ಮತ್ತೆ ಬಿಡುಗಡೆಯಾಗುತ್ತಾ ಭಾರತದ ಅಂಬಾಸಿಡರ್ ಕಾರು?
1958 ರಿಂದ 2014ರ ವರೆಗೆ ಭಾರತದ ಕಾರು ಮಾರುಕಟ್ಟೆಯಲ್ಲಿ ರಾಜನಂತೆ ಮೆರೆದಿದ್ದ ಅಂಬಾಸಿಡರ್ ಕಾರು ಮತ್ತೆ ರಸ್ತೆಗಳಿಯುತ್ತಾ? ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಬಳಸುತ್ತಿದ್ದ ಅಂಬಾಸಿಡರ್ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಾ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ನವದೆಹಲಿ(ಸೆ.15): ಭಾರತದಲ್ಲಿ ದಶಕಗಳ ಹಿಂದಿದ್ದ ಹಲವು ಕಾರುಗಳು ಹೊಸ ಅವತಾರದಲ್ಲಿ ಮತ್ತೆ ರಸ್ತೆಗಿಳಿದಿದೆ. ಇದೀಗ ಎಲ್ಲರ ಪ್ರಶ್ನೆ ಒಂದು ಕಾಲದಲ್ಲಿ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದ್ದ, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ವಾಹನವಾಗಿ ಗುರುತಿಸಿಕೊಂಡಿದ್ದ ಅಂಬಾಸಿಡರ್ ಮತ್ತೆ ರಸ್ತೆಗಳಿಯುತ್ತಾ ಅನ್ನೋ ಕುತೂಹಲ ಗರಿಗೆದರಿದೆ.
ಸಿಕೆ ಬಿರ್ಲಾ ಗ್ರೂಪ್ ಒಡೆತನದಲ್ಲಿದ್ದ ಹಿಂದೂಸ್ತಾನ್ ಮೋಟಾರ್ಸ್ ಕಂಪೆನಿಯಿಂದ 2017ರಲ್ಲಿ ಫ್ರಾನ್ಸ್‌ನ ಫ್ಯುಗಾಟ್ ಕಂಪೆನಿ ಅಂಬಾಸಿಡರ್ ಬ್ರಾಂಡ್ ಖರೀದಿಸಿದೆ. ಇಷ್ಟೇ ಅಲ್ಲ 2020ರ ವೇಳೆ ಭಾರತದಲ್ಲಿ ಫ್ಯುಗಾಟ್ ಕಂಪೆನಿ 3 ಕಾರುಗಳನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.
ಫ್ಯುಗಾಟ್ ಕಂಪೆನಿಯ 3 ಕಾರುಗಳಲ್ಲಿ ಒಂದು ಅಂಬಾಸಿಡರ್ ಕಾರು ಅನ್ನು ಮಾತುಗಳು ಕೇಳಿಬಂದಿದೆ. ಹಳೆ ಅಂಬಾಸಿಡರ್ ಕಾರಿಗೆ ಹೊಸ ಟಚ್ ನೀಡಿ, ಹೊಸ ರೂಪದಲ್ಲಿ ಬಿಡುಗಡೆ ಮಾಡಲು ಕಂಪೆನಿ ಆಸಕ್ತಿ ತೋರಿದೆ.
4 ಮೀಟರ್ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳನ್ನ ಫ್ಯುಗಾಟ್ ಕಂಪೆನಿಯ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳುವ ಕಾರಿನ ಬಿಡಿಭಾಗಗಳನ್ನ ಚೆನ್ನೈನಲ್ಲಿರುವ ಘಟಕದಲ್ಲಿ ಜೋಡಿಸಿ ಭಾರತದಲ್ಲಿ ಬಿಡುಗಡೆ ಮಾಡಲು ಫ್ಯುಗಾಟ್ ಕಂಪೆನಿ ನಿರ್ಧರಿಸಿದೆ.
ಫ್ಯುಗಾಟ್ ಕಂಪೆನಿಯಲ್ಲಿ ಅಂಬಾಸಿಡರ್ ಬ್ರ್ಯಾಂಡ್ 2020ರ ವೇಳೆ ಮಾರುಕಟ್ಟೆ ಪ್ರವೇಶಿಸೋ ಸಾಧ್ಯತೆ ಇದೆ. ಆದರೆ ಈ ಕುರಿತು ಕಂಪೆನಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.