ವಿವೇಕ್ ಶ್ರಿವತ್ಸ
ಮಾರ್ಕೆಟಿಂಗ್-ಪ್ಯಾಸೆಂಜರ್ ವಾಹನ ಬ್ಯುಸಿನೆಸ್ ಯುನಿಟ್ ಹೆಡ್, ಟಾಟಾ ಮೋಟಾರ್ಸ್

ನಗರಗಳಲ್ಲಿ ಮತ್ತು ಸಮಾಜದಲ್ಲಿ ನಾವು ಜೀವಿಸುವ ಮತ್ತು ಸಂಚರಿಸುವ ರೀತಿಯನ್ನು ಕೋವಿಡ್ 19 ಬದಲಿಸಿದೆ. ಹೊಸ ರೀತಿಯ ಬದುಕು ಉದಯಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಈ ವಿಶ್ವವೇ ಬಹಳ ಭಿನ್ನವಾಗಿರಲಿದೆ. ಕೋವಿಡ್ 19 ವಿರುದ್ಧ ಸಾಮಾಜಿಕ ಅಂತರವು ಈಗ ಅತ್ಯುತ್ತಮ ರಕ್ಷಣೆಯ ವಿಧಾನವಾಗಿದ್ದು, ವಿಶ್ವಾದ್ಯಂತ ಸರ್ಕಾರಗಳು ಸಾರ್ವಜನಿಕ ಸಾರಿಗೆ ಮತ್ತು ರೈಡ್ ಶೇರ್ ಸಂಸ್ಥೆಗಳು ಪ್ರತಿ ವಾಹನದಲ್ಲಿ ಒಯ್ಯಬಹುದಾದ ಪ್ರಯಾಣಿಕರ ಸಂಖ್ಯೆಯನ್ನು ಮಿತಗೊಳಿದೆ. ಲಾಕ್ಡೌನ್‍ನಲ್ಲಿ ಬಹಳಷ್ಟು ಜನರ ಸಂಚಾರವು ಸ್ಥಗಿತಗೊಂಡಿದ್ದು, ಪ್ರಯಾಣಿಸುವ ಬಗ್ಗೆ ಜನರು ಬಹಳ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಮತ್ತು ಸಂಪರ್ಕಗಳನ್ನು ಕಡಿಮೆಗೊಳಿಸಲು ಅನೇಕರು ತಮ್ಮ ಏರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಇದಲ್ಲದೆ, ಲಾಕ್ಡೌನ್ ಸಮಯದಲ್ಲಿ ಜನದಟ್ಟಣೆಯಿಂದ ದೂರವಿರಲು ದಿನದ ವಿವಿಧ ಸಮಯಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈಗ ಭಾರತವು ಅನ್ಲಾಕ್ ಆಗುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಉದ್ಯಮಗಳು ಮರು ಆರಂಭವಾಗುತ್ತಿದ್ದು, ಜನರು ತಮ್ಮ ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಹಿಂಜರಿಯುತ್ತಿದ್ದು, ತಮ್ಮ ವೈಯಕ್ತಿಕ ಸಾರಿಗೆ ವ್ಯವಸ್ಥೆಯತ್ತ ಒಲವು ತೋರಿದ್ದಾರೆ.

ಟಾಟಾ ನೆಕ್ಸಾನ್ ಮಾರಾಟ ದ್ವಿಗುಣ, ವಿದೇಶಿ ಕಾರುಗಳಿಗಿಲ್ಲ ಬೇಡಿಕೆ!

