ಮಧ್ಯ ರಾತ್ರಿಯಲ್ಲೂ ಮಾರುತಿ ಕಾರು ಸರ್ವಿಸ್- 6 ನಗರಗಳಲ್ಲಿ 24*7 ಸರ್ವಿಸ್ ಆರಂಭ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Feb 2019, 6:02 PM IST
Maruti suzuki starts night car service facility in 6 cities
Highlights

ಮಾರುತಿ ಸುಜುಕಿ ಕಾರು ಸರ್ವಿಸ್ ಇದೀಗ ದಿನದ 24 ಗಂಟೆಯೂ ಲಭ್ಯವಿದೆ. ಮಧ್ಯ ರಾತ್ರಿಯಲ್ಲೂ ಕಾರು ಸರ್ವಿಸ್ ಮಾಡೋ ಸೌಲಭ್ಯವನ್ನು ಆರಂಭಿಸಿದೆ. ಕರ್ನಾಟಕದ 2 ಹಾಗೂ ದೇಶದ ಒಟ್ಟು 6 ನಗರಗಳಲ್ಲಿ ಈ ಸೇವೆ ಆರಂಭಗೊಳ್ಳುತ್ತಿದೆ.
 

ನವದೆಹಲಿ(ಫೆ.12): ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಇದೀಗ ಗ್ರಾಹಕರ ಅನೂಕೂಲಕ್ಕಾಗಿ ಸರ್ವಿಸ್ ಸಮಯವನ್ನ ವಿಸ್ತರಿಸಿದೆ. ಇದೀಗ ದಿನದ 24 ಗಂಟೆಯೂ ಮಾರುತಿ ಸುಜುಕಿ ಕಾರು ಸರ್ವಿಸ್ ಲಭ್ಯವಿದೆ. ವಿಶೇಷ ಅಂದರೆ ದೇಶದ ಪ್ರಮುಖ 6 ನಗರಗಳಲ್ಲಿ ಈ ಸೇವೆಯನ್ನು ಮಾರುತಿ ಸುಜುಕಿ ಆರಂಭಿಸುತ್ತಿದೆ.

ಇದನ್ನೂ ಓದಿ: 2019ರ ದೀಪಾವಳಿಗೆ ಬಜಾಜ್‌ನಿಂದ ಬಂಪರ್ ಕೊಡುಗೆ!

ಕರ್ನಾಟಕ 2 ನಗರಗಳಲ್ಲಿ ಈ ಸೇವೆ ಲಭ್ಯವಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಮಧ್ಯರಾತ್ರಿಯಲ್ಲೂ ಮಾರುತಿ ಸುಜುಕಿ ಕಾರು ಸರ್ವಿಸ್ ಸೇವೆ ಲಭ್ಯವಿದೆ. ಇನ್ನುಳಿದಂತೆ ನೋಯ್ಡಾ, ಗುರುಗಾಂವ್, ಭುವನೇಶ್ವರ್ ಹಾಗೂ ಉತ್ತರ ಪ್ರದೇಶದ ಸಾಹಿಬಾಬಾದ್ ನಗರಗಗಳಲ್ಲಿ ದಿನದ 24 ಗಂಟೆಯೂ ಕಾರು ಸರ್ವಿಸ್ ಸೇವೆ ಆರಂಭಗೊಂಡಿದೆ.

ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!

ಸದ್ಯ ರಾತ್ರಿ ವೇಳೆ ಪ್ರತಿ ಸರ್ವಿಸ್ ಕೇಂದ್ರಗಳಲ್ಲಿ ಕನಿಷ್ಠ 25 ಕಾರುಗಳ ಸರ್ವಿಸ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಪ್ರಕಾರ ಹೆಚ್ಚಾಗಲಿದೆ. ಐಟಿ ಉದ್ಯೋಗಿಗಳು ಹೆಚ್ಚಿರುವ ನಗರಗಳಲ್ಲಿ ಈ ಸರ್ವಿಸ್ ಆರಂಭಿಸಲಾಗಿದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡೋ ಉದ್ಯೋಗಿಗಳು ತಮ್ಮ ಕಾರು ನಿಗಧಿತ ಸಮಯದಲ್ಲಿ ಕಾರು ಸರ್ವಿಸ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ  ರಾತ್ರಿ ಸರ್ವಿಸ್ ಸೌಲಭ್ಯ ಆರಂಭಿಸುತ್ತಿದೆ ಎಂದು ಮಾರುತಿ ಹೇಳಿದೆ.
 

loader