ಹೊಸ ಟ್ರಾಫಿಕ್ ರೂಲ್ಸ್ ಜಾರಿ; 51 ಪೊಲೀಸರಿಂದ ನಿಯಮ ಉಲ್ಲಂಘನೆ!

ದೇಶದಲ್ಲಿ ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಜಾರಿಯಾಗಿದೆ. ಹೀಗಾಗಿ ಎಚ್ಚರವಹಿಸವುದು ಅಗತ್ಯ. ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿರುವ ಬೆನ್ನಲ್ಲೇ ನಿಯಮ ಪಾಲಿಸಬೇಕಾದ ಪೊಲೀಸರೇ ನಿಯಮ ಉಲ್ಲಂಘಿಸಿದ್ದಾರೆ. 

Uttar Pradesh 51 police violate New traffic rule

ಮೀರತ್(ಸೆ.07): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬೆನ್ನಲ್ಲೇ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ. 23,000 ರೂಪಾಯಿ, 10,000 ರೂಪಾಯಿ, 50,000 ರೂಪಾಯಿ ಸೇರಿದಂತೆ ದುಬಾರಿ ದಂಡ ತೆತ್ತ ಘಟನೆಗಳೂ ನಡೆದಿದೆ. ಇನ್ನು ದಂಡದ ಮೊತ್ತ ಕೇಳಿ ಬೈಕನ್ನೇ ಸುಟ್ಟ ಪ್ರಕರಣವೂ ಸುದ್ದಿಯಾಗಿದೆ. ಹೊಸ ನಿಯಮ ಜಾರಿಯಾದ ಮೇಲೆ ಉತ್ತರ ಪ್ರದೇಶದ ಮೀರತ್‌ನಲ್ಲಿ 51 ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ: ಪೊಲೀಸಪ್ಪಗೇ 34000 ರೂ. ದಂಡ!

ನಿಯಮ ಉಲ್ಲಂಘಿಸಿದ 51 ಪೊಲೀಸರಿಗೆ ಚಲನ್ ನೀಡಿಲ್ಲ. ಆದರೆ ನಿಯಮ ಉಲ್ಲಂಘಿಸಿದ ಎಲ್ಲಾ ಪೊಲೀಸರನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ. ಇಷ್ಟೇ ಅಲ್ಲ ಪೊಲೀಸರಿಂದ ಒಂದು ಸಣ್ಣ ತಪ್ಪು ನಡೆದರೂ ಸಹಿಸುವುದಿಲ್ಲ. ಡಬಲ್ ಫೈನ್ ಕಟ್ಟಬೇಕಾಗುತ್ತೆ ಎಂದು ಮೀರತ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ಇಬ್ಬರು ಇನ್ಸ್‌ಪೆಕ್ಟರ್, 7 ಸಬ್-ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಒಟ್ಟು 51 ಮಂದಿ ನಿಯಮ ಉಲ್ಲಂಘಿಸಿದ್ದಾರೆ. ಸಾರ್ವಜನಿಕರಿಗೆ ಮಾತ್ರವಲ್ಲ ಪೊಲೀಸರಿಗೂ ಜಾಗೃತಿ ಅಗತ್ಯವಿದೆ. ಹೀಗಾಗಿ ಪ್ರಶಾಂತ್ ಕುಮಾರ್ ಸುತ್ತೋಲೆ ಹೊರಡಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ದ ನೂತನ ನಿಯಮದಂತೆ ದುಬಾರಿ ದಂಡ ವಿಧಿಸಲಾಗುವುದು ಎಂದಿದ್ದಾರೆ. ಮೀರತ್‌ನಲ್ಲಿ ಮಾತ್ರವಲ್ಲ, ರಾಂಚಿ ಸೇರಿದಂತೆ ದೇಶದ ಹಲೆವೆಡೆ ಪೊಲೀಸರೆ ನಿಯಮ ಉಲ್ಲಂಘಿಸಿ ಡಬಲ್ ಫೈನ್ ಕಟ್ಟಿದ್ದಾರೆ. 

ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios