Asianet Suvarna News Asianet Suvarna News

ಅಪ​ಘಾತವಾದ​ರೆ ವಿಮೆ ಕಂಪ​ನಿಯಿಂದಲೇ ಪರಿ​ಹಾರ

ನಾಲ್ಕು ಚಕ್ರದ ಸೂಕ್ತ ಲೈಟಿಂಗ್‌ ವ್ಯವಸ್ಥೆ, ಇಂಡಿಕೇಟರ್‌ ಲೈಟ್‌ (ಸೂಚಕಗಳ) ಪ್ರದರ್ಶನವಾಗದೆ ಮತ್ತೊಂದು ವಾಹನದೊಂದಿಗೆ ಅಪಘಾತ ಸಂಭವಿಸಿದರೆ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ವಿಮಾ ಕಂಪನಿಯೇ ಭರಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

Vehicle Accident insurance Company To Give Money snr
Author
Bengaluru, First Published Oct 5, 2020, 7:25 AM IST

ಬೆಂಗಳೂರು (ಅ.05): ನಾಲ್ಕು ಚಕ್ರದ ವಾಹನವು ರಾತ್ರಿ ವೇಳೆ ಸಂಚರಿಸುವಾಗ ಅಥವಾ ನಿಲುಗಡೆ ಮಾಡಿದಾಗ ವಾಹನಕ್ಕೆ ಸೂಕ್ತ ಲೈಟಿಂಗ್‌ ವ್ಯವಸ್ಥೆ, ಇಂಡಿಕೇಟರ್‌ ಲೈಟ್‌ (ಸೂಚಕಗಳ) ಪ್ರದರ್ಶನವಾಗದೆ ಮತ್ತೊಂದು ವಾಹನದೊಂದಿಗೆ ಅಪಘಾತ ಸಂಭವಿಸಿದರೆ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ವಿಮಾ ಕಂಪನಿಯೇ ಭರಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಲಾರಿ ಇಂಡಿಕೇಟರ್‌ ಲೈಟ್‌ ಪ್ರದರ್ಶಿಸದ ಪರಿಣಾಮ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಪ್ರಕರಣದಲ್ಲಿ ಹೈಕೋರ್ಟ್‌ ಈ ತೀರ್ಪು ನೀಡಿದೆ.

ಪ್ರಕರಣವೇನು?:

2006ರ ಆ.20ರಂದು ರಾತ್ರಿ 10 ಗಂಟೆ ವೇಳೆಯಲ್ಲಿ ಚಾಸಿ ಮೀರಿ ಮರದ ದಿಮ್ಮಿಗಳನ್ನು ಹೊತ್ತಿದ್ದ ಲಾರಿಯೊಂದು ರಸ್ತೆ ಮೇಲೆ ಎಡಭಾಗದಲ್ಲಿ ನಿಲುಗಡೆ ಮಾಡಿತ್ತು. ಆದರೆ, ಇಂಡಿಕೇಟರ್‌ ಲೈಟ್‌ ಹಾಕಿರಲಿಲ್ಲ. ಅದೇ ಮಾರ್ಗದಲ್ಲಿ ಬಂದ ದ್ವಿಚಕ್ರ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದ. ಇದರಿಂದ ಮೃತನ ಕುಟುಂಬ ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು.

ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತ ಆಗಮನ ಖಚಿತ ಪಡಿಸಿದ ಎಲನ್ ಮಸ್ಕ್! ...

ಅದರ ವಿಚಾರಣೆ ನಡೆಸಿದ ಜೇವರ್ಗಿಯ ನ್ಯಾಯಾಧಿಕರಣ, ಪ್ರಕರಣದಲ್ಲಿ ಲಾರಿ ಮಾಲೀಕನದೇ ತಪ್ಪು ಎಂದು ತೀರ್ಮಾನಿಸಿತು. ಅಲ್ಲದೆ, ಆ ಲಾರಿಗೆ ವಿಮಾ ಸೌಲಭ್ಯ ಕಲ್ಪಿಸಿದ್ದ ವಿಮಾ ಕಂಪನಿಯೇ ಮೃತನ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ವಾರ್ಷಿಕ ಶೇ.6ರಷ್ಟುಬಡ್ಡಿ ದರಲ್ಲಿ 4,09,600 ರು. ಪರಿಹಾರ ಕಲ್ಪಿಸುವಂತೆ ನಿರ್ದೇಶಿಸಿ 2011ರ ಜುಲೈ 22ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ, ಲಾರಿ ಚಾಲಕನದ್ದೇ ತಪ್ಪು ಇರುವ ಕಾರಣ ಅದಕ್ಕೆ ವಿಮಾ ಸೌಲಭ್ಯ ಒದಗಿಸಿದ ವಿಮಾ ಕಂಪನಿಯೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ತಿಳಿಸಿ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿತು.

Follow Us:
Download App:
  • android
  • ios