ಭಾರತದ ಗರಿಷ್ಠ ಸುರಕ್ಷತೆಯ ಕಾರು ಎಂದು ಗುರುತಿಸಿಕೊಂಡಿರುವ ಟಾಟಾ ನೆಕ್ಸಾನ್ ಕಾರು ಇದೀಗ ಪ್ರೇಮಿಗಳ ದಿನ ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಪ್ರೇಮಿಗಳನ್ನೂ ಮೋಡಿ ಮಾಡಿರುವ ಈ ಜಾಹೀರಾತು ಹೇಗಿದೆ? ಇಲ್ಲಿದೆ ವಿವರ.

ಮುಂಬೈ(ಫೆ.14): ಟಾಟಾ ನೆಕ್ಸಾನ್ SUV ಕಾರು ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಪ್ರೇಮಿಗಳ ದಿನ ಈ ಜಾಹೀರಾತು ಬಿಡುಗಡೆ ಮಾಡಿದ್ದು,ಪ್ರಣಯ ಹಕ್ಕಿಗಳನ್ನ ಮೋಡಿ ಮಾಡಿದೆ. ನಿಮ್ಮ ಪ್ರೀತಿಯ ಅತ್ಯುತ್ತಮ ರಕ್ಷಕ ಅನ್ನೋ ಹೊಸ ಜಾಹೀರಾತು ಟಾಟಾ ನೆಕ್ಸಾನ್ ಕಾರಿನ ಸುರಕ್ಷತೆ ಹಾಗೂ ಪ್ರೇಮಿಗಳಿಗೂ ಅನ್ವಯಿಸೋ ರೀತಿ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ:ಮಹೀಂದ್ರ XUV 300 ಬಿಡುಗಡೆ- ಕಡಿಮೆ ಬೆಲೆಯ SUV ಕಾರು!

ಟಾಟಾ ನೆಕ್ಸಾನ್ ಕಾರು ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ. NCAP ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ಪಡೆದುಕೊಂಡಿದೆ. ಈ ಮೂಲಕ 5 ಸ್ಟಾರ್ ಪಡೆದ ಭಾರತದ ಮೊದಲ ಕಾರು ಎಂದೇ ಗುರುತಿಸಿಕೊಂಡಿದೆ. ಇದೀಗ ಇದೇ ಸುರಕ್ಷತಾ ವಿಚಾರವನ್ನ ಇಟ್ಟುಕೊಂಡು ಪ್ರೇಮಿಗಳಿಗೂ ಅನ್ವಯಿಸೋ ರೀತಿ ಹೊಸ ಜಾಹೀರಾತು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಮಧ್ಯ ರಾತ್ರಿಯಲ್ಲೂ ಮಾರುತಿ ಕಾರು ಸರ್ವಿಸ್- 6 ನಗರಗಳಲ್ಲಿ 24*7 ಸರ್ವಿಸ್ ಆರಂಭ!

ಟಾಟಾ ನೆಕ್ಸಾನ್ ಕಾರು ಅತ್ಯಂತ ಕಡಿಮೆ ಬೆಲೆಯ SUV ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ನೆಕ್ಸಾನ್ ಬೆಲೆ 6.31 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. 1.2 ಟರ್ಬೋ ಪೆಟ್ರೋಲ್ ಎಂಜಿನ್ ಕಾರು, 108 Bhp-170 Nm ಉತ್ವಾದಿಸಲಿದೆ. 1.5 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಕಾರು 108 Bhp-260 Nm ಉತ್ಪಾದಿಸಲಿದೆ. 6 ಸ್ವೀಡ್ ಮ್ಯಾನ್ಯುಯೆಲ್ ಟ್ರಾನ್ಸಮಿಶನ್ ಹಾಗೂ AMT ಆಯ್ಕೆಯೂ ಲಭ್ಯವಿದೆ.