 300 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 

ಇದನ್ನೂ ಓದಿ: ಕೊರೊನಾ ವೈರಸ್ ಬೆನ್ನಲ್ಲೇ ಚೀನಾಗೆ ಮತ್ತೊಂದು ಹೊಡೆತ; ಹೊಂಡಾ ಘಟಕ ಸ್ಥಗಿತ!

ಭಾರತದ ಕಂಡೀಷನ್‌ಗೆ ಅನುಗುಣವಾಗಿ ಕಾರು ನಿರ್ಮಾಣ ಮಾಡಲಾಗಿದೆ. ಲಿಥಿಯಂ ಐಯಾನ್ ಬ್ಯಾಟರಿ ಚಾಲಿತ ಈ ಕಾರಿನಲ್ಲಿ 20.42kWh ಮೋಟಾರ್ ಬಳಸಲಾಗಿದೆ. ನೂತನ ಕಾರಿನ ಗರಿಷ್ಠ ವೇಗ 120 KMPH. ಸುದೀರ್ಘ ಕಾಲ ಬ್ಯಾಟರಿ ಬಾಳಿಕೆ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ ಎಂದು ಕಂಪನಿ ಹೇಳಿದೆ.