ಕಡಿಮೆಯಾಗುತ್ತಿರುವ  ಸಾರ್ವಜನಿಕ ಸಾರಿಗೆಯ ಆಯ್ಕೆಗಳು
ಕೋವಿಡ್ 19 ನ ಪ್ರಭಾವ ಮತ್ತು ಕಟ್ಟುನಿಟ್ಟಾದ ಸಾಮಾಜಿಕ ಅಂತರದ ನಿಯಮಗಳ ಪರಿಣಾಮವಾಗಿ, ಸಾರ್ವಜನಿಕ ಸಾರಿಗೆಯ ಮತ್ತು ಹಂಚಿಕೊಂಡ ಸಂಚಾರದ ಬಳಕೆ ಕಡಿಮೆಯಾಗಲಿದೆ.  ಸಮೀಕ್ಷೆಯ ಪ್ರಕಾರ US, ಚೀನಾ ಮತ್ತು ಪಶ್ಚಿಮ ಯೂರೋಪ್ ನಲ್ಲಿ ಸುಮಾರು 40% ರಿಂದ 60% ಜನರು ಸಾರ್ವಜನಿಕ ಸಾರಿಗೆಯನ್ನು ಕಡಿಮೆ ಬಳಸಿ, ಹೆಚ್ಚಾಗಿ ನಡೆಯುವ, ಬೈಕಿಂಗ್ ಮಾಡುವ ಅಥವಾ ತಮ್ಮ ಸ್ವಂತ ವಾಹನ ಓಡಿಸುವ ಆಯ್ಕೆ ಮಾಡಿದ್ದಾರೆ. ಹಾಗಾಗಿ, ವೈಯಕ್ತಿಕ ಸಾರಿಗೆಗೆ ಬೇಡಿಕೆ ಹೆಚ್ಚಾಗಲಿದೆ. ಇತರ ಹಂಚಿಕೊಂಡ ಸಂಚಾರಿ ಮಾದರಿಗಳಾದ ರೈಡ್ ಪಡೆಯುವುದು ಮತ್ತು ಕಾರ್ ಹಂಚಿಕೊಳ್ಳುವುದರ ಬಳಕೆ ಕಡಿಮೆಯಾದರೂ, ಸಾರ್ವಜನಿಕ ಸಂಚಾರದಷ್ಟು ಕಡಿಮೆಯಾಗುವುದಿಲ್ಲ ಎಂದು ಸಮೀಕ್ಷೆಯಿಂದ ತಿಳಿದಿದೆ.

ಟಾಟಾ ಹ್ಯಾರಿಯರ್ XT+ ವೇರಿಯೆಂಟ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!.

ವೈಯಕ್ತಿಕ ಸುರಕ್ಷತೆ ಮತ್ತು ಸಾಮಾಜಿಕ ಅಂತರದ ನಿಯಮ ಪಾಲನೆಯ ಅವಶ್ಯಕತೆಯಿಂದಾಗಿ ವೈಯಕ್ತಿಕ ಸಂಚಾರದ ಬೇಡಿಕೆ ಹೆಚ್ಚಾಗಲಿದೆ. ಹಿಂದೆ ಭಿನ್ನವಾದ ಕಾರಣಗಳಿಂದಾಗಿ ಇದು ಹೆಚ್ಚಾಗಿತ್ತಾದರೂ, ಕೋವಿಡ್ 19 ಲಾಕ್ ಡೌನ್ ನಂತರದಲ್ಲಿ ಸಾಮಾಜಿಕ ಅಂತರ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಅವಶ್ಯಕತೆಯಿಂದಾಗಿ ಈ ಸಂಖ್ಯೆಯು ಏರಲಿದೆ.

ಅತ್ಯಂತ ಸುರಕ್ಷಿತ ನೆಕ್ಸಾನ್ XM (S) ವೇರಿಯೆಂಟ್ ಲಾಂಚ್ ಮಾಡಿದ ಟಾಟಾ ಮೋಟಾರ್ಸ್!

ಮೇಲಾಗಿ, ಆರ್ಥಿಕ ಚಟುವಟಿಕೆಯ ಮೇಲೆ ಆದ ಪ್ರಭಾವದಿಂದಾಗಿ, ವೈಯಕ್ತಿಕ ಸಂಚಾರದ ಕ್ಷೇತ್ರದಲ್ಲಿ ಅಗ್ಗದ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದ್ದು, ಸೌಲಭ್ಯಗಳು ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ. ಮೊದಲ ಬಾರಿ ಕೊಳ್ಳುವವರ ಸಂಖ್ಯೆ ಮತ್ತು ಕೆಲಸಕ್ಕಾಗಿ ಕೊಳ್ಳುವವರ ಸಂಖ್ಯೆಯು ಹೆಚ್ಚಾಗಲಿದ್ದು, ಇವರು ವೈಯಕ್ತಿಕ ಸಾರಿಗೆಗೆ ಹೆಚ್ಚು ಒಲವು ತೋರಿಸಲಿದ್ದಾರೆ. ಇದಲ್ಲದೆ, ಕುಟುಂಬದಲ್ಲಿ ಎರಡನೇ ವಾಹನ ಕೊಳ್ಳಲು ಜನರು ಮುಂದಾಗಬಹುದು, ಇದು ಸಾಮಾನ್ಯವಾಗಿ ಒಂದು ಚಿಕ್ಕ ಕಾರ್ ಆಗಿರಲಿದೆ.

ಸುರಕ್ಷತೆ ಮೊದಲು ನೀತಿಯ ಅಳವಡಿಕೆ
ಬೇಗನೆ ಬದಲಾಗುತ್ತಿರುವ ಇಂದಿನ ವಾತಾವರಣದಲ್ಲಿ ಬೇಡಿಕೆ ಹೆಚ್ಚಿಸಲು, ವಾಹನ ಉತ್ಪಾದಕರು ತಮ್ಮ ಉತ್ಪನ್ನಗಳ ನ್ಯಾಯಬದ್ಧತೆಯನ್ನು ಬಲಪಡಿಸಿ, ಹೊಸ ಸಹಜತೆಗೆ ಹೊಂದಿಕೊಳ್ಳಬೇಕಿದೆ. ಸುರಕ್ಷತೆ ಮೊದಲು ಎಂಬ ನೀತಿಯನ್ನು ಅಳವಡಿಸಿಕೊಂಡು, ಅದನ್ನು ಜಾಹೀರುಗೊಳಿಸುವ ಮೂಲಕ ಸಂಸ್ಥೆಗಳು ಇದನ್ನು ಮಾಡಬಹುದು; ಇದರಿಂದ ಈ ಕಷ್ಟದ ಸಮಯದಲ್ಲಿ ತಮ್ಮ ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಜನರಿಗೆ ಸಕಾರಾತ್ಮಕ ಸಂದೇಶಗಳ ರವಾನೆಯಾಗಬೇಕು. ಅನೇಕ ಸಂಸ್ಥೆಗಳು ತಮ್ಮ ಡೀಲರ್ ಗಳು ತೆಗೆದುಕೊಳ್ಳುತ್ತಿರುವ ಸುರಕ್ಷತಾ ಕ್ರಮಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜಾಹೀರುಗೊಳಿಸುತ್ತಿದ್ದು, ತಮ್ಮ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಉತ್ಪಾದಕರು ಈಗ ಕೇವಲ ಉತ್ಪನ್ನಗಳನ್ನು ಮಾತ್ರ ಮಾರುವುದಿಲ್ಲ, ಆದರೆ ಬದಲಾಗುತ್ತಿರುವ ಗ್ರಾಹಕರ ಅವಶ್ಯಕತೆಗಳಿಗೆ

ತಮ್ಮ ಬ್ರ್ಯಾಂಡ್ ಗಳು ಹೇಗೆ ಪೂರೈಸುತ್ತಿದೆ ಮತ್ತು ತಮ್ಮ ಸಾಮಾನ್ಯ ಗ್ರಾಹಕರಿಗೆ ಹೇಗೆ ಸೇವೆ ಒದಗಿಸುತ್ತಿದೆ ಎಂದು ಎತ್ತಿತೋರಿಸಬೇಕು, ಇದರಿಂದ  ಗ್ರಾಹಕರನ್ನ ಉಳಿಸಿಕೊಳ್ಳಬಹುದು ಮತ್ತು ಬೇಡಿಕೆ ಹೆಚ್ಚಿಸಬಹುದು.

