ಉತ್ತರ ಪ್ರದೇಶ(ನ.02):  ಆನ್‌ಲೈನ್ ವಂಚನೆ ಪ್ರಕರಣಗಳು ಇದೀಗ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ.  ವಂಚಕರು ಹಲವು ದಾರಿಗಳ ಮೂಲಕ ವಂಚನೆ ನಡೆಸುತ್ತಲೇ ಇದ್ದಾರೆ. ಸೆಕೆಂಡ್ ಹ್ಯಾಂಡ್ ವಸ್ತು ಖರೀದಿಗಳ ತಾಣವಾಗಿರುವ OLXನಲ್ಲಿ ಮೂಲಕ ಉತ್ತರ ಪ್ರದೇಶದ ಮನೋಟಮ್ ತ್ಯಾಗಿ ಭಾರಿ ವಂಚನೆ ಮಾಡಿದ್ದಾರೆ.

ಉದ್ದೇಶಪೂರ್ವಕವಾಗಿ KSRTC ಬಸ್ ಪ್ರಯಾಣಕ್ಕೆ ಅಡ್ಡಿ; ಪುಂಡರಿಗೆ ಪೊಲೀಸ್ ತಕ್ಕ ಶಾಸ್ತಿ!

ತನ್ನಲ್ಲಿದ್ದ ಎರಡು ಕಾರುಗಳನ್ನು OLX ಮೂಲಕ 14 ಬಾರಿ ಮಾರಾಟ ಮಾಡಿದ್ದಾನೆ. 14 ಬಾರಿ ಹಣ ಸಂಪಾದಿಸಿದ್ದಾನೆ. ಖದೀಮ ತ್ಯಾಗಿ, ಸುಳ್ಳು ನಂಬರ್ ಪ್ಲೇಟ್ ಹಾಕಿ OLXನಲ್ಲಿ ಕಾರು ಮಾರಾಟ ಜಾಹೀರಾತು ಹಾಕುತ್ತಿದ್ದ. ಖರೀದಾರರ ಜೊತೆ ಮಾತುಕತೆ ನಡೆಸಿ ಕಾರು ಮಾರಾಟ ಮಾಡುತ್ತಿದ್ದ. ಆದರೆ ಮಾರಟಕ್ಕೂ ಮೊದಲು ಕಾರಿನಲ್ಲಿ GPS ಟ್ರಾಕರ್ ಅಳವಡಿಸುತ್ತಿದ್ದ.

ಕಾರಿನಲ್ಲಿ ಸೈಕಲ್ ಕೊಂಡೊಯ್ದರೆ ಬೀಳಲಿದೆ 5 ಸಾವಿರ ರೂ ಫೈನ್!.

ಬಳಿಕ ಕಾರಿನ ಒಂದು ಕೀ ಮಾತ್ರ ನೀಡುತ್ತಿದ್ದ. ಕಾರು ಖರೀದಿಸಿದ ಗ್ರಾಹಕರು ಎಲ್ಲೋ ಹೋದರೂ, ಎಲ್ಲಿ ಕಾರು ನಿಲ್ಲಿಸಿದರೂ ಜಿಪಿಎಸ್ ಮೂಲಕ ಖದೀಮ ತ್ಯಾಗಿ ಟ್ರಾಕ್ ಮಾಡುತ್ತಿದ್ದ. ಬಳಿಕ ರಾತ್ರಿ ವೇಳೆ ಮತ್ತೊಂದು ಕಿ ಬಳಸಿ ಕಾರನ್ನು ರಾತ್ರಿ ವೇಳೆ ಕದಿಯುತ್ತಿದ್ದ. ಅದೇ ಕಾರನ್ನು ನಂಬರ್ ಬದಲಾಯಿಸಿ ಮತ್ತೆ OLXನಲ್ಲಿ ಮಾರಾಟದ ಜಾಹೀರಾತು ಹಾಕುತ್ತಿದ್ದ. 

ಆಕರ್ಷಕ ಬೆಲೆ ಪ್ರಕಟಿಸಿದ ಕಾರಣ ಹೆಚ್ಚಿನವರು ಕಾರು ಖರೀದಿಗೆ ಮುಂದಾಗಿದ್ದಾರೆ. ಹೀಗೆ 14 ಬಾರಿ ಕಾರನ್ನು ಮಾರಾಟ ಮಾಡಿ ವಂಚಿಸಿದ್ದಾನೆ. ಆದರೆ 14ನೇ ಕಾರು ಮಾರಾಟದ ಬಳಿಕ ಈತನ ವಂಚನೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. 15ನೇ ಬಾರಿ ಕಾರು ಮಾರಾಟಕ್ಕೆ ಮುಂದಾದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ ಕಾರು ಖರೀದಿ ಸೋಗಿನಲ್ಲಿ ಬಂದ ಪೊಲೀಸರು  ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.