ಡೀಸೆಲ್ -ಗ್ಯಾಸ್ ವಾಹನ ನಿಷೇಧಕ್ಕೆ ಯುಕೆ ಸರ್ಕಾರ ಆಗ್ರಹ!
ಪರಿಸರ ಮಾಲಿನ್ಯ ತಡೆಗಟ್ಟಲು ಇದೀಗ ಡೀಸೆಲ್ ಹಾಗೂ ಗ್ಯಾಸ್ ವಾಹನ ನಿಷೇಧಿಸಲು ಪ್ರಯತ್ನಗಳು ನಡೆಯುತ್ತಿದೆ. ಇಷ್ಟೇ ಅಲ್ಲ ಡೀಸೆಲ್ ಹಾಗೂ ಗ್ಯಾಸ್ ವಾಹನ ನಿಷೇಧಿಸಿ ಎಲೆಕ್ಟ್ರಿಕಲ್ ಕಾರು ಬಳಕೆ ಮಾಡಲು ಮುಂದಾಗಿದೆ.
ಲಂಡನ್(ಅ.23): ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಎಲ್ಲಾ ದೇಶಗಳು ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಭಾರತ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಹಲವು ಶಿಫಾರಸುಗಳನ್ನ ಮಾಡಿದೆ. ಇದೀಗ ಯುನೈಟೆಡ್ ಕಿಂಗ್‌ಡಮ್(UK) ಸರ್ಕಾರ ಡೀಸೆಲ್ ಹಾಗೂ ಗ್ಯಾಸ್ ವಾಹನಗಳನ್ನ ನಿಷೇಧಿಸಲು ಮುಂದಾಗಿದೆ.
2032ರ ಒಳಗೆ ಯುಕೆನ ಎಲ್ಲಾ ಡೀಸೆಲ್ ಹಾಗೂ ಗ್ಯಾಸ್ ವಾಹನಗಳನ್ನ ನಿಷೇಧಿಸಲು ಆಗ್ರಹಿಸಿದೆ. ಈ ಮೂಲಕ ಪರಿಸರ ಮಾಲಿನ್ಯವನ್ನ ತಡೆಗಟ್ಟು ಮುಂದಾಗಿದೆ. ಈ ಮೊದಲು 2040ಕ್ಕೆ ಡೀಸೆಲ್,ಗ್ಯಾಸ್ ವಾಹನ ನಿಷೇಧಿಸಲು ಮುಂದಾಗಿತ್ತು. ಇದೀಗ 8 ವರ್ಷಗಳನ್ನ ಕಡಿತಗೊಳಿಸಿ 2032ರ ಅಂತಿಮ ಗಡುವು ನೀಡಿದೆ.
2032ರೊಳಗೆ ಎಲಕ್ಟ್ರಿಕಲ್ ಬಳಕೆ ಮಾಡಲು ಇಂಗ್ಲೆಂಡ್ ಯೋಜನೆ ರೂಪಿಸಿದೆ. ಹೀಗಾಗಿ ಶೀಘ್ರದಲ್ಲೇ ಯುನೈಟೆಡ್ ಕಿಂಗ್‌ಡಮ್ ಪರಿಸರ ಮಾಲಿನ್ಯ ತಡೆಗಟ್ಟಲು ಎಲ್ಲಾ ಕ್ರಮಗಳನ್ನ ಕೈಗೊಳ್ಳಲಿದೆ. ಅತೀ ಹೆಚ್ಚು ಮಾಲಿನ್ಯವಾಗುತ್ತಿರುವ ಡೀಸೆಲ್ ವಾಹನಗಳಿಗೆ ನಿಷೇಧವೇ ಇದಕ್ಕೆ ಸೂಕ್ತ ಪರಿಹಾರ ಎಂದು ಹೇಳಿದೆ.