ತಮ್ಮ ಬ್ರ್ಯಾಂಡ್ ಗೆ ಡಿಜಿಟಲ್ ಫೂಟ್ ಪ್ರಿಂಟ್ ನ ಸೃಷ್ಟಿ
ಗ್ರಾಹಕರ ಅನುಕೂಲಕ್ಕೆ ಮತ್ತು ಬೇಡಿಕೆ ಹೆಚ್ಚಿಸಲು ಡಿಜಿಟಲೀಕರಣ ಮಾಡಲಾಗುತ್ತಿದೆ. ಆನ್ ಲೈನ್  ನೀತಿಯನ್ನು ಅಳವಡಿಸಿಕೊಂಡು ಕಾರುಗಳ ಮಾರಾಟ ಮಾಡುತ್ತಿವೆ. ಅನೇಕ ಭಾರತೀಯ ವಾಹನ ಬ್ರ್ಯಾಂಡ್‍ಗಳು (ಐಷಾರಾಮಿ ಮತ್ತು ವಾಣಿಜ್ಯ) ಅನೇಕ ರೀತಿಯ ಆನ್ಲೈನ್ ಮಾರಾಟ ವೇದಿಕೆಗಳನ್ನು ಆರಂಭಿಸಿದ್ದು, ಇಲ್ಲಿ ಗ್ರಾಹಕರು ತಮ್ಮ ಮನೆಯಲ್ಲಿ ಮತ್ತು ಸುರಕ್ಷತೆಯಲ್ಲಿ ತಮ್ಮ ಉತ್ಪನ್ನಗಳನ್ನು ಅನ್ವೇಷಿಸಿ, ಖರೀದಿಸಬಹುದು. ಇದರಿಂದ ಡೀಲರ್ ಮಳಿಗೆಯಲ್ಲಿ ಜನರ ದಟ್ಟಣೆಯನ್ನು ಕಡಿಮೆಗೊಳಿಸಿದ್ದು, ಅವರ ಸುರಕ್ಷತೆಯನ್ನು ಹೆಚ್ಚಿಸಿದೆ.

ಮುಂದಿನ ಮಾರ್ಗ
ಹೆಚ್ಚಿದ ಸುರಕ್ಷತೆಯ ಅವಶ್ಯಕತೆಯಿಂದಾಗಿ ವೈಯಕ್ತಿಕ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಆದರೆ. ತಮ್ಮ ನಗರಗಳ ಆರ್ಥಿಕ  ಜೀವನೋಪಾಯಕ್ಕಾಗಿ ಸುಸಜ್ಜಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಹೊಸ ಮತ್ತು ಹಂಚಿದ ಸಂಚಾರದ ಮಾದರಿಗಳು ಬಹಳ ಅವಶ್ಯಕ ಎಂದು ನಾಗರಿಕರು ಮತ್ತು ನೀತಿ ನಿರ್ಮಾತರು ಅರಿತುಕೊಂಡಿದ್ದಾರೆ. ಸಂಚಾರ ಮತ್ತು ಸಾರಿಗೆಯ ಮೂಲಭೂತ ಮೌಲ್ಯ ಪ್ರತಿಪಾದನೆ ಬದಲಾಗಿಲ್ಲ. ವ್ಯಾಪಾರಿ ವಿಧಾನಗಳು ಬದಲಾಗಬಹುದು, ಆದರೆ ಬಳಕೆದಾರರ ಆರ್ಥಿಕತೆ, ಪರಿಸರದ ಆರೊಗ್ಯ, ಮತ್ತು ಸಾಮಾನ್ಯ ಸಮಾಜದ ಹಿತಾಸಕ್ತಿಗಳು ವೈವಿಧ್ಯಮಯ ನಗರ ಸಂಚಾರಿ ಪರಿಸರವನ್ನು ಬಲಪಡಿಸುತ್ತದೆ. ಈ ಪಿಡುಗು ನಿಯಂತ್ರಣಕ್ಕೆ ಬಂದ ನಮ್ತರ ಭಾರತೀಯ ವಾಹನ ಉದ್ಯಮವು ಪರಿವರ್ತನೆಗೊಳ್ಳಲಿದ್ದು, ಹೆಚ್ಚು ಬಹು ಉಪಯೋಗಿ ಮತ್ತು ವೈವಿಧ್ಯಮಯವಾದ ನಗರ ಸಂಚಾರಿ ಪರಿಸರವ್ಯವಸ್ಥೆಗೆ ದಾರಿ ಮಾಡಿಕೊಡಲಿದೆ.