ಬೆಂಗಳೂರು(ಜ.22): ತಂದೆ ತಾಯಿಗೆ ಸರ್ಪ್ರೈಸ್ ಗಿಫ್ಟ್ ನೀಡಿ ಅವರ ಮುಖದಲ್ಲಿನ ಸಂತಸದ ನಗುವಿನಲ್ಲಿನ ಆನಂದ ಇನ್ಯಾವುದರಲ್ಲೂ ಸಿಗಲ್ಲ. ಬೆಂಗಳೂರಿನ ಆರ್ಯನ್ ಗೌಡ ಪೋಷಕರಿಗೆ ಸರ್ಪ್ರೈಸ್ ಗಿಫ್ಟ್ ನೀಡಿ ಸಂಚಲನ ಮೂಡಿಸಿದ್ದಾರೆ. ತಂದೆಯ ಹುಟ್ಟುಹಬ್ಬಕ್ಕೆ ಆರ್ಯನ್ ಆಡಿ R8 ಕಾರು ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ: ಯಾವ ಬಣ್ಣದ ಕಾರು ಭಾರತೀಯರಿಗೆ ಇಷ್ಟ?-ಸಮೀಕ್ಷೆ ಬಹಿರಂಗ!

ಆಡಿ R8 ಕಾರಿನ ಬೆಲೆ 2.78 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ದುಬಾರಿ ಕಾರನ್ನ ತಂದೆಗೆ ಉಡುಗೊರೆಯಾಗಿ ನೀಡಿದ್ದಾರೆ. ಶೋ ರೂಂ ನಿಂದ ನೇರವಾಗಿ ಲಾರಿ ಮೂಲಕ ಮನೆಗೆ ಕಾರನ್ನ ತರಲಾಯಿತು. ಮನೆ ಮುಂದೆ ಕಾರು ನಿಲ್ಲಿಸಿ, ತಂದೆ ಹಾಗೂ ತಾಯಿಯ ಕಣ್ಣು ಮುಚ್ಚಿ ಅವರನ್ನ ಮನೆ ಮುಂಭಾಗಕ್ಕೆ ಕರೆತಂದು ಸರ್ಪ್ರೈಸ್ ನೀಡಿದ್ದಾರೆ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರು - ಪ್ರತಿ ಚಾರ್ಜ್‌ಗೆ 540 ಕೀ.ಮಿ ಪ್ರಯಾಣ

ಆಡಿ R8 ಕಾರು 5,204ಸಿಸಿ, V10,ಪೆಟ್ರೋಲ್ ಎಂಜಿನ್ ಹೊಂದಿದೆ. 602 bhp ಪವರ್ ಹಾಗೂ 560Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಈ ಕಾರಿನ ಗರಿಷ್ಠ ವೇಗ 320ಕಿ.ಮೀ ಪ್ರತಿ ಗಂಟೆಗೆ. 7 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.