ಡ್ರೈವ್ ಮಾಡುವಾಗ ಧೂಮಪಾನ ಮಾಡಬೇಡಿ- ಇಲ್ಲಿದೆ ಕಾರಣ!

ಭಾರತದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧವಾಗಿದೆ. ಇದೀಗ ಡ್ರೈವಿಂಗ್ ವೇಳೆ ಧೂಮಪಾನ ಮಾಡುವುದು ಕೂಡ ನಿಷೇಧ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಡ್ರೈವ್ ವೇಳೆ ಧೂಮಪಾನ ಮಾಡುವುದು, ಮೊಬೈಲ್ ಬಳಕೆಯಷ್ಟೇ ಅಪಯಕಾರಿ ಎಂದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
 

Smoking while driving dangerous as using the cell phone while driving

ಹೈದರಾಬಾದ್(ಫೆ.01): ಭಾರತದಲ್ಲಿ ಕಾರು, ಬೈಕ್ ಅಥವ ಯಾವುದೇ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು ನಿಷಿದ್ಧ. ಮೊಬೈಲ್ ಫೋನ್ ಬಳಕೆ ಮಾಡುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸಿದೆ. ಹೀಗಾಗಿ ವಾಹನ ಚಲಾಯಿಸುವಾಗ ಫೋನ್ ಬಳಿಸಿದರೆ ದಂಡ ಖಚಿತ. ಆದರೆ ಡ್ರೈವ್ ಮಾಡುವಾಗ ಧೂಮಪಾನ ಮಾಡುವುದು ಕೂಡ ಅಷ್ಟೇ ಅಪಾಯಕಾರಿ ಅನ್ನೋದು ಬಹಿರಂಗವಾಗಿದೆ.

ಇದನ್ನೂ ಓದಿ: ರಾಂಗ್ ಪಾರ್ಕಿಂಗ್- ಕಾರು ಚಾಲಕನಿಗೆ 16,565 ರೂಪಾಯಿ ದಂಡ!

ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದರಿಂದ ಚಾಲಕನ ಗಮನ, ಕಾರಿನ ಮೇಲೆ ನಿಯಂತ್ರಣ ತಪ್ಪುತ್ತದೆ. ಹೀಗಾಗಿ ಹೆಚ್ಚು ಅಪಘಾಚ ಸಂಭವಿಸುತ್ತದೆ. ಇದೇ ರೀತಿ ಡ್ರೈವಿಂಗ್ ವೇಳೆ ಧೂಮಪಾನ ಮಾಡುವುದರಿಂದ  ಗಮನ ಕೇಂದ್ರಿಕರಿಸುವುದು ಕಷ್ಟ. ಇದು ಕೂಡ ಮೊಬೈಲ್‌ನಷ್ಟೇ ಅಪಾಯಕಾರಿ ಅನ್ನೋ ಅಂಶ ಇದೀಗ ಬಯಲಾಗಿದೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೆ BMW ಬೈಕ್ ಗಿಫ್ಟ್ ನೀಡಿದ ಅಭಿಮಾನಿ!

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಯಮ ಬಾಹಿರ. ಹೀಗೆ ಮಾಡಿದರೆ ದಂಡ ಪಾವತಿಸಬೇಕಾಗುತ್ತೆ. ಆದರೆ ಕಾರು ಅಥವಾ ವಾಹನ ಚಲಾವಣೆ ವೇಳೆ ಧೂಮಪಾನ ಮಾಡುವುದನ್ನ ತಡೆಯಲು ಸೂಕ್ತ ಕಾನೂನುಗಳಿಲ್ಲ. ಇದಕ್ಕೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ ಇದೀಗ ಹೈದರಾಬಾದ್ ಪೊಲೀಸರು ಜಾಗೃತಿ ಮೂಡಿಸಲು ಮುಂಜಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟಾಟಾ ಹರಿಯರ್ ಕಾರಿನ ಆನ್ ರೋಡ್ ಬೆಲೆ ಎಷ್ಟು?

ಶಾಲಾ, ಕಾಲೇಜು ಹಾಗು ನಗರಗಳಲ್ಲಿ ಧೂಮಪಾನ ಮಾಡುತ್ತಾ ಡ್ರೈವಿಂಗ್ ಮಾಡುವುದರ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಸದ್ಯ ಧೂಮಪಾನ ಮಾಡಿ ಡ್ರೈವ್ ಮಾಡುತ್ತಿರುವರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಡ್ರೈವಿಂಗ್ ವೇಳೆ ಧೂಮಪಾನ ನಿಷೇಧ ಮಾಡೋ ಕಾನೂನು ಶೀಘ್ರದಲ್ಲೇ ಜಾರಿಯಾದರೆ ಉತ್ತಮ ಎಂದು ಹೈದರಾಬಾದ್ ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

Latest Videos
Follow Us:
Download App:
  • android
  • ios