ರಸ್ತೆ ನಿಯಮ ಪಾಲಿಸದಿದ್ದರೆ ಏನಾಗುತ್ತೆ? ರೆಡ್ ಸಿಗ್ನಲ್ ದಾಟಿದರೆ ಸಮಸ್ಯೆ ಏನು? ಕೇಂದ್ರ ರಸ್ತೆ ಸಾರಿಗೆ ಇಲಾಖೆ ಅಂಕಿ ಅಂಶ ಬಿಡುಗಡೆ ಮಾಡಿದೆ. ಈ ಅಂಕಿ ಅಂಶ ಏನು ಹೇಳುತ್ತೆ? ಇಲ್ಲಿದೆ ವಿವರ.
ನವದೆಹಲಿ(ಫೆ.19): ರಸ್ತೆ ಸುರಕ್ಷತಾ ನಿಯಮ ಪಾಲನೆಯಲ್ಲಿ ಇತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತ ಹಿಂದಿದೆ. ಅದರಲ್ಲೂ ಸಿಗ್ನಲ್ ನಿಯಮ ಪಾಲನೆ ಮಾಡೋದರಲ್ಲಿ ನಾವು ಎಲ್ಲರಿಗಿಂತ ಹಿಂದೆ. ರೆಡ್ ಸಿಗ್ನಲ್ ಬಿದ್ದರೂ ದಾಟಿ ಮುಂದಕ್ಕೆ ಹೋಗುವ ಜಾಯಮಾನ ನಮ್ಮದು.
ಇದನ್ನೂ ಓದಿ: ಬಜಾಜ್ ಪಲ್ಸರ್ NS200 ಕಳ್ಳತನ- 1 ಗಂಟೆಯಲ್ಲಿ ಸಿಕ್ಕಿ ಬಿದ್ದ ಕಳ್ಳರು!
ಇದೀಗ ಕೇಂದ್ರ ರಸ್ತೆ ಸಾರಿಗ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶ, ರೆಡ್ ಸಿಗ್ನಲ್ ಯಾಕೆ ದಾಟಬಾರದು ಅನ್ನೋದನ್ನ ಬಹಿರಂಗಪಡಿಸಿದೆ. ಕಳೆದ ಒಂದು ವರ್ಷದಲ್ಲಿ ರೆಡ್ ಸಿಗ್ನಲ್ ದಾಟಿ ಮೃತಪಟ್ಟವರ ಸಂಖ್ಯೆ 6,324. ರೆಡ್ ಸಿಗ್ನಲ್ ಬಿದ್ದರೂ ನಿಲ್ಲಿಸದೆ ಮುಂದೆ ಚಲಿಸಿದರೆ ಅಪಾಯ ತಪ್ಪಿದಲ್ಲ ಅನ್ನೋದು ಈ ಅಂಕಿ ಅಂಶ ಬಹಿರಂಗ ಪಡಿಸಿದೆ.
ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನ ಪೊಲೀಸರು ಕೈಗೊಂಡಿದ್ದಾರೆ. ಹೀಗಾಗಿ ಇತರ ನಗರಗಳಿಗೆ ಹೋಲಿಸಿದೆರ ಬೆಂಗಳೂರು ನಿಯಮ ಪಾಲನೆ ಸಮಾಧಾನಕರ. ಆದರೆ ವಾಹನ ಚಾಲಕರು, ಸವಾರರು ಇನ್ನಷ್ಟು ಜಾಗೃತರಾಗಬೇಕು. ರಸ್ತೆ ಸರುಕ್ಷತಾ ನಿಯಮ ಪಾಲಿಸಬೇಕು.
