ಡಿಎಲ್, ಆರ್‌ಸಿ ಸಿಂಧುತ್ವ ಅವಧಿ ವಿಸ್ತರಣೆ
- ಮೋಟಾರು ವಾಹನದ ದಾಖಲೆಗಳ ಸಿಂಧುತ್ವಕ್ಕೆ ನಿಗದಿಪಡಿಸಿದ ಗಡುವು ವಿಸ್ತರಣೆ
- ಗಡುವನ್ನು ಸೆ.30ರ ವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ
ನವದೆಹಲಿ (ಜೂ.18): ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಮೋಟಾರು ವಾಹನದ ದಾಖಲೆಗಳಾದ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ (ಆರ್‌ಸಿ) ಮುಂತಾದ ಪರವಾನಗಿ ದಾಖಲೆಗಳ ಸಿಂಧುತ್ವಕ್ಕೆ ನಿಗದಿಪಡಿಸಿದ ಗಡುವನ್ನು ಕೇಂದ್ರ ಸರ್ಕಾರ ಸೆ.30ರ ವರೆಗೆ ವಿಸ್ತರಿಸಿದೆ.
ಕೇಂದ್ರ ನಿರ್ಧಾರದ ಎಫೆಕ್ಟ್: ಅಗ್ಗವಾಗಲಿವೆ ಇ-ಸ್ಕೂಟರ್, ಅಥರ್ ಎನರ್ಜಿ ಇಳಿಸಲಿದೆ ಬೆಲೆ! .
ಗುರುವಾರ ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ‘ವಾಹನಗಳ ಫಿಟ್ನೆಸ್, ಪರ್ಮಿಟ್, ಲೈಸನ್ಸ್, ರಿಜಿಸ್ಪ್ರೇಷನ್ ಇನ್ನಿತರೆ ದಾಖಲಾತಿಗಳ ಮಾನ್ಯತೆಯನ್ನು ಸೆ.30ರ ವರೆಗೆ ವಿಸ್ತರಿಸಲಾಗಿದೆ.
ಇದು ಫೆಬ್ರವರಿ 1ರಿಂದ ಅವಧಿ ಮೀರಿದ ಅಥವಾ ಸೆಪ್ಟೆಂಬರ್ 30, 2021ರ ಒಳಗೆ ಪರವಾನಗಿ ಮುಕ್ತಾಯಗೊಳ್ಳುವ